ಬಹುಭಾಷಾ ನಟ ಅರ್ಜುನ್ ಸರ್ಜಾ (Arjun Sarja) ಪುತ್ರಿ ಜೂನ್ 10ರಂದು ಅದ್ಧೂರಿಯಾಗಿ ಮದುವೆ ಜರುಗಿತು. ತಮಿಳು ನಟ ಉಮಾಪತಿ (Umapathy Ramaiah) ಜೊತೆ ಐಶ್ವರ್ಯಾ (Aishwarya Sarja) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೀಗ ಮದುವೆ ಬಳಿಕ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಪತಿ ಜೊತೆ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದಾರೆ.
ಹಲವು ವರ್ಷಗಳು ಪ್ರೀತಿಸಿ ಮದುವೆಯಾದ ಉಮಾಪತಿ ಮತ್ತು ಐಶ್ವರ್ಯಾ ಖುಷಿಯಿಂದ ಮದುವೆ ಜೀವನ ಶುರು ಮಾಡಿದ್ದಾರೆ. ಚೆನ್ನೈನಲ್ಲಿ ನಡೆದ ಅದ್ಧೂರಿ ಮದುವೆ ಬಳಿಕ ಈಗ ಗ್ರ್ಯಾಂಡ್ ಆಗಿ ಪಾರ್ಟಿ ಕೂಡ ಮಾಡಿದ್ದಾರೆ. ಇದನ್ನೂ ಓದಿ:‘ಕುರುಕ್ಷೇತ್ರ’ ಸೆಟ್‌ನಲ್ಲಿ ಪವಿತ್ರಾರನ್ನು ಏನೆಂದು ಪರಿಚಯಿಸಿದ್ರು ದರ್ಶನ್? ‘ಕಾಟೇರ’ ನಟ ಹೇಳಿದಿಷ್ಟು
ಉಮಾಪತಿ ಮತ್ತು ನಟಿ ಐಶ್ವರ್ಯಾ ಲೈಟ್ ಬಣ್ಣದ ಉಡುಗೆಯಲ್ಲಿ ಮಿಂಚಿದ್ದಾರೆ. ಸಿನಿಮಾ ಹಾಡೋದಕ್ಕೆ ಮಸ್ತ್ ಆಗಿ ಹೆಜ್ಜೆ ಹಾಕಿದ್ದಾರೆ. ಪಾರ್ಟಿ ಫೋಟೋ ಶೇರ್ ಮಾಡಿ ಸುಂದರ ಸಂಜೆ ಎಂದು ನಟಿ ಅಡಿಬರಹ ನೀಡಿದ್ದಾರೆ.
ಅಂದಹಾಗೆ, ಜೂನ್ 14ರಂದು ಆರತಕ್ಷತೆ ಕಾರ್ಯಕ್ರಮ ಚೆನ್ನೈನಲ್ಲಿ ಅದ್ಧೂರಿಯಾಗಿ ಮಾಡಲಾಯ್ತು. ಈ ಸಮಾರಂಭದಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ಉಪೇಂದ್ರ, ರಜನಿಕಾಂತ್, ಶಿವಕಾರ್ತಿಕೇಯನ್, ನಟಿ ಸ್ನೇಹಾ, ವಿಜಯ್ ಸೇತುಪತಿ, ಪ್ರಭುದೇವ ಸೇರಿದಂತೆ ಅನೇಕರು ಭಾಗಿಯಾಗಿ ಶುಭಕೋರಿದ್ದರು.