ಪಣಜಿ: ಸಚಿನ್ ತೆಂಡೂಲ್ಕರ್(Sachin Tendulkar) ಅವರ ಪುತ್ರ 23 ವರ್ಷದ ಅರ್ಜುನ್ ತೆಂಡೂಲ್ಕರ್(Arjun Tendulkar) ತಾನು ಆಡಿದ ಮೊದಲ ರಣಜಿ(Ranji debut) ಪಂದ್ಯದಲ್ಲೇ ಶತಕ ಸಿಡಿಸಿದ್ದಾರೆ.
ಗೋವಾ(Goa) ಪರ ಆಡುತ್ತಿರುವ ಅರ್ಜುನ್ ತೆಂಡೂಲ್ಕರ್ ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ 120 ರನ್(207 ಎಸೆತ, 16 ಬೌಂಡರಿ, 2 ಸಿಕ್ಸರ್) ಹೊಡೆದು ಔಟಾಗಿದ್ದಾರೆ. ಈ ಹಿಂದೆ ಸಚಿನ್ ತೆಂಡೂಲ್ಕರ್ ಮೊದಲ ರಣಜಿ ಪಂದ್ಯದಲ್ಲೇ ಶತಕ ಹೊಡೆದಿದ್ದರು. ಈಗ ತಂದೆಯಂತೆ ಅರ್ಜುನ್ ತೆಂಡೂಲ್ಕರ್ ಶತಕ ಬಾರಿಸಿದ್ದಾರೆ.
Advertisement
Advertisement
ಟಾಸ್ ಸೋತು ಬ್ಯಾಟಿಂಗ್ ನಡೆಸುತ್ತಿರುವ ಗೋವಾ ಎರಡನೇ ದಿನಕ್ಕೆ ಮೊದಲ ಇನ್ನಿಂಗ್ಸ್‌ನಲ್ಲಿ 8 ವಿಕೆಟ್ ನಷ್ಟಕ್ಕೆ 493 ರನ್ ಹೊಡೆದಿದೆ. ಗೋವಾ ಪರ ಸುಯಶ್ ಪ್ರಭುದೇಸಾಯಿ 202 ರನ್(416 ಎಸೆತ, 29 ಬೌಂಡರಿ), ಸ್ನೇಹಲ್ ಸುಹಾಸ್ ಕೌಠಂಕರ್ 59 ರನ್ ಹೊಡೆದಿದ್ದಾರೆ. ಇದನ್ನೂ ಓದಿ: ಡಿ.18ರ ಫೈನಲ್ ನನ್ನ ಕೊನೆಯ ವಿಶ್ವಕಪ್ ಪಂದ್ಯ – ನಿವೃತ್ತಿ ಖಚಿತಪಡಿಸಿದ ಮೆಸ್ಸಿ
Advertisement
Advertisement
15 ವರ್ಷದಲ್ಲೇ ರಣಜಿ ಕ್ಯಾಪ್ ಧರಿಸಿದ್ದ ಸಚಿನ್ 1988ರಲ್ಲಿ ತಮ್ಮ ಮೊದಲ ರಣಜಿ ಪಂದ್ಯದಲ್ಲಿ ಗುಜರಾತ್ ವಿರುದ್ಧ ಅಜೇಯ 100 ರನ್ ಹೊಡೆದಿದ್ದರು. 23 ವರ್ಷದ ಅರ್ಜುನ್ ತೆಂಡೂಲ್ಕರ್ ಮಾಧ್ಯಮ ವೇಗಿ ಬೌಲರ್ ಆಗಿದ್ದು ಈ ಹಿಂದೆ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಪಂದ್ಯದಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸಿದ್ದರು. ಐಪಿಎಲ್‌ನಲ್ಲಿ ಮುಂಬೈ ತಂಡ ಖರೀದಿಸಿದ್ದರೂ ಅರ್ಜುನ್ ತೆಂಡೂಲ್ಕರ್ ಅಂತಿಮ 11ರ ಪಟ್ಟಿಯಲ್ಲಿ ಸ್ಥಾನ ಪಡೆದಿರಲಿಲ್ಲ.