ಪಣಜಿ: ರಾಜಸ್ಥಾನ (Rajasthan) ವಿರುದ್ಧದ ರಣಜಿ ಪಂದ್ಯದಲ್ಲಿ (Ranji Trophy) ಗೋವಾ (Goa) ಪರ ತನ್ನ ಮೊದಲ ಪಂದ್ಯವಾಡುತ್ತಿರುವ ಅರ್ಜುನ್ ತೆಂಡೂಲ್ಕರ್ (Arjun Tendulkar) ತನ್ನ ಅಪ್ಪ ಸಚಿನ್ ತೆಂಡೂಲ್ಕರ್ (Sachin Tendulkar) ಶತಕ ಸಿಡಿಸಿದ ಬಳಿಕ ಸಂಭ್ರಮಿಸುತ್ತಿದ್ದಂತೆ ಸಂಭ್ರಮಿಸಿದ್ದಾರೆ.
Advertisement
Advertisement
Advertisement
ಅರ್ಜುನ್ ತೆಂಡೂಲ್ಕರ್ ಈ ಹಿಂದೆ ಮುಂಬೈ (Mumbai) ಪರ ಆಡುತ್ತಿದ್ದರು. ಈ ಬಾರಿ ರಣಜಿ ಪಂದ್ಯದಲ್ಲಿ ಗೋವಾ ಪರ ಆಡುತ್ತಿದ್ದಾರೆ. ಪ್ರಸ್ತುತ ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಅರ್ಜುನ್ ತೆಂಡೂಲ್ಕರ್ 120 ರನ್ (207 ಎಸೆತ, 16 ಬೌಂಡರಿ, 2 ಸಿಕ್ಸ್) ಶತಕ ಬಾರಿಸಿದರು. ಇದು ಅರ್ಜುನ್ ತೆಂಡೂಲ್ಕರ್ ಗೋವಾ ಪರ ಆಡಿದ ಮೊದಲ ರಣಜಿ ಪಂದ್ಯವಾಗಿದೆ. ಶತಕ ಸಿಡಿಸುತ್ತಿದ್ದಂತೆ ಅರ್ಜುನ್ ತೆಂಡೂಲ್ಕರ್ ತಮ್ಮ ತಂದೆ ಸಚಿನ್ ತೆಂಡೂಲ್ಕರ್ ಶತಕ ಸಿಡಿಸಿದ ಬಳಿಕ ಬ್ಯಾಟ್ ಮೇಲೆತ್ತಿ ಆಕಾಶ ನೋಡುವಂತೆ ತಾವು ಕೂಡ ಸಂಭ್ರಮಿಸಿದರು. ಇದನ್ನೂ ಓದಿ: ತಂದೆಯ ಸಾಧನೆ ಸರಿಗಟ್ಟಿದ ಮಗ – ಮೊದಲ ರಣಜಿ ಪಂದ್ಯದಲ್ಲೇ ಅರ್ಜುನ್ ತೆಂಡೂಲ್ಕರ್ ಶತಕ
Advertisement
15 ವರ್ಷದಲ್ಲೇ ರಣಜಿ ಕ್ಯಾಪ್ ಧರಿಸಿದ್ದ ಸಚಿನ್ 1988ರಲ್ಲಿ ತಮ್ಮ ಮೊದಲ ರಣಜಿ ಪಂದ್ಯದಲ್ಲಿ ಗುಜರಾತ್ ವಿರುದ್ಧ ಅಜೇಯ 100 ರನ್ ಹೊಡೆದಿದ್ದರು. ಇದೀಗ 23 ವರ್ಷದ ಅರ್ಜುನ್ ತೆಂಡೂಲ್ಕರ್ ರಣಜಿ ಪಂದ್ಯದಲ್ಲಿ ಶತಕ ಸಿಡಿಸಿ ತಂದೆಯ ಹಾದಿಯಲ್ಲಿ ಸಾಗುತ್ತಿದ್ದಾರೆ. ಇದನ್ನೂ ಓದಿ: ಡಿ.18ರ ಫೈನಲ್ ನನ್ನ ಕೊನೆಯ ವಿಶ್ವಕಪ್ ಪಂದ್ಯ – ನಿವೃತ್ತಿ ಖಚಿತಪಡಿಸಿದ ಮೆಸ್ಸಿ
https://twitter.com/Cric_GRH/status/1603057187139772416
ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ ಫೀಲ್ಡಿಂಗ್ ಆಯ್ದುಕೊಂಡಿತು. ಗೋವಾ ಮೊದಲು ಬ್ಯಾಟಿಂಗ್ ಮಾಡಿ ಸುಯಶ್ ಪ್ರಭುದೇಸಾಯಿ 202 ರನ್ (416 ಎಸೆತ, 29 ಬೌಂಡರಿ), ಅರ್ಜುನ್ ತೆಂಡೂಲ್ಕರ್ 120 ರನ್ ಮತ್ತು ಸ್ನೇಹಲ್ ಸುಹಾಸ್ ಕೌಠಂಕರ್ 59 (104 ಎಸೆತ, 7 ಬೌಂಡರಿ, 1 ಸಿಕ್ಸ್) ರನ್ ನೆರವಿನಿಂದ 174 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 547 ರನ್ ಬಾರಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ.