ಶ್ರೀನಗರ: ಭಾರತದ ಗಡಿ ನಿಯಂತ್ರಣ ರೇಖೆಯಲ್ಲಿ ಉಗ್ರರು ನುಸುಳಲು ಮುಂದುವರಿಸಿದರೆ ಅದಕ್ಕೆ ತಕ್ಕ ಉತ್ತರ ಕೊಡುತ್ತೇವೆ, ಶವಗಳನ್ನು ವಾಪಸ್ ಪಡೆಯಲು ಸಿದ್ಧರಾಗಿರಿ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕಾರ್ಗಿಲ್ ವಿಜಯ್ ದಿವಸ್ ಹಿನ್ನೆಲೆ ಮಾಧ್ಯಮಗಳ ಜೊತೆ ಮಾತನಾಡಿದ ರಾವತ್ ಅವರು, ಯಾವುದೇ ದುಸ್ಸಾಹಸ ಮಾಡಲು ಪ್ರಯತ್ನಿಸದಿರಿ, ಭಾರತದ ಗಡಿಯೊಳಗೆ ನುಗ್ಗಲು ಪ್ರಯತ್ನಿಸಿದರೆ ಅದಕ್ಕೆ ತಕ್ಕ ಉತ್ತರ ಕೊಡಲು ಗಡಿಯಲ್ಲಿ ನಮ್ಮ ಸೇನೆ ಸದಾ ತಯಾರಾಗಿರುತ್ತದೆ. ಒಂದು ವೇಳೆ ದುಸ್ಸಾಹಸ ಮಾಡಿ, ಗಡಿಯಲ್ಲಿ ನುಸುಳಲು ಯತ್ನಿಸಿದರೆ, ಶವಗಳನ್ನು ಎಣಿಸಿ, ವಾಪಸ್ ನಿಮ್ಮ ದೇಶಕ್ಕೆ ತೆಗೆದುಕೊಂಡು ಹೋಗಬೇಕಾಗುತ್ತೆ ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಇದನ್ನೂ ಓದಿ:ವಿಶೇಷ ಫೋಟೋ, ವಿಡಿಯೋದೊಂದಿಗೆ ಕಾರ್ಗಿಲ್ ವಿಜಯೋತ್ಸವ ನೆನೆದ ಮೋದಿ
Advertisement
Advertisement
ಪುಲ್ವಾಮ ದಾಳಿಗೆ ನಾವು ಹೊಣೆಯಲ್ಲ ಎಂಬ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆಗೆ ತಿರುಗೇಟು ನೀಡಿ, ನಮಗೆ ಸತ್ಯ ಏನೆಂದು ತಿಳಿದಿದೆ. ಹೀಗಾಗಿ ನಾವು ಈ ರೀತಿ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ. ನಿಜಾಂಶ ಏನೆಂದು ನಮಗೂ ಹಾಗೂ ನಮ್ಮ ಸಂಸ್ಥೆಗೂ ತಿಳಿದಿದೆ. ಪುಲ್ವಾಮದಲ್ಲಿ ಏನಾಯ್ತು ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಮ್ಮ ಗುಪ್ತಚರ ಇಲಾಖೆ ಕಲೆಹಾಕಿದೆ. ಇಷ್ಟನ್ನು ಮಾತ್ರ ನಾನು ಹೇಳಲು ಇಚ್ಛಿಸುತ್ತೇನೆ ಎಂದು ಮಾತಿನ ಚಾಟಿ ಬೀಸಿದ್ದಾರೆ.
Advertisement
ನೆರೆಯ ಪಾಕಿಸ್ತಾನಕ್ಕೆ ಭಾರತೀಯ ಸೇನೆಯ ಮುಖ್ಯಸ್ಥರು ಎಚ್ಚರಿಕೆ ನೀಡುತ್ತಿರುವುದು ಇದೇ ಮೊದಲ ಬಾರಿ ಅಲ್ಲ. ಈ ಹಿಂದೆ ಕೂಡ ಭಾರತದ ಜೊತಗೆ ದುಸ್ಸಾಹಸ ಮೆರೆಯಲು ಬರಬೇಡಿ ಎಂದು ಎಚ್ಚರಿಕೆ ನೀಡಿದ್ದರು. ಅಲ್ಲದೆ ಪಾಕ್ ತನ್ನ ಹದ್ದುಮೀರಿದರೆ ಅದಕ್ಕೆ ತಕ್ಕ ಪ್ರತ್ಯತ್ತರವನ್ನು ನೀಡಬೇಕಾಗುತ್ತದೆ ಎಂದು ತಿಳಿಸಿದ್ದರು. ಇದನ್ನೂ ಓದಿ:ಕಾರ್ಗಿಲ್ ವಿಜಯೋತ್ಸವ – ದೇಶದೆಲ್ಲೆಡೆ ಮುಗಿಲು ಮುಟ್ಟಲಿದೆ ಸಂಭ್ರಮ
Advertisement
ನಾವು ಎಚ್ಚರಿಕೆ ನೀಡಿದ್ದರೂ ಪಾಕಿಸ್ತಾನ ಸೈನ್ಯ ಭಾರತದ ಮೇಲೆ ದ್ವೇಷಕಾರುತ್ತ ಯುದ್ಧ, ದಾಳಿಗಳನ್ನು ಮಾಡುವ ಕುತಂತ್ರ ಮಾಡುತ್ತಲೇ ಇದೆ. ಉಗ್ರರಿಗೆ ನೆಲೆ ನೀಡಿ, ಭಾರತದೊಳಗೆ ನುಸುಳಲು, ದುಷ್ಕೃತ್ಯ ಮೆರೆಯಲು ಸಹಾಯ ಮಾಡುತ್ತಿದೆ. ಆದ್ರೆ ನಮ್ಮ ಯೋಧರು ದೇಶ ರಕ್ಷಣೆಗಾಗಿ ದೃಢವಾಗಿ ನಿಂತಿದ್ದಾರೆ. ದುಸ್ಸಾಹಸಕ್ಕೆ ತಕ್ಕ ತಿರುಗೇಟು ನೀಡುವುದಂತೂ ನಿಶ್ಚಿತ, ಅದರಲ್ಲಿ ಯಾವುದೇ ಅನುಮಾನ ಬೇಡ. ಸದ್ಯ ಗಡಿಯಲ್ಲಿ ಯಾರು ಒಳನುಸುಳಲು ಪ್ರಯತ್ನಿಸಿಲ್ಲ. ಎಲ್ಲ ಸರಿಯಾಗಿದೆ ಎಂದು ಹೇಳಿದ್ದಾರೆ.
ದೇಶದೆಲ್ಲೆಡೆ 20ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಗುತ್ತಿದೆ. ಈ ಹೆಮ್ಮೆಯ ದಿನವನ್ನು ನೆನೆದು ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರು ಯೋಧರ ಶೌರ್ಯ, ತ್ಯಾಗ, ಬಲಿದಾನಕ್ಕೆ ಸಲಂ ಎಂದಿದ್ದಾರೆ.