9 ತಿಂಗಳ ಬಳಿಕ ಕ್ಯಾಪ್ ತೆಗೆದ ಅರ್ಜುನ್ ಕಪೂರ್

Public TV
1 Min Read
Arjun Kapoor f

-ಖುಷಿಯಿಂದ ಕುಣಿದ ಮಲೈಕಾ

ಮುಂಬೈ: ಬಾಲಿವುಡ್ ಲವರ್ ಬಾಯ್ ಪಟ್ಟದಲ್ಲಿರೋ ಅರ್ಜುನ್ ಕಪೂರ್ 9 ತಿಂಗಳ ಬಳಿಕ ತಮ್ಮ ತಲೆಯ ಮೇಲೆ ಟೋಪಿಯನ್ನು ತೆಗೆದಿದ್ದಾರೆ. ಕ್ಯಾಪ್ ತೆಗೆಯುತ್ತಿರುವ ಸಣ್ಣ ಝಲಕ್ ವಿಡಿಯೋವನ್ನು ಇನ್‍ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಅರ್ಜುನ್ ಕಪೂರ್ ವಿಡಿಯೋ ನೋಡಿದ ಪ್ರೇಯಸಿ ಮಲೈಕಾ ಅರೋರಾ ಖುಷಿಯಿಂದ ಕುಣಿದಾಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಇನ್ಸ್ಟಾದಲ್ಲಿ ವಿಡಿಯೋ ಅಪ್ಲೋಡ್ ಮಾಡಿಕೊಂಡಿರುವ ಅರ್ಜುನ್ ಕಪೂರ್, ಪಾಣಿಪತ್ ಸಿನಿಮಾಗೆ ಪೂರ್ಣವಾಗಿ ತಲೆ ಕೂದಲಿಗೆ ಕತ್ತರಿ ಹಾಕಲಾಗಿತ್ತು. ಸಿನಿಮಾಗಾಗಿ ಲುಕ್ ರಿವೀಲ್ ಗೊಳ್ಳದಂತೆ 2018 ನವೆಂಬರ್ ನಿಂದ ಕ್ಯಾಪ್ ಧರಿಸುತ್ತಾ ಬಂದಿದ್ದೇನೆ. ಇದೀಗ ಶೂಟಿಂಗ್ ಮುಕ್ತಾಯ ಹಂತಕ್ಕೆ ತಲುಪಿದೆ. ಹಾಗಾಗಿ ಕ್ಯಾಪ್ ರಿವೀಲ್ ಮಾಡುವ ದಿನ ಬಂದಿದೆ ಎಂದು ತಮ್ಮೆಲ್ಲ ಟೋಪಿಗಳನ್ನು ತೋರಿಸಿದ್ದಾರೆ. ಕೊನೆಗೆ ಕ್ಯಾಪ್ ತೆಗೆದಿದ್ದಾರೆ.

https://www.instagram.com/p/B0X4s-Alc3F/

ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ನಡುವಿನ ಪ್ರೀತಿಯ ವಿಚಾರ ಬಾಲಿವುಡ್‍ನ ಗಲ್ಲಿ ಗಲ್ಲಿಗೂ ಗೊತ್ತು. ಆದ್ರೆ ಇಂದಿಗೂ ಈ ಜೋಡಿ ಅಧಿಕೃತವಾಗಿ ತಮ್ಮ ವಿಚಾರವನ್ನು ತಿಳಿಸದೇ ಪರೋಕ್ಷವಾಗಿ ಹೇಳುತ್ತಾ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಒಬ್ಬರನ್ನೊಬ್ಬರ ಫೋಟೋಗಳಿಗೆ ಕಮೆಂಟ್ ಮಾಡೋದು, ಹುಟ್ಟುಹಬ್ಬಕ್ಕೆ ಶುಭಕೋರುವ ಮೂಲಕ ತಮ್ಮ ಅಭಿಮಾನಿಗಳಿಗೆ ತಮ್ಮ ಪ್ರೀತಿಯ ವಿಷಯವನ್ನು ಹೇಳುತ್ತಾ ಬಂದಿದ್ದಾರೆ.

ಈ ಹಿಂದೆ ಮಲೈಕಾ ಅರೋರಾ, ನಾನು ನನಗಿಂತ ಚಿಕ್ಕ ವಯಸ್ಸಿನ ಹುಡುಗನನ್ನು ಪ್ರೀತಿಸುತ್ತಿದ್ದೇನೆ. ಮುಂದೆ ಮದುವೆಯಾಗುತ್ತೇನೆ. ಇದರಿಂದ ಯಾರಿಗಾದ್ರೂ ತೊಂದರೆ ಇದೆಯಾ? ಎಂದು ಖಾರವಾಗಿ ಹೇಳಿದ್ದರು.

https://www.instagram.com/p/B0XvmF9FTVm/

Share This Article
Leave a Comment

Leave a Reply

Your email address will not be published. Required fields are marked *