ನಟ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಸರ್ಜಾ (Aishwarya Sarja) ಜೂನ್ 10ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಚೆನ್ನೈ ಹನುಮಾನ್ ದೇವಸ್ಥಾನದಲ್ಲಿ ಉಮಾಪತಿ (Actor Umapathy Ramaiah) ಜೊತೆ ಐಶ್ವರ್ಯಾ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಹಲವು ವರ್ಷಗಳ ಪ್ರೀತಿಗೆ ಮದುವೆಯೆಂಬ ಹೊಸ ಬಂಧಕ್ಕೆ ಈ ಜೋಡಿ ಕಾಲಿಟ್ಟಿದೆ. ಸದ್ಯ ಮದುವೆಯ (Wedding) ಸುಂದರ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ.
ಐಶ್ವರ್ಯಾ ಸರ್ಜಾ ಕೆಂಪು ಬಣ್ಣದ ಸೀರೆಯಲ್ಲಿ ಕಂಗೊಳಿಸಿದ್ರೆ, ಲೈಟ್ ಬಣ್ಣದ ಶರ್ಟ್ ಮತ್ತು ಪಂಚೆ ಧರಿಸಿ ವರ ಉಮಾಪತಿ ಮಿಂಚಿದ್ದಾರೆ. 10-06-2024 ಎಂದಷ್ಟೇ ನಟಿ ಸೋಷಿಯಲ್ ಮೀಡಿಯಾದಲ್ಲಿ ಅಡಿಬರಹ ನೀಡಿದ್ದಾರೆ.
Advertisement
ಕಾಲಿವುಡ್ ನಟ ತಂಬಿ ರಾಮಯ್ಯ ಪುತ್ರನ ಜೊತೆ ಮದುವೆಯಾಗಿರುವ ‘ಪ್ರೇಮ ಬರಹ’ ನಟಿಗೆ ತಮಿಳು ಮತ್ತು ಕನ್ನಡದ ಸೆಲೆಬ್ರಿಟಿಗಳು ಶುಭಕೋರಿದ್ದಾರೆ. ಅಭಿಮಾನಿಗಳು ಕೂಡ ಹೊಸ ಜೋಡಿಗೆ ಸೋಷಿಯಲ್ ಮೀಡಿಯಾದಲ್ಲಿ ವಿಶ್ ಮಾಡಿದ್ದಾರೆ. ಇದನ್ನೂ ಓದಿ:ರವಿತೇಜಗೆ ಶ್ರೀಲೀಲಾ ಹೀರೋಯಿನ್- ಹೊಸ ಚಿತ್ರಕ್ಕೆ ಅದ್ಧೂರಿ ಚಾಲನೆ
Advertisement
Advertisement
ಐಶ್ವರ್ಯಾ ಮತ್ತು ತಮಿಳು ನಟ ಉಮಾಪತಿ ರಾಮಯ್ಯ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಬ್ಬರ ಪ್ರೀತಿಗೆ ಎರಡು ಕುಟುಂಬದ ಸಮ್ಮತಿಯ ಮೇರೆಗೆ ಇತ್ತೀಚೆಗೆ ಅದ್ಧೂರಿಯಾಗಿ ಎಂಗೇಂಜ್‌ಮೆಂಟ್ ನಡೆದಿತ್ತು.
Advertisement
ಅಂದಹಾಗೆ, ಐಶ್ವರ್ಯಾ ಅವರು 2018ರಲ್ಲಿ ‘ಪ್ರೇಮ ಬರಹ’ (Prema Baraha) ಚಿತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ ಚಂದನ್ ಕುಮಾರ್‌ಗೆ ನಾಯಕಿಯಾಗಿದ್ದರು. ಮಗಳ ಚಿತ್ರಕ್ಕೆ ಅರ್ಜುನ್ ಸರ್ಜಾ ನಿರ್ದೇಶನ ಮಾಡಿದ್ದರು. ಈ ಚಿತ್ರ ಕನ್ನಡ ಮತ್ತು ತಮಿಳಿನಲ್ಲಿ ತೆರೆಕಂಡಿತ್ತು.