ಬೆಂಗಳೂರು: ನಟ ಅರ್ಜುನ್ ಸರ್ಜಾರ ವಿರುದ್ಧ ರಾಟೆ ಚೆಲುವೆ ಶೃತಿ ಹರಿಹರನ್ ಮೀಟೂ ಆರೋಪ ಮಾಡಿದ್ದು, ಇಂದು ಫಿಲ್ಮ್ ಚೇಂಬರ್ ನಲ್ಲಿ ಸಂಧಾನ ಮಾತುಕತೆ ನಡೆಯುತ್ತಿದೆ. ಸಭೆಗೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಅರ್ಜುನ್ ಸರ್ಜಾರ ವಕೀಲ, ಆಪ್ತ ಪ್ರಶಾಂತ್ ಸಿಂಬರ್ಗಿ ಹೊಸ ಬಾಂಬ್ ಸಿಡಿಸಿದ್ದಾರೆ.
ಶೃತಿ ಹರಿಹರನ್ ಬೆನ್ನ ಹಿಂದೆ ಇಬ್ಬರು ಕನ್ನಡದ ನಟರು ನಿಂತಿದ್ದು, ಎಲ್ಲದಕ್ಕೂ ಅವರೇ ಸೂತ್ರಧಾರರು ಎಂಬಂತೆ ಹೇಳಿದ್ದಾರೆ. ಶೃತಿ ಹರಿಹರನ್ ವಿರುದ್ಧ ಎಫ್‍ಐ ಆರ್ ದಾಖಲು ಮಾಡಿದ್ದೇವೆ. ಶೃತಿ ಹರಿಹರನ್ ವಿದೇಶದಲ್ಲಿಯ ಮಾಧ್ಯಮಗಳಿಗೆ ಹಣ ಕೊಟ್ಟು ಅರ್ಜುನ್ ಸರ್ಜಾರ ವಿರೋಧವಾಗಿ ತೋರಿಸಿದ್ದಾರೆ. ನ್ಯೂಯಾರ್ಕ್ ಸೇರಿದಂತೆ ಇತರೆ ದೇಶಗಳ ಮಾಧ್ಯಮಗಳಲ್ಲಿ ಅರ್ಜುನ್ ಸರ್ಜಾ ಮತ್ತು ಕುಟುಂಬದ ಬಗ್ಗೆ ಕೆಟ್ಟದಾಗಿ ತೋರಿಸುವಂತೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಈಗಾಗಲೇ 400 ಪುಟಗಳ ದೂರನ್ನು ಪೊಲೀಸ್ ಕಮೀಷನರ್ ಗೆ ಸಲ್ಲಿಸಿದ್ದೇವೆ. ಅಧಿಕಾರಿಗಳು ಪ್ರಕರಣವನ್ನು ಸೈಬರ್ ಕ್ರೈಂಗೆ ವರ್ಗಾಯಿಸಿದ್ದಾರೆ. ಮಾಧ್ಯಮಗಳಲ್ಲಿ ಬಿತ್ತರವಾದ ಸುದ್ದಿಗಳ ಸ್ಕ್ರೀನ್ ಶಾಟ್, ಯುಆರ್‍ಎಲ್ ಎಲ್ಲವೂ ನಮ್ಮ ಬಳಿ ಲಭ್ಯವಿದೆ. ಈ ಮಾಧ್ಯಮಗಳಿಗೆ ಬ್ಯಾಂಕ್ ಖಾತೆಯ ಮೂಲಕ ಹಣ ವರ್ಗಾವಣೆ ಆಗಿದ್ದು, ಅದು ಯಾರ ಅಕೌಂಟ್ ಎಂಬುವುದರ ಬಗ್ಗೆ ನಮಗೆ ಗೊತ್ತಿದೆ. ಒಬ್ಬ ನಟನ ಖಾತೆಯಿಂದ ನೇರವಾಗಿ ಹಣ ವರ್ಗಾವಣೆ ಆಗಿದೆ ಎಂದು ಪ್ರಶಾಂತ್ ತಿಳಿಸಿದರು.
ಅರ್ಜುನ್ ಸರ್ಜಾ ಟಾರ್ಗೆಟ್ ಯಾಕೆ?
ಅರ್ಜುನ್ ಸರ್ಜಾ ಚೆನ್ನೈನಲ್ಲಿ 25 ಕೋಟಿ ವೆಚ್ಚದಲ್ಲಿ ಹುನಮಾನ್ ಮಂದಿರವನ್ನು ಕಟ್ಟಿಸುತ್ತಿದ್ದಾರೆ. ಹುನುಮನ ದೇವಾಲಯ ಕಟ್ಟಿಸೋದು ಅರ್ಜುನ್ ಅವರ ಬಹುದಿನದ ಆಸೆ. ಕೆಲ ಹಿಂದೂ ವಿರೋಧಿ ಸಂಘಟನೆಗಳು ಒಂದಾಗಿದ್ದು, ಅರ್ಜುನ್ ಸರ್ಜಾರನ್ನು ಕೆಳ ಮಟ್ಟದಲ್ಲಿ ತೋರಿಸಲು ಶೃತಿ ಹರಿಹರನ್ ಮುಖಾಂತರ ಈ ಆರೋಪಗಳನ್ನು ಮಾಡಲಾಗುತ್ತಿದೆ. ಎಲ್ಲ ಆ್ಯಂಟಿ ಹಿಂದೂಗಳು ಒಂದಾಗಿ ಅರ್ಜುನಾ ಸರ್ಜಾರ ಮೇಲೆ ಮೀಟೂ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv