ಗ್ಯಾಂಗ್ಟಾಕ್: ಸಿಕ್ಕಿಂನಲ್ಲಿ (Sikkim) ಇತ್ತೀಚಿನ ಪ್ರವಾಹದಿಂದ ಕಡಿತಗೊಂಡ ಗ್ಯಾಂಗ್ಟಾಕ್‍ನ ಡಿಕ್ಚು-ಸಂಕ್ಲಾಂಗ್ ನಡುವೆ 70 ಅಡಿ ಉದ್ದದ ಸೇತುವೆಯನ್ನು (Bailey Bridge) ಭಾರತೀಯ ಸೇನೆ (Indian Army) 72 ಗಂಟೆಗಳ ಒಳಗೆ ನಿರ್ಮಿಸಿದೆ.
#WATCH | Supporting the efforts of BRO and local administration in restoring connectivity and getting normalcy back to areas cut off due to recent floods in Sikkim, Army engineers of Trishakti Corps constructed a 70 feet Bailey Bridge on road Dikchu – Sanklang, braving incessant… pic.twitter.com/NMQS2hawIC
— ANI (@ANI) June 27, 2024
Advertisement
ಪ್ರವಾಹದಿಂದಾಗಿ ಕಡಿತಗೊಂಡಿದ್ದ ಸಂಪರ್ಕವನ್ನು ಪುನಃಸ್ಥಾಪಿಸಲು ತ್ರಿಶಕ್ತಿ ಕಾರ್ಪ್ಸ್‌ನ ಸೇನಾ ಇಂಜಿನಿಯರ್‌ಗಳು ಜೂ.23 ರಂದು ಸೇತುವೆ ನಿರ್ಮಾಣದ ಕಾರ್ಯವನ್ನು ಆರಂಭಿಸಿದ್ದರು. ಈ ಕಾರ್ಯ ಕೇವಲ 72 ಗಂಟೆಗಳಲ್ಲಿ ಸೇನೆ ಪೂರ್ಣಗೊಳಿಸಿದೆ. ಸೇನೆಯಿಂದ ನಿರ್ಮಾಣವಾದ ಈ ಸೇತುವೆಯ ಮೇಲೆ ಸವಾಲಿನ ಹವಾಮಾನ ಪರಿಸ್ಥಿತಿಗಳಲ್ಲಿಯೂ ದಿಕ್ಚುದಿಂದ ಸಂಕ್ಲಾಂಗ್ ಹಾಗೂ ಚುಂಗ್‍ತಾಂಗ್‍ಗೆ ವಾಹನ ಸಂಚಾರಕ್ಕೆ ಅನುಕೂಲವಾಗಿದೆ. ಈ ಮೂಲಕ ತರ್ತು ಸಂದರ್ಭ ಹಾಗೂ ವೈದ್ಯಕೀಯ ಸಹಾಯವನ್ನು ಒದಗಿಸಲು ಸಹಕಾರಿಯಾಗಿದೆ. ಇದನ್ನೂ ಓದಿ: ನಾಳೆ ದಕ್ಷಿಣ ಕನ್ನಡದ ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ – ಎಲ್ಲೆಲ್ಲಿ ಏನಾಗಿದೆ?
Advertisement
Advertisement
ಸೇತುವೆ ನಿರ್ಮಾಣಗೊಂಡ ಸ್ಥಳಕ್ಕೆ ರಾಜ್ಯ ಅರಣ್ಯ ಸಚಿವ ಮತ್ತು ವಿಪತ್ತು ನಿರ್ವಹಣೆಯ ರಾಜ್ಯ ಕಾರ್ಯದರ್ಶಿ ಪಿಂಟ್ಸೊ ನಾಮ್ಗ್ಯಾಲ್ ಲೆಪ್ಚಾ ಭೇಟಿ ನೀಡಿ, ಸೇತುವೆಯ ಪರಿಶೀಲನೆ ನಡೆಸಿದ್ದಾರೆ. ಬಳಿಕ ತ್ವರಿತ ಗತಿಯಲ್ಲಿ ಸೇತುವೆ ಪೂರ್ಣಗೊಳಿಸುವಲ್ಲಿ ಯಶಸ್ವಿಯಾದ ಸೇನೆಯ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ.
Advertisement
ಜೂ.11 ರಿಂದ ಸುರಿದ ನಿರಂತರ ಮಳೆಯು ಉತ್ತರ ಸಿಕ್ಕಿಂನಲ್ಲಿ ತೀವ್ರ ಹಾನಿ ಉಂಟುಮಾಡಿದೆ. ಹಲವೆಡೆ ಸೇತುವೆ ಕುಸಿತ, ಭೂಕುಸಿತ ಸಂಭವಿಸಿ ಸಂಪರ್ಕ ಕಡಿತಗೊಂಡಿವೆ. ಇದನ್ನೂ ಓದಿ: ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ ಕೇಸ್ – ಆರೋಪಿ ಅರುಣ್ ಚೌಗಲೆ ಜಾಮೀನು ಅರ್ಜಿ ವಜಾ