ಬೆಂಗಳೂರು: ಅರ್ಕಾವತಿ ರಿಡೂ ಪ್ರಕರಣದಲ್ಲಿ ಸಿದ್ದರಾಮಯ್ಯ (Siddaramaiah) ಅಕ್ರಮ ಮಾಡಿರುವುದು ಸತ್ಯ. ನಾನು ಸುಳ್ಳು ಹೇಳುತ್ತಿಲ್ಲ. ಸಿದ್ದರಾಮಯ್ಯ ಅವರಿಗೆ ಕಟು ಸತ್ಯ ಎದುರಿಸುವ ಕಾಲ ಬಂದಿದೆ ಎಂದು ಮತ್ತೊಮ್ಮೆ ಸಿದ್ದರಾಮಯ್ಯ ವಿರುದ್ಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ವಾಗ್ದಾಳಿ ನಡೆಸಿದರು.
ಅರ್ಕಾವತಿ ರಿಡೂ ಪ್ರಕರಣದಲ್ಲಿ ಮುಖ್ಯಮಂತ್ರಿಗಳು ಸುಳ್ಳು ಹೇಳ್ಳುತ್ತಿದ್ದಾರೆ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅರ್ಕಾವತಿ ರಿಡೂ ಅಕ್ರಮದ ಬಗ್ಗೆ ಬೊಮ್ಮಾಯಿ ಹೇಳ್ತಿರೋದಲ್ಲ. ನ್ಯಾ.ಕೆಂಪಣ್ಣ ಆಯೋಗ ಹೇಳಿರೋದು. ನಾನು ಸುಳ್ಳು ಹೇಳ್ತಿಲ್ಲ. ಕಾಂಗ್ರೆಸ್ ಅವರು ಸುಳ್ಳು ಹೇಳ್ತಿರೋದು ಎಂದು ಕಿಡಿಕಾರಿದರು.
Advertisement
Advertisement
ಅಧಿವೇಶನಲ್ಲಿ ಕಮೀಷನ್ ರಿಪೋರ್ಟ್ ನಾನು ಓದಿದ್ದು. ಬೊಮ್ಮಾಯಿ ಹುಡುಕಿದ್ದಲ್ಲ ಸುಳ್ಳು ಹೇಳೋದಕ್ಕೆ. ಅವರೇ ನೇಮಿಸಿದ ಸಮಿತಿ. ಸುದೀರ್ಘವಾಗಿ ತನಿಖೆ ಮಾಡಿ ವರದಿ ಕೊಟ್ಟಿರೋದು. ಕೆಂಪಣ್ಣ ಅವರ ವರದಿ ಓದಿದ್ದೇನೆ. ನಾನು ಸುಳ್ಳು ಹೇಳುವ ಪ್ರಶ್ನೆಯೇ ಬರುವುದಿಲ್ಲ. ಕಾಂಗ್ರೆಸ್ ಅವರು ಸುಳ್ಳು ಹೇಳ್ತಿರೋದು ಎಂದು ಗುಡುಗಿದರು.
Advertisement
ಅಧಿಕಾರಿಗಳು ತೆಗೆದುಕೊಂಡು ಬಂದಿರೊದಕ್ಕೆ ಅನುಮೋದಿಸಿದ್ದೇನೆ ಅಂತ ಸಿದ್ದರಾಮಯ್ಯ ಹೇಳಿದ್ದಾರೆ. ಅದರ ಅರ್ಥ ಏನು. ಅವರು ತಪ್ಪು ಮಾಡಿದ್ದಾರೆ ಅಂತ ಅರ್ಥ ಅಲ್ಲವಾ. ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಿಲ್ಲ. ಅಕ್ರಮದ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇನೆ ಎಂದರು.
Advertisement
ಲೋಕಾಯುಕ್ತ ಅಧಿಕಾರ ಮೊಟಕುಗೊಳಿಸುವ ವಿಚಾರವಾಗಿ, ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಾರೆ. ಅಡ್ವೋಕೇಟ್ ಜನರಲ್ ವಾದ ಮಾಡಿದ ಮೇಲೆ ನ್ಯಾಯಾಧೀಶರು ಏನ್ ಹೇಳಿದ್ದಾರೆ? ಅದು ಮುಖ್ಯ. ತೀರ್ಪು ಏನು ಹೇಳಿದ್ದಾರೆ. ತೀರ್ಪು ಮುಖ್ಯ. ವಾದಗಳು ನಮಗೆ ಬೇಕಾದ ಹಾಗೆ ವಾದ ಮಾಡಿಕೊಳ್ಳುತ್ತೇವೆ. ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಭ್ರಷ್ಟಾಚಾರ ರಕ್ಷಣೆಗೆ, ಜನಪ್ರತಿನಿಧಿಗಳ ರಕ್ಷಣೆಗೆ ಎಸಿಬಿ ಮಾಡಿದ್ರು ಎಂದು ಬಹಳ ಸ್ಪಷ್ಟವಾಗಿ ತೀರ್ಪಿನಲ್ಲಿ ನ್ಯಾಯಾಧೀಶರು ಹೇಳಿದ್ದಾರೆ. ಅದನ್ನೆ ನಾನು ಹೇಳಿರೋದು ಎಂದು ಸಿದ್ದರಾಮಯ್ಯಗೆ ತಿರುಗೇಟು ಕೊಟ್ಟರು. ಇದನ್ನೂ ಓದಿ: ಮೆಟ್ರೋದಿಂದ ತಪ್ಪಿದ ಮತ್ತೊಂದು ಅನಾಹುತ- ಕಬ್ಬಿಣದ ಪೀಸ್ ಬಿದ್ದು ಕಾರಿನ ಗ್ಲಾಸ್ ಜಖಂ
ನಾನು ನ್ಯಾಯಾಧೀಶರ ತೀರ್ಪು ಓದಿದ್ದೇನೆ. ಕೆಂಪಣ್ಣ ಕಮಿಷನ್ ರಿಪೋರ್ಟ್ ಕೂಡಾ ಓದಿದ್ದೇನೆ. ಅಕ್ರಮ ಆಗಿರೋದು ಕಟು ಸತ್ಯ. ಸಿದ್ದರಾಮಯ್ಯ ಅವರು ಕಟು ಸತ್ಯ ಎದುರಿಸುವ ಕಾಲ ಬಂದಿದೆ. ನಾವು ಏನು ಕ್ರಮ ತೆಗೆದುಕೊಳ್ಳಬೇಕೋ ತೆಗೆದುಕೊಳ್ಳುತ್ತೇವೆ ಎನ್ನುವ ಮೂಲಕ ತನಿಖೆ ಮಾಡಿಸುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ತಂದೆ, ತಾಯಿಯ ದೇವಸ್ಥಾನ ನಿರ್ಮಿಸಿ ದಿನನಿತ್ಯ ಪೂಜೆ ಸಲ್ಲಿಸುತ್ತಿರುವ ಪುತ್ರ