ಬೆಂಗಳೂರು: ಇಮೇಲ್ ಮತ್ತು ಟ್ವಿಟ್ಟರ್ ಹ್ಯಾಕ್ ಮಾಡಿದ ಹಿನ್ನೆಲೆಯಲ್ಲಿ ಅರ್ಜುನ್ ಸರ್ಜಾ ಅವರು ಫೈರ್ ಸಂಸ್ಥೆ ವಿರುದ್ಧ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.
ದುಷ್ಕರ್ಮಿಗಳು ಪ್ರೀಪ್ಲಾನ್ ಮಾಡಿಕೊಂಡು ಕಳೆದ ಆರು ತಿಂಗಳಿಂದ ಹ್ಯಾಕ್ ಮಾಡುತ್ತಿದ್ದಾರೆ. ಜೊತೆಗೆ ಇಮೇಲ್ ಹ್ಯಾಕ್ ಮಾಡಿದ ದುಷ್ಕರ್ಮಿಗಳು ವಿವಿಧ ಮೇಲ್‍ಗಳನ್ನು ಕಳಿಸುತ್ತಿದ್ದಾರೆ. ಹೀಗಾಗಿ ದೂರಿಗೆ ಸಂಬಂಧಿಸಿದಂತೆ ಕೆಲವು ದಾಖಲೆಗಳನ್ನು ಅರ್ಜುನ್ ಸರ್ಜಾ ಮ್ಯಾನೇಜರ್ ಶಿವಾರ್ಜುನ್ ಅವರು ಇಂದು ತಲುಪಿಸಿದ್ದಾರೆ ಎಂದು ಪಬ್ಲಿಕ್ ಟಿವಿಗೆ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಹೇಳಿದ್ದಾರೆ. ಇದನ್ನು ಓದಿ: ಅರ್ಜುನ್ ಸರ್ಜಾ- ಶೃತಿ ಹರಿಹರನ್ ಸಂಧಾನಕ್ಕೆ 1.5 ಕೋಟಿ ರೂ. ಬೇಡಿಕೆ!
Advertisement
Advertisement
ಹ್ಯಾಕ್ ಮಾಡಿರುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಆದರೆ ಕೆಲವು ದಾಖಲೆಗಳನ್ನು ನನಗೆ ನೀಡಿರುವ ಅರ್ಜುನ್ ಸರ್ಜಾ ಅವರು, ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಅವರಿಗೆ ನೀಡುವಂತೆ ತಿಳಿಸಿದ್ದರು. ಹೀಗಾಗಿ ನಾನು ಪೊಲೀಸ್ ಆಯುಕ್ತರ ಕಚೇರಿಗೆ ಬಂದಿದ್ದೇನೆ. ಅರ್ಜುನ್ ಸರ್ಜಾ ಅವರು ಇಂದು ಬೆಂಗಳೂರಿಗೆ ಆಗಮಿಸಲಿದ್ದಾರೆ ಎಂದು ಮ್ಯಾನೇಜರ್ ಶಿವಾರ್ಜುನ್ ತಿಳಿಸಿದರು. ಇದನ್ನು ಓದಿ: 1.5 ಕೋಟಿ ರೂ. ಡೀಲಿಂಗ್ – ಶೃತಿ ಹರಿಹರನ್ ಸ್ಪಷ್ಟನೆ
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
Advertisement
https://youtu.be/gfp5lTX7YXI