ಬೆಂಗಳೂರು: ಮೀಟು ಸುಳಿಯಲ್ಲಿ ಸಿಲುಕಿ ಲೈಂಗಿಕ ದೌರ್ಜನ್ಯ ಪ್ರಕರಣ ಎದುರಿಸುತ್ತಿರುವ ಬಹುಭಾಷಾ ನಟ ಅರ್ಜುನ್ ಸರ್ಜಾ ಇಂದು ಕಬ್ಬನ್ ಪಾರ್ಕ್ ಪೊಲೀಸರ ಮುಂದೆ ಹಾಜರಾಗಿದ್ದು, ವಿಚಾರಣೆಗೆ ಒಳಗಾಗಿದ್ದಾರೆ.
ಅರ್ಜುನ್ ಸರ್ಜಾ ಅವರಿಗೆ ಸುಮಾರು 50 ಪ್ರಶ್ನೆಗಳನ್ನು ಪೊಲೀಸರು ಸಿದ್ಧಮಾಡಿಕೊಂಡಿದ್ದು, ಕಬ್ಬನ್ ಪಾರ್ಕ್ ಪೊಲೀಸ್ ಅಯ್ಯಣ್ಣ ರೆಡ್ಡಿ ಅವರು ಅರ್ಜುನ್ ಸರ್ಜಾ ಅವರನ್ನು ವಿಚಾರಣೆ ಮಾಡುತ್ತಿದ್ದಾರೆ. ನಟಿ ಶೃತಿ ಹರಿಹರನ್, ಮೇಕಪ್ ಮನ್ ಕಿರಣ್ ಮತು ಸಹ ನಿರ್ಮಾಪಕಿ ಮೋನಿಕಾ ಹೇಳಿಕೆ ಆಧರಿಸಿ ಪ್ರಶ್ನೆಯನ್ನು ಕೇಳುತ್ತಿದ್ದಾರೆ. ಇದನ್ನೂ ಓದಿ: ಸಾರ್ವಜನಿಕ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ಹೇಗೆ ಸಾಧ್ಯ – ಇಂದಿನ ಕಲಾಪದಲ್ಲಿ ಬಿವಿ ಆಚಾರ್ಯ ವಾದ ಹೀಗಿತ್ತು
Advertisement
Advertisement
ನಿಮ್ಮ ಮೇಲೆ ಲೈಂಗಿಕ ದೌರ್ಜನ್ಯ ಕೇಸ್ ದಾಖಲಾಗಿದೆ ಏನು ಹೇಳುತ್ತೀರಾ ಎಂದು ಪೊಲೀಸರು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಅರ್ಜನ್ ಸರ್ಜಾ ಅವರು, ಈಗಾಗಲೇ ನಾನು ಸ್ಪಷ್ಟಪಡಿಸಿದ್ದೇನೆ. ಇದು ಉದ್ದೇಶ ಪೂರ್ವಕವಾದ ಕೇಸ್. ನಾನು ಶೃತಿ ಹರಿಹರನ್ ಅವರ ಜೊತೆ ಅಸಭ್ಯವಾಗಿ ನಡೆದುಕೊಂಡಿಲ್ಲ. ನನ್ನ ಮೇಲೆ ಸುಮ್ಮನೆ ಆರೋಪ ಮಾಡಲಾಗಿದೆ ಎಂದು ಹೇಳಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ.
Advertisement
ಪ್ರಶ್ನೆ 1: ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಶೂಟಿಂಗ್ ವೇಳೆ ನೀವು ಅಸಭ್ಯವಾಗಿ ವರ್ತಿಸಿದ್ರಾ.? ಶೃತಿ ಹರಿಹರನ್ ದೇಹದ ಹಿಂಭಾಗ, ಎದೆ, ತೊಡೆಯನ್ನು ಸ್ಪರ್ಶಿಸಿದ್ರಾ.? ಆಕೆಯನ್ನು ಗಟ್ಟಿಯಾಗಿ ತಬ್ಬಿಕೊಂಡು ಆರೋಪ ನಿಮ್ಮ ಮೇಲಿದೆ. ಇದಕ್ಕೇನು ಹೇಳುತ್ತೀರಾ?
ಅರ್ಜುನ್ ಸರ್ಜಾ: ನಾನು ಆಕೆಯ ಜೊತೆ ಅಸಭ್ಯವಾಗಿ ವರ್ತಿಸಿಲ್ಲ. ಆಕೆಯನ್ನು ನಾನು ತಬ್ಬಿಕೊಂಡಿಲ್ಲ. ದೇಹದ ಹಿಂಭಾಗ, ಎದೆ, ತೊಡೆಯನ್ನು ಸ್ಪರ್ಶಿಸಿಲ್ಲ. ಸಹ ನಿರ್ದೇಶಕ ಭರತ್ ನೀಲಕಂಠ, ಸಹ ನಿರ್ದೇಶಕಿ ಮೋನಿಕಾ ಕೂಡಾ ಈಗಾಗಲೇ ತಮ್ಮ ಸ್ಪಷ್ಟನೆ ಕೊಟ್ಟಿದ್ದಾರೆ. ಹೀಗಾಗಿ ಈ ಆರೋಪವೆಲ್ಲಾ ಸುಳ್ಳು ಎಂದು ಉತ್ತರವನ್ನು ಕೊಟ್ಟಿದ್ದಾರೆ.
Advertisement
ಪ್ರಶ್ನೆ 2: ದೇವನಹಳ್ಳಿ ಆಸ್ಪತ್ರೆಯಲ್ಲಿ ಶೂಟಿಂಗ್ ನಡೆಯುವ ವೇಳೆ ಕೆಟ್ಟದಾಗಿ ನಡೆದುಕೊಂಡ ಆರೋಪವಿದೆ. ರೆಸಾರ್ಟ್ ಗೆ ಬಾ, ನಾವಿಬ್ಬರು ಕಾಲ ಕಳೆಯೋಣ ಅಂತ ನೀವು ಶೃತಿ ಹರಿಹರನ್ ಗೆ ಕರೆದ್ರಾ?
ಅರ್ಜುನ್ ಸರ್ಜಾ: ನಾನು ಶೃತಿ ಹರಿಹರನ್ ಜೊತೆ ಕೆಟ್ಟದಾಗಿ ನಡೆದುಕೊಂಡಿಲ್ಲ, ರೆಸಾರ್ಟ್ ಬಾ ಅಂತ ಕರೆದಿಲ್ಲ. ರೆಸಾರ್ಟ್ ಗೆ ಬಾ, ಕಾಲಕಳೆಯೋಣ ಅಂತ ನಾನು ಶೃತಿ ಹರಿಹರನ್ ಗೆ ಕರೆದಿಲ್ಲ. ಶೂಟಿಂಗ್ ಸ್ಪಾಟ್ ನಲ್ಲಿ ಇದ್ದವರು ಈಗಾಗಲೇ ಹೇಳಿಕೆಯನ್ನು ಕೊಟ್ಟಿದ್ದಾರೆ. ಶೃತಿ ಹರಿಹರನ್ ಹೇಳಿಕೆ ದುರುದ್ದೇಶದಿಂದ ಕೂಡಿದ್ದಾಗಿದೆ.
ಪ್ರಶ್ನೆ 3: ದೇವನಹಳ್ಳಿ ಟ್ರಾಫಿಕ್ ಸಿಗ್ನಲ್ ಬಳಿ ನೀವು – ಶೃತಿ ಹರಿಹರನ್ ಮುಖಾಮುಖಿಯಾಗಿದ್ದು ನಿಜಾನಾ? ಇನ್ನೊಂದು ಕಾರಿನಲ್ಲಿ ಬಂದ ನೀವು ಶೃತಿ ಹರಿಹರನ್ ರನ್ನು ರೆಸಾರ್ಟ್ ಗೆ ಕರೆದ್ರಾ? ಬರಲು ನಿರಾಕರಿಸಿದ ಶೃತಿಗೆ ಬೆದರಿಕೆ ಹಾಕಿದ್ದು ಸತ್ಯನಾ? ನಿನ್ ಬರದೇ ಇದ್ರೆ ನಿನ್ನ ಸಿನಿಮಾ ಕೆರಿಯರ್ ಕ್ಲೋಸ್ ಮಾಡ್ತೀನಿ ಅಂತ ಹೇಳಿದ್ರಾ? ನಿಮ್ಮ ಮೇಲೆ ಶೃತಿ ಹರಿಹರನ್ ಈ ಆರೋಪ ಮಾಡಿದ್ದಾರೆ. ಇದಕ್ಕೆ ಏನ್ ಹೇಳುತ್ತೀರಾ?
ಅರ್ಜುನ್ ಸರ್ಜಾ: ದೇವನಹಳ್ಳಿ ಟ್ರಾಫಿಕ್ ಸಿಗ್ನಲ್ ಬಳಿ ನಾನು-ಶೃತಿ ಹರಿಹರನ್ ಮುಖಾಮುಖಿಯಾಗಿಲ್ಲ. ನಾನು ಆಕೆಗೆ ಯಾವುದೇ ಬೆದರಿಕೆಯನ್ನೂ ಹಾಕಿಲ್ಲ. ಆಕೆಯನ್ನು ರೆಸಾರ್ಟ್ ಆಗಲಿ ಅಥವಾ ಬೇರೆ ಎಲ್ಲಿಗೂ ಕರೆದಿಲ್ಲ. ಶೃತಿ ಹರಿಹರನ್ ಆರೋಪ ಸುಳ್ಳು, ದುರುದ್ದೇಶದಿಂದಲೇ ಶೃತಿ ಆರೋಪ ಮಾಡಿದ್ದಾರೆ.
ಪ್ರಶ್ನೆ 4: ಯುಬಿ ಸಿಟಿಯ ಲಾಂಜ್ ನಲ್ಲಿ ಏಕಾಂಗಿಯಾಗಿ ಕುಳಿತ್ತಿದ್ದ ನನ್ನನ್ನು ಸರ್ಜಾ ಗಟ್ಟಿಯಾಗಿ ತಬ್ಬಿಕೊಂಡ್ರು. ರೂಂಗೆ ಹೋಗಿ ಮಜಾ ಮಾಡೋಣ ಬಾ ಅಂದ್ರು, ದೇಹದ ಮೇಲೆ ಕೈ ಹಾಕಿದ್ರು. ನಾನು ಬರಲ್ಲ ಅಂದಿದ್ದಕ್ಕೆ ನೀನೇ ನನ್ನ ರೂಂಗೆ ಬರುವಂತೆ ಮಾಡುತ್ತೇನೆ ಅಂತ ಬೆದರಿಕೆ ಹಾಕಿದ ಆರೋಪವಿದೆ, ಏನ್ ಹೇಳುತ್ತೀರಾ?
ಅರ್ಜುನ್ ಸರ್ಜಾ: ಯುಬಿ ಸಿಟಿಯಲ್ಲಿ ಲಾಂಜ್ ನಲ್ಲಿ ಕುಳಿತ್ತಿದ್ದ ಶೃತಿ ಜೊತೆ ನಾನು ಕೆಟ್ಟದಾಗಿ ನಡೆದುಕೊಂಡಿಲ್ಲ. ನಾನು ನಾರ್ಮಲ್ ಆಗಿ ಆಕೆಯೊಂದಿಗೆ ಮಾತನಾಡಿದ್ದು ಸತ್ಯ. ಆದ್ರೆ ರೂಂಗೆ ಬಾ, ಮಜಾ ಮಾಡೋಣ ಬಾ ಅಂತೆಲ್ಲಾ ನಾನು ಕರೆದೇ ಇಲ್ಲ.
ಶೂಟಿಂಗ್ ಲಾಗ್ ಬುಕ್, ಪ್ರೊಡಕ್ಷನ್ ಬುಕ್ ಎಲ್ಲಾ ಕೊಟ್ಟಿದ್ದೇವೆ. ಶೃತಿ ಆರೋಪದ ಬಗ್ಗೆ ನಮಗೆ ಗೊತ್ತಿಲ್ಲ. ನಾನು ಶೃತಿ ಜತೆ ಕೆಟ್ಟದಾಗಿ ನಡೆದುಕೊಂಡಿಲ್ಲ. ಯಾವ ದಿನಾಂಕ ಅನ್ನೋದೇ ಅವರಿಗೆ ಸರಿಯಾಗಿ ನನಗೆ ಗೊತ್ತಿಲ್ಲ. ಪದೇ ಪದೇ 4 ಸಲ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದರೆ, ನಿರ್ದೇಶಕರಿಗಾದರೂ ಹೇಳಬೇಕಿತ್ತು. ಚಿತ್ರೀಕರಣ ವೇಳೆ ಕ್ಯಾಮೆರಾ ಇತ್ತು, ಸುತ್ತಲೂ ಜನರಿದ್ದರು. ಹೀಗಾಗಿ ವಿಡಿಯೋ ಸಮೇತದ ಸಾಕ್ಷಿ ಕೊಟ್ಟಿದ್ದೇವೆ. ಅದನ್ನು ನೀವೇ ನೋಡಿ ನಿರ್ಧಾರ ಮಾಡಿ ಎಂದು ಅರ್ಜುನ್ ಸರ್ಜಾ ಹೇಳಿದ್ದಾರೆ ಅಂತ ಮೂಲಗಳ ಮೂಲಕ ತಿಳಿದು ಬಂದಿದೆ.
ನಟಿ ಶೃತಿ ಹರಿಹರನ್ ಪ್ರಕಾರ 4 ಕಡೆ ಸರ್ಜಾರಿಂದ ಲೈಂಗಿಕ ಕಿರುಕುಳ ನಡೆದಿದೆ. ದೇವನಹಳ್ಳಿ ಸಿಗ್ನಲ್, ಶೂಟಿಂಗ್ ನಡೆಯುತ್ತಿದ್ದ ದೇವನಹಳ್ಳಿ ಆಸ್ಪತ್ರೆ, ಯುಬಿ ಸಿಟಿ ಮತ್ತು ಹೆಬ್ಬಾಳ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಚಿತ್ರೀಕರಣ ವೇಳೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನುವ ಆರೋಪ ಮಾಡಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=7ypwUeFRkig