ಚಿರು ಸಿಗರೇಟ್ ಸೇದಿದಾಗ ಬೆಲ್ಟ್‌ನಲ್ಲಿ ಹೊಡೆದಿದ್ದೆ : ಆತ್ಮೀಯತೆ ಬಿಚ್ಚಿಟ್ಟ ಅರ್ಜುನ್ ಸರ್ಜಾ

ಚಿರಂಜೀವಿ ಸರ್ಜಾ ನಿಧನರಾಗಿ ಇಂದಿಗೆ ಎರಡು ವರ್ಷ. ಎರಡನೇ ವರ್ಷದ ಕಾರ್ಯವನ್ನು ಇಂದು ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಚಿರು ಸಮಾಧಿಗೆ ಪೂಜೆ ಸಲ್ಲಿಸುವುದರ ಮೂಲಕ ನೆರವೇರಿಸಲಾಯಿತು. ಸರ್ಜಾ ಕುಟುಂಬದ ಅನೇಕ ಸದಸ್ಯರು ಮತ್ತು ಮೇಘನಾ ರಾಜ್ ಕುಟುಂಬದ ಸದಸ್ಯರು ಹಾಗೂ ಚಿರು ಅವರ ಆಪ್ತ ಸ್ನೇಹಿತರು ಮತ್ತು ಅಭಿಮಾನಿಗಳು ಕೂಡ ಇಂದು ಸಮಾಧಿಗೆ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಚಿರು ಮಾವ ಅರ್ಜುನ್ ಸರ್ಜಾ ಅವರು ಚಿರು ಜೊತೆಗಿನ ಒಡನಾಟವನ್ನು ಹಂಚಿಕೊಂಡರು. ಚಿರುನನ್ನು ನಾನೇ ಸ್ಕೂಲ್‌ಗೆ ಬಿಟ್ಟು ಬರುತ್ತಿದ್ದೆ. ಆಕ್ಟಿಂಗ್ ಸ್ಕೂಲ್‌ಗೆ ಕಳುಹಿಸಿದ್ದೆ. ಅಲ್ಲದೇ ಅವರು ಸಿಗರೇಟ್ ಸೇದಿದಾಗ ಬೆಲ್ಟ್‌ನಲ್ಲಿ ಹೊಡೆದಿದ್ದೆ. ಅಷ್ಟರ ಮಟ್ಟಿಗೆ ನಮ್ಮ ಆತ್ಮೀಯತೆ ಇತ್ತು. ಈಗ ಅವನು ನಮ್ಮ ಜೊತೆ ಇಲ್ಲ ಅನ್ನುವುದನ್ನು ನೆನಪಿಸಿಕೊಳ್ಳುವುದಕ್ಕೆ ಆಗುತ್ತಿಲ್ಲ ಎಂದು ಅವರು ಮಾತನಾಡಿದರು. ಇದನ್ನೂ ಓದಿ : Exclusive – ವಾಣಿಜ್ಯ ಮಂಡಳಿಯಲ್ಲಿ ಕೋಟ್ಯಂತರ ದುರುಪಯೋಗ? : ರಾಜೇಂದ್ರ ಸಿಂಗ್ ಬಾಬು ಹೇಳಿದ್ದೇನು?
ಚಿರು ಎಲ್ಲವನ್ನ ನೋಡುತ್ತಿರುತ್ತಾನೆ. ಕರುನಾಡ ಜನತೆ, ಚಿರು ಫ್ಯಾನ್ಸ್ ಅವನನ್ನು ಬಹಳ ಮಿಸ್ ಮಾಡಿಕೊಳ್ತಿದ್ದಾರೆ. ನಾನು ಚಿರು ನೆನಸಿಕೊಳ್ಳದ ದಿನವೇ ಇಲ್ಲ. ಯಾವ ಕೆಲಸ ಮಾಡಿದ್ರು ಚಿರು ಬಹಳ ನೆನಪಾಗ್ತಾನೆ. ನಿನ್ನ ನೆನಪು ಯಾವಗಲೂ ಮನದಲ್ಲಿ ಇರುತ್ತೆ. ಚಿರು ವಿ ಲವ್ ಯು ಮಿಸ್ ಯು. ಚಿರು ಆತ್ಮಕ್ಕೆ ಶಾಂತಿ ಸಿಗಲಿ ಅಂತ ದೇವರಲ್ಲಿ ಬೇಡ್ತೀವಿ. ಎಲ್ಲರಿಗೂ ಸರ್ಜಾ ಫ್ಯಾಮಿಲಿಯ ಧನ್ಯವಾದ ಹೇಳ್ತೀವಿ ಎಂದರು ಅರ್ಜುನ್ ಸರ್ಜಾ.