ನಮ್ಮ ಮಠಾಧಿಪತಿಗಳ ಕೈಗೆ ಆಯುಧ ಕೊಡ್ಬೇಕು: ದಿಂಗಾಲೇಶ್ವರ ಸ್ವಾಮೀಜಿ

Public TV
1 Min Read
HUBBALLI DINGALESHWARA SWAMIJI 1

ಹುಬ್ಬಳ್ಳಿ: ಜಗದೀಶ್ ಶೆಟ್ಟರ್ (Jagadeesh Shettar Birthday) ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ದಿಂಗಾಲೇಶ್ವರ ಸ್ವಾಮೀಜಿ (Dingaleshwara Swamiji) ಪ್ರಚೋದಾನಾಕಾರಿ ಭಾಷಣವನ್ನು ಮಾಡಿದ್ದಾರೆ.

ನಮ್ಮ ಸಮಾಜದ ನಾಯಕರು, ಮಠಾಧೀಪತಿಗಳ ಕೈಯಲ್ಲಿ ಆಯುಧ ಕೊಡಬೇಕು. ಆಯುಧ ಕೊಟ್ಟು ಮಠ ಮಾನ್ಯಗಳು, ಗಣ್ಯರ ರಕ್ಷಣೆ ಮಾಡಬೇಕು ಎಂದು ಪುರಾಣದ ಮಾತು ಉಲ್ಲೇಖಿಸಿ ಆಯುಧ ಕೊಡಬೇಕು ಎಂದು ಸ್ವಾಮೀಜಿ ಹೇಳಿದ್ದು, ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

ದೇವಿ ಕಡೆ ಸ್ವತಂತ್ರ ಆಯುಧ ಇರಲಿಲ್ಲ. ಎಲ್ಲರೂ ಒಂದು ಆಯುಧ ಕೊಟ್ಟಿರುವ ಕಾರಣಕ್ಕೆ ದುಷ್ಟರ ಸಂಹಾರ ಮಾಡಿದಳು. ಇದನ್ನು ಹೇಳೋಕೆ ಕಾರಣ, ನಮ್ಮ ನಾಯಕರುಗಳಿಗೆ ಒಬ್ಬೊಬ್ಬರು ಆಯುಧ ಕೊಡಬೇಕು. ಸಮಾಜದಲ್ಲಿ ಬಲಿಷ್ಠ ಆಗುವ ವ್ಯಕ್ತಿಗಳಿಗೆ ತೊಂದರೆ ಕೊಡುವ ಕೆಲಸ ಈ ನಾಡಿನಲ್ಲಿದೆ. ಮಠಾಧಿಪತಿಗಳಿಗೂ ಇದು ತಪ್ಪಿಲ್ಲ. ಮಠಾಧಿಪತಿಗಳನ್ನು ತೇಜೋವಧೆ ಮಾಡುವ ಕೆಲಸ ನಡೆಯುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ರಾಜಕಾರಣದಲ್ಲಿ ಅಚ್ಚರಿಯ ಬೆಳವಣಿಗೆ- ದೆಹಲಿಗೆ ಹೊರಟ ಫೈರ್‌ ಬ್ರ್ಯಾಂಡ್ ಲೀಡರ್ಸ್

HUBBALLI DINGALESHWARA SWAMIJI

ನಮ್ಮ ಮಠಗಳನ್ನ (Mutt) ನಾಶ ಮಾಡುವುದರ ಜೊತೆಗೆ ಎರಡನೇ ಹಂತದ ನಾಯಕರನ್ನು ರಾಜಕೀಯವಾಗಿ ನಾಶ ಮಾಡುವ ವ್ಯವಸ್ಥೆ ಇದೆ. ಹುಟ್ಟುಹಬ್ಬದಲ್ಲಿ ಇದನ್ನು ಹೇಳಬೇಕೋ ಬೇಡವೋ, ಆದರೆ ನಮ್ಮ ಭಾವನೆ ಹೇಳುತ್ತೇನೆ. ಯಾರ ಅಧಃಪತನವನ್ನೂ ನಾವು ಸಹಿಸಬಾರದು. ಮಠಾಧೀಪತಿಗಳು, ರಾಜಕೀಯ ನಾಯಕರು ಸಮಾಜಕ್ಕೆ ಆಧಾರಸ್ತಂಭವಿದ್ದಂತೆ. ಲಿಂಗಾಯತ ನಾಯಕರು ಕಂಬ ಗಟ್ಟಿಯಾಗಿರಬೇಕು ಎಲ್ಲರೂ ಎಚ್ಚೆತ್ತುಕೊಳ್ಳೋ ಕಾಲ ಬಂದಿದೆ ಎಂದು ಸ್ವಾಮೀಜಿ ತಿಳಿಸಿದ್ದಾರೆ.

Share This Article