ನವದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಓಕೆ) ಪಾಕಿಸ್ತಾನ ಸರ್ಕಾರದ ನಿಯಂತ್ರಣದಲ್ಲಿ ಇಲ್ಲ. ಅದು ಉಗ್ರರ ನಿಯಂತ್ರಣದಲ್ಲಿದ್ದು ಅದನ್ನು ವಶಕ್ಕೆ ಪಡೆಯುತ್ತೇವೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಗುಡುಗಿದ್ದಾರೆ.
ಪಾಕಿಸ್ತಾನವು ಅಕ್ರಮವಾಗಿ ಕಾಶ್ಮೀರವನ್ನು ಆಕ್ರಮಿಸಿದೆ. ಆದರೆ ಇದು ಅದರ ನಿಯಂತ್ರಣದಲ್ಲಿರದೆ ಉಗ್ರರು ನಿಯಂತ್ರಿಸುತ್ತಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಗಿಲ್ಗಿಟ್ ಬಾಲ್ಟಿಸ್ತಾನ್ ಇದ್ದರೆ ಮಾತ್ರ ಜಮ್ಮು ಕಾಶ್ಮೀರ ಪೂರ್ಣವಾ ರಾಜ್ಯವಾಗುತ್ತದೆ. ಗಿಲ್ಗಿಟ್ ಬಾಲ್ಟಿಸ್ತಾನ್ ಮತ್ತು ಪಿಓಕೆಯನ್ನು ಆಕ್ರಮಿಸಿಕೊಳ್ಳಲಾಗಿದ್ದು ಅದನ್ನು ವಶಕ್ಕೆ ಪಡೆಯುತ್ತೇವೆ ಎಂದು ಹೇಳಿದರು.
Advertisement
Army Chief General Bipin Rawat: When we say Jammu & Kashmir, the complete state of Jammu & Kashmir includes PoK and Gilgit Baltistan. Therefore PoK and Gilgit Baltistan become an occupied territory – a territory which has been illegally occupied by our western neighbour. pic.twitter.com/LxLw12R4CW
— ANI (@ANI) October 25, 2019
Advertisement
ಸಂವಿಧಾನದಲ್ಲಿ 370ನೇ ವಿಧಿ ತಾತ್ಕಾಲಿಕ ಎಂದು ತಿಳಿಸಿಲಾಗಿದೆ. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿ ತಾತ್ಕಾಲಿಕ ಎಂದು ತಿಳಿಸಿದಾಗ ಪಾಕಿಸ್ತಾನ ಯಾವುದೇ ತಕರಾರು ತೆಗೆಯಲಿಲ್ಲ. ಆದರೆ ಇದನ್ನು ರದ್ದುಗೊಳಿಸಿದ್ದಕ್ಕೆ ಪಾಕಿಸ್ತಾನ ಯಾಕೆ ವಿರೋಧ ವ್ಯಕ್ತಪಡಿಸಿತು ಎಂದು ಪ್ರಶ್ನಿಸಿದರು.
Advertisement
ಇದೇ ವೇಳೆ, ಭಾರತೀಯ ಸೇನೆಗೆ ವಿಶ್ವದ ಅತ್ಯುತ್ತಮ ಅಮೆರಿಕ ನಿರ್ಮಿತ ಸಿಗ್ ಸೌರ್ ರೈಫಲ್ ಲಭ್ಯವಾಗಲಿದೆ. ಈ ವರ್ಷದ ಅಂತ್ಯಕ್ಕೆ ಇನ್‍ಫ್ಯಾಂಟ್ರಿ ಸೈನಿಕರಿಗೆ ಈ ರೈಫಲ್ ಸಿಗಲಿದೆ ಎಂದು ಭರವಸೆ ನೀಡಿದರು.
Advertisement
#WATCH Delhi: Army Chief General Bipin Rawat says, "…The territory which has been illegally occupied by Pakistan is not controlled by the Pakistani establishment, it is controlled by terrorists. PoK is actually a terrorist controlled part of Pakistan." pic.twitter.com/jS8lGVddJw
— ANI (@ANI) October 25, 2019