ಬಹುಭಾಷಾ ನಟ ಅರ್ಜುನ್ ಸರ್ಜಾ (Arjun Sarja) ಪುತ್ರಿ ಐಶ್ವರ್ಯಾ (Aishwarya Sarja) ಮತ್ತು ಉಮಾಪತಿ ರಾಮಯ್ಯ ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ಸೌತ್ ಸೆಲೆಬ್ರಿಟಿಗಳ ದಂಡೇ ಹಾಜರಿ ಹಾಕಿತ್ತು. ಆರತಕ್ಷತೆಯ ಸುಂದರ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿವೆ.
‘ಪ್ರೇಮ ಬರಹ’ ನಟಿ ಐಶ್ವರ್ಯಾ ಸರ್ಜಾ ಆರತಕ್ಷತೆಯಲ್ಲಿ ರಿಯಲ್ ಸ್ಟಾರ್ ಉಪೇಂದ್ರ (Upendra), ಡೈರೆಕ್ಟರ್ ಲೋಕೇಶ್ ಕನಗರಾಜ್, ‘ಅಂಜದ ಗಂಡು’ ನಟಿ ಖುಷ್ಬೂ ಭಾಗಿಯಾಗಿದ್ದರು.
ಅದಷ್ಟೇ ಅಲ್ಲ, ಅಶ್ವಿನಿ ಪುನೀತ್ ರಾಜ್‌ಕುಮಾರ್, ತಮಿಳು ನಟ ಶಿವಕಾರ್ತಿಕೇಯನ್, ಪ್ರಭುದೇವ, ವಿಜಯ್ ಸೇತುಪತಿ (Vijay Sethupathi), ರಜನಿಕಾಂತ್ (Rajanikanth) ಸೇರಿದಂತೆ ಅನೇಕರು ಭಾಗಿಯಾಗಿ ಶುಭಹಾರೈಸಿದ್ದಾರೆ.
ಆರತಕ್ಷತೆಯಲ್ಲಿ ನಟ ಉಮಾಪತಿ (Actor Umapathy Ramaiah) ಕಪ್ಪು ಬಣ್ಣದ ಸೂಟ್‌ನಲ್ಲಿ ಮಿಂಚಿದ್ರೆ, ಐಶ್ವರ್ಯಾ ಸರ್ಜಾ ಪಿಂಕ್ ಕಲರ್ ಡಿಸೈನರ್ ಸೀರೆಯಲ್ಲಿ ಕಂಗೊಳಿಸಿದ್ದಾರೆ.
ಜೂನ್ 10ರಂದು ಐಶ್ವರ್ಯಾ ಮತ್ತು ಉಮಾಪತಿ ಚೆನ್ನೈನಲ್ಲಿ ಅದ್ಧೂರಿಯಾಗಿ ನಡೆಯಿತು. ಇದನ್ನೂ ಓದಿ:ಬಾಹುಬಲಿ ಶಿವಗಾಮಿ ರೀತಿ ನೀರಿನಲ್ಲಿ ಮುಳುಗಿ ಮಕ್ಕಳನ್ನು ಎತ್ತಿದ ನಯನತಾರಾ ಪತಿ
ಚೆನ್ನೈನ ಅಂಜನಸುತ ಶ್ರೀ ಯೋಗಾಂಜನೇಯ ದೇವಸ್ಥಾನದಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಮದುವೆ ನಡೆಯಿತು. ಇದನ್ನೂ ಓದಿ:ಗಂಡು ಮಗುವಿಗೆ ಜನ್ಮ ನೀಡಿದ ‘ಹೆಬ್ಬುಲಿ’ ನಟಿ
ಜೂನ್ 7ರಿಂದ ಅರಿಶಿನ ಶಾಸ್ತ್ರದೊಂದಿಗೆ ಮದುವೆ ಕಾರ್ಯಕ್ರಮಗಳು ಆರಂಭವಾದವು. ಆ ನಂತರ ಸಂಗೀತ್ ಹಾಗೂ ವರಪೂಜ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.
ಐಶ್ವರ್ಯಾ ಮದುವೆಗೆ ಸಂಗೀತ್ ಸಮಾರಂಭಕ್ಕೆ ಹೆಸರಾಂತ ಕಲಾ ನಿರ್ದೇಶಕ ಮೋಹನ್ ಅವರು ಅದ್ಧೂರಿ ಸೆಟ್ ಹಾಕಿದ್ದರು. ಎರಡು ಕಟುಂಬದ ಬಂಧುಗಳು ಹಾಗೂ ಹತ್ತಿರದ ಮಿತ್ರರು ಈ ವಿವಾಹ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.