ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ (Arjun Sarja) ಪುತ್ರಿ ಐಶ್ವರ್ಯಾ ಹಸೆಮಣೆ ಏರಲು ರೆಡಿಯಾಗಿದ್ದಾರೆ. ತಮಿಳಿನ ಖ್ಯಾತ ನಟ ತಂಬಿ ರಾಮಯ್ಯ ಪುತ್ರ ಉಮಾಪತಿ ರಾಮಯ್ಯ (Umapathy ramaiah) ಜೊತೆ ನಟಿ ಮದುವೆಯಾಗಲಿದ್ದಾರೆ. ಸದ್ಯ ಮದುವೆಯ (Wedding) ದಿನಾಂಕ ಕೂಡ ನಿಗದಿಯಾಗಿದೆ.
ನಟಿ ಐಶ್ವರ್ಯಾ ಸರ್ಜಾ (Aishwarya Sarja) ಅವರು ಜೂನ್ 10ಕ್ಕೆ ಚೆನ್ನೈನಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆ ಜರುಗಲಿದೆ. ಎರಡು ಕುಟುಂಬವು ಕಲಾವಿದರ ಕುಟುಂಬವೇ ಆಗಿರುವ ಕಾರಣ, ಕನ್ನಡ ಮತ್ತು ಸೌತ್‌ನ ನಟ, ನಟಿಯರಿಗೆ ಈ ಮದುವೆಗೆ ಆಹ್ವಾನ ಇರಲಿದೆ. ಇದನ್ನೂ ಓದಿ:ಮತ್ತಷ್ಟು ಎತ್ತರಕ್ಕೆ ಏರುತ್ತೀಯ- ‘ಕೆಜಿಎಫ್’ ನಟಿಗೆ ದೈವದ ಅಭಯ
ತಮಿಳು ನಟ ಉಮಾಪತಿ ಮತ್ತು ಐಶ್ವರ್ಯಾ ಇಬ್ಬರೂ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಕಳೆದ ಅಕ್ಟೋಬರ್ 27ರಂದು ಚೆನ್ನೈನಲ್ಲಿ ಅದ್ಧೂರಿಯಾಗಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ಈ ಸಂಭ್ರಮದಲ್ಲಿ ಧ್ರುವ ಸರ್ಜಾ ಸೇರಿದಂತೆ ಅನೇಕರು ಭಾಗಿಯಾಗಿದ್ದರು.
ಅಂದಹಾಗೆ, ಐಶ್ವರ್ಯಾ ಅವರು 2018ರಲ್ಲಿ ‘ಪ್ರೇಮ ಬರಹ’ (Prema Baraha) ಚಿತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ ಚಂದನ್ ಕುಮಾರ್‌ಗೆ ನಾಯಕಿಯಾಗಿದ್ದರು. ಮಗಳ ಚಿತ್ರಕ್ಕೆ ಅರ್ಜುನ್ ಸರ್ಜಾ ನಿರ್ದೇಶನ ಮಾಡಿದ್ದರು. ಈ ಚಿತ್ರ ಕನ್ನಡ ಮತ್ತು ತಮಿಳಿನಲ್ಲಿ ತೆರೆಕಂಡಿತ್ತು.