ಇಂಡೋ-ಪಾಕ್ ಗಡಿಯಲ್ಲಿ ಸೈನಿಕರೊಂದಿಗೆ ಯೋಗ ಪ್ರದರ್ಶಿಸಿದ ಶ್ವಾನಗಳು

Public TV
1 Min Read
Army Dogs Yoga

ಶ್ರೀನಗರ: ಜಮ್ಮುವಿನ ಇಂಡೋ-ಪಾಕ್ ಗಡಿ ನಿಯಂತ್ರಣ ರೇಖೆಯ (LOC) ಬಳಿ ಸೈನಿಕರೊಂದಿಗೆ, ಎರಡು ಶ್ವಾನಗಳು (Army Dogs) ಯೋಗಾಸನದಲ್ಲಿ ಪಾಲ್ಗೊಂಡಿರುವ ವೀಡಿಯೋವನ್ನು ಭದ್ರತಾ ಪಡೆ ಎಕ್ಸ್‌ನಲ್ಲಿ ಹಂಚಿಕೊಂಡಿದೆ.

ಭದ್ರತಾ ಪಡೆಗಳು (Indian Army) ಬಿಡುಗಡೆ ಮಾಡಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆಗಿರುವ ವೀಡಿಯೋದಲ್ಲಿ ಸಶಸ್ತ್ರ ಪಡೆಗಳ ಭಾಗವಾಗಿರುವ ಶ್ವಾನಗಳು, ಸೈನಿಕರು ಯೋಗ ಮಾಡುವುದನ್ನು ಅವುಗಳು ಸಹ ಯೋಗ ಮ್ಯಾಟ್ ಮೇಲೆ ಅನುಸರಿಸಿವೆ. ಸಾಮಾನ್ಯವಾಗಿ ಗಸ್ತು, ಟ್ರ್ಯಾಕಿಂಗ್, ರಕ್ಷಣಾ ಕಾರ್ಯಾಚರಣೆ ಹಾಗೂ ಸ್ಫೋಟಕಗಳ ಪತ್ತೆಯಂತಹ ಕಾರ್ಯಗಳನ್ನು ನಿರ್ವಹಿಸುವ ಶ್ವಾನಗಳು ಇಂದು ಯೋಗ ಮ್ಯಾಟ್‍ನಲ್ಲಿ ತಮ್ಮ ಚಾಣಾಕ್ಷತೆಯನ್ನು ತೋರಿಸಿರುವುದು ಅಚ್ಚರಿ ಮೂಡಿಸಿದೆ. ಇದನ್ನೂ ಓದಿ: Photos Gallery: ಯೋಗ ದಿನಾಚರಣೆ ವೇಳೆ ಕಾಶ್ಮೀರಿ ಮಹಿಳೆಯರೊಂದಿಗೆ ಮೋದಿ ಸೆಲ್ಫಿ!

ವೀಡಿಯೋದಲ್ಲಿ ಎರಡು ಲ್ಯಾಬ್ರಡಾರ್ ಶ್ವಾನಗಳು ಮುಂಭಾಗದ ಸೈನಿಕರ ಸಾಲಿನಲ್ಲಿ ತರಬೇತುದಾರರ ಸೂಚನೆಗಳನ್ನು ಅನುಸರಿಸಿವೆ. ಅಲ್ಲದೇ ಸೈನಿಕರು ಯೋಗ ಭಂಗಿಗಳನ್ನು ಬದಲಿಸಿದಂತೆ ಅವುಗಳು ಸಹ ಅನುಕರಿಸಿವೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‍ಡಿಆರ್‍ಎಫ್) ಬಿಡುಗಡೆ ಮಾಡಿದ ಮತ್ತೊಂದು ವೀಡಿಯೋದಲ್ಲಿ, ಶ್ವಾನವಾದ ಜಿಮ್ಮಿ, ಪಡೆಯ 13ನೇ ಬೆಟಾಲಿಯನ್‍ನೊಂದಿಗೆ ಯೋಗ ಪ್ರದರ್ಶಿದೆ. ಈ ವೇಳೆ ತನ್ನದೇ ಆದ ಯೋಗದ ಮ್ಯಾಟ್ ಮೇಲೆ ಕುಳಿತು, ತರಬೇತುದಾರರ ಸೂಚನೆಯಂತೆ ಜಿಮ್ಮಿ ಯೋಗ ಪ್ರದರ್ಶನ ಮಾಡಿದೆ. ಇದನ್ನೂ ಓದಿ: ಕಾಶ್ಮೀರದ ದಾಲ್‌ ಸರೋವರ ದಡದಲ್ಲಿ ‘ನಮೋ’ ಯೋಗ – PHOTOS ನೋಡಿ

Share This Article