ನವದೆಹಲಿ: ಕರ್ತವ್ಯದಲ್ಲಿದ್ದಾಗ ಹುತಾತ್ಮರಾದ ಅಗ್ನಿವೀರರಿಗೆ (Agniveer) ಸರ್ಕಾರದಿಂದ ಯಾವುದೇ ಹಣ ಸಿಗುವುದಿಲ್ಲ ಎಂದು ಆರೋಪಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಆರೋಪಕ್ಕೆ ಭಾರತೀಯ ಸೇನೆ (Indian Army) ಪ್ರತಿಕ್ರಿಯೆ ನೀಡಿದೆ.
ಅಗ್ನಿವೀರರಿಗೆ ಒಟ್ಟು 1.13 ಕೋಟಿ ರೂ. ಪರಿಹಾರ ಸಿಗುತ್ತದೆ ಎಂದು ತಿಳಿಸುವ ಮೂಲಕ ರಾಹುಲ್ ಗಾಂಧಿ ಮಾಡಿರುವ ಆರೋಪ ಸುಳ್ಳು ಎಂದು ಸೇನೆ ಪರೋಕ್ಷವಾಗಿ ಹೇಳಿದೆ. ಇದನ್ನೂ ಓದಿ: ರೇವಣ್ಣ ಆಪ್ತನ ಕಿಡ್ನ್ಯಾಪ್ ಯತ್ನ ಕೇಸ್ – ಇನ್ಸ್‌ಪೆಕ್ಟರ್‌ಗೆ ಭೂಗತ ಪಾತಕಿ ಲಿಂಕ್
#Agniveer (Operator) Gawate Akshay Laxman laid down his life in the line of duty in #Siachen. #IndianArmy stands firm with the bereaved family in this hour of grief.
In view of conflicting messages on social media regarding financial assistance to the Next of Kin of the… pic.twitter.com/46SVfMbcjl
— ADG PI – INDIAN ARMY (@adgpi) October 22, 2023
ರಾಹುಲ್ ಗಾಂಧಿ ಹೇಳಿದ್ದೇನು?
ಸಿಯಾಚಿನ್‌ನಲ್ಲಿ ಹುತಾತ್ಮರಾದ ಅಗ್ನಿವೀರ್ ಅಕ್ಷಯ್ ಲಕ್ಷ್ಮಣ್‌ಗೆ ಸಂತಾಪ ಸೂಚಿಸಿದ್ದ ರಾಹುಲ್ ಗಾಂಧಿ, ಒಬ್ಬ ಯೋಧ ಹುತಾತ್ಮರಾಗಿದ್ದಾರೆ. ಆದರೆ ಅವರಿಗೆ ಯಾವುದೇ ಗ್ರಾಚ್ಯೂಟಿ ಇಲ್ಲ. ಮಿಲಿಟರಿ ಸೌಲಭ್ಯಗಳಿಲ್ಲ, ಕುಟುಂಬಕ್ಕೆ ಪಿಂಚಣಿ ಇಲ್ಲ ಎಂದು ಆರೋಪಿಸಿದ್ದರು. ಅಷ್ಟೇ ಅಲ್ಲದೇ ಭಾರತದ ವೀರರನ್ನು ಅಪಮಾನಿಸುವ ಯೋಜನೆ ಎಂದು ಕಿಡಿಕಾರಿದರು.
ಎಡಿಜಿಪಿ ಇಂಡಿಯನ್ ಆರ್ಮಿ (ADGP Indian Army) ಎಕ್ಸ್‌ನಲ್ಲಿ ಕರ್ತವ್ಯದಲ್ಲಿರುವ ಅಗ್ನಿವೀರರಿಗೆ ಸರ್ಕಾರದಿಂದ ಸಿಗುವ ಪರಿಹಾರದ ವಿವರಗಳನ್ನು ಪಟ್ಟಿ ಮಾಡಿ ತಿಳಿಸಿದೆ.
ಕಾರಕೋರಂ ಶ್ರೇಣಿಯಲ್ಲಿ ಸುಮಾರು 20,000 ಅಡಿ ಎತ್ತರದಲ್ಲಿರುವ ಸಿಯಾಚಿನ್ ಹಿಮನದಿಯು ವಿಶ್ವದ ಅತಿ ಎತ್ತರದ ಮಿಲಿಟರಿ ವಲಯವಾಗಿದೆ. ಅಲ್ಲಿ ಸೈನಿಕರು ಹಿಮಪಾತ ಮತ್ತು ಶೀತ ಗಾಳಿಯೊಂದಿಗೆ ಹೋರಾಡಬೇಕಿದೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]