ಕೆಲಸ ನೋಡಿ ಕತ್ರಿನಾಗೆ ಆಮಂತ್ರಣ ನೀಡಿದ ಅರ್ಜುನ್ ಕಪೂರ್

Public TV
1 Min Read
Arjun Kapoor Katrina Kaif

ಮುಂಬೈ: ಬಾಲಿವುಡ್ ನಟಿ ಕತ್ರಿನಾ ಕೈಫ್ ಕೆಲಸ ನೋಡಿದ ನಟ ಅರ್ಜುನ್ ಕಪೂರ್ ತಮ್ಮ ಮನೆಗೆ ಆಹ್ವಾನ ನೀಡಿದ್ದಾರೆ.

ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಇಡೀ ದೇಶವೇ ಸ್ತಬ್ಧವಾಗಿದೆ. ಸಿನಿಮಾ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ಚಿತ್ರರಂಗ ಎಲ್ಲ ಸ್ಟಾರ್ ಗಳು ಮನೆಯಲ್ಲಿ ಕುಟುಂಬಸ್ಥರೊಂದಿಗೆ ಸಮಯ ಕಳೆಯುತ್ತಿದ್ದಾರೆ. ತಮ್ಮ ಅಮೂಲ್ಯ ಕ್ಷಣಗಳನ್ನು ಮೊಬೈಲಿನಲ್ಲಿ ಸೆರೆಹಿಡಿದುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, ನೀವು ನಿಮ್ಮ ಮನೆಗಳಲ್ಲಿ ಇರಿ ಎಂಬ ಸಂದೇಶವನ್ನು ತಮ್ಮ ಅಭಿಮಾನಿಗಳಿಗೆ ನೀಡುತ್ತಿದ್ದಾರೆ.

ಇದೇ ರೀತಿ ಬಾಲಿವುಡ್ ಸೆಕ್ಸಿ ಲೇಡಿ ಕತ್ರಿನಾ ಕೈಫ್ ಮನೆ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಕತ್ರಿನಾ ಪಾತ್ರೆ ತೊಳೆಯುತ್ತಿರುವ ವಿಡಿಯೋ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಅಭಿಮಾನಿಗಳು ಫನ್ನಿಯಾಗಿ ಕಮೆಂಟ್ ನೀಡಲು ಆರಂಭಿಸಿದ್ದಾರೆ. ನಟ ಅರ್ಜುನ್ ಕಪೂರ್ ಸಹ ಕಮೆಂಟ್ ಮಾಡಿದ್ದು, ನಮ್ಮ ಮನೆಗೆ ನಿಮಗೆ ಆಹ್ವಾನ ಕೊಡುತ್ತಿದ್ದೇನೆ. ಕಾಂತಾಬಾಯಿ 2.0 ಎಂದು ಬರೆದು ಕತ್ರಿನಾರ ಕಾಲೆಳೆದಿದ್ದಾರೆ.

 

View this post on Instagram

 

???? +????=???????? really makes u appreciate all the help we have at home #socialdistancing #staysafe #helpoutathome

A post shared by Katrina Kaif (@katrinakaif) on

Share This Article
Leave a Comment

Leave a Reply

Your email address will not be published. Required fields are marked *