ಭರಾಟೆಯಲ್ಲಿ ಭಾಗಿಯಾದ್ರು ಅರ್ಜುನ್ ಜನ್ಯ!

Public TV
1 Min Read
arjun janya sri murali

ಬೆಂಗಳೂರು: ಶ್ರೀಮುರುಳಿ ಅಭಿನಯದ ಭರಾಟೆ ಚಿತ್ರ ಪ್ರಚಾರದ ಭರಾಟೆಯಲ್ಲಿಯೂ ಮುಂದಿದೆ. ಮೊದಲ ಫೋಟೋ ಶೂಟ್ ಅನ್ನೇ ಅದ್ಧೂರಿಯಾಗಿ ಮುಗಿಸಿಕೊಂಡಿರೋ ಚಿತ್ರತಂಡ ಈ ಮೂಲಕವೇ ಎಬ್ಬಿಸಿರೋ ಹವಾ ಸಣ್ಣ ಮಟ್ಟದ್ದೇನಲ್ಲ. ಇಂಥಾ ಅಬ್ಬರದೊಂದಿಗೇ ಈ ಚಿತ್ರತಂಡಕ್ಕೆ ಹೊಸಬರ ಸೇರ್ಪಡೆಯೂ ಮುಂದುವರೆದಿದೆ. ಇದೀಗ ಅರ್ಜುನ್ ಜನ್ಯ ಈ ಚಿತ್ರದ ಸಂಗೀತ ನಿರ್ದೇಶಕರಾಗಿ ಎಂಟ್ರಿ ಕೊಟ್ಟಿದ್ದಾರೆ!

ಅರ್ಜುನ್ ಜನ್ಯ ಎಂಟ್ರಿಯ ಮೂಲಕ ಈ ಚಿತ್ರದ ಹಾಡುಗಳಿಗಾಗಿಯೂ ಅಭಿಮಾನಿಗಳು ತುದಿಗಾಲಲ್ಲಿ ಕಾಯುವಂಥಾ ವಾತಾವರಣ ನಿರ್ಮಾಣವಾಗಿದೆ. ಇದಲ್ಲದೇ ಅರ್ಜುನ್ ಎಂಟ್ರಿಯಲ್ಲೊಂದು ವಿಶೇಷವೂ ಇದೆ. ಈವರೆಗೂ ಶ್ರೀಮುರಳಿ ಚಿತ್ರಗಳಿಗೆ ಇವರು ಸಂಗೀತ ನಿರ್ದೇಶನ ಮಾಡಿರಲಿಲ್ಲ. ಇನ್ನುಳಿದಂತೆ ಭರ್ಜರಿ ಚೇತನ್ ಮತ್ತು ಜನ್ಯಾ ಕಾಂಬಿನೇಷನ್ ಕೂಡಾ ಇದೇ ಮೊದಲು. ಈ ಮೂವರೂ ಇದೇ ಮೊದಲ ಬಾರಿ ಒಂದಾಗಿರೋದರಿಂದ ಹಾಡುಗಳೂ ಹೊಸಾ ರೀತಿಯಲ್ಲಿ ಕಮಾಲ್ ಮಾಡೋ ನಿರೀಕ್ಷೆಗಳೆದ್ದಿವೆ.

ಇದಲ್ಲದೇ ಆಗಸ್ಟ್ ಹದಿನೈದರಂದು ಭರಾಟೆ ಚಿತ್ರದ ವತಿಯಿಂದ ಹುಬ್ಬಳ್ಳಿಯಲ್ಲಿ ವರ್ಣರಂಜಿತವಾದ ಕಾರ್ಯಕ್ರಮವೊಂದು ನಡೆಯಲಿದೆ. ಅದರ ಮೂಲಕವೇ ಭರ್ಜರಿ ಚಿತ್ರದ ಫಸ್ಟ್ ಲುಕ್ ಅನಾವರಣಗೊಳಿಸಲು ನಿರ್ದೇಶಕ ಚೇತನ್ ಯೋಜನೆ ಹಾಕಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ತಾರಾಗಣವೂ ಸೇರಿದಂತೆ ಅನೇಕ ವಿಚಾರಗಳನ್ನು ಜಾಹೀರು ಮಾಡಲೂ ಚೇತನ್ ಮುಂದಾಗಿದ್ದಾರೆ.

ಸದ್ಯಕ್ಕೆ ಅರ್ಜುನ್ ಜನ್ಯ ಹಿಟ್ ಹಾಡುಗಳನ್ನು ಸಾಲು ಸಾಲಾಗಿ ನೀಡುತ್ತಾ ಚಾಲ್ತಿಯಲ್ಲಿರುವ ಸಂಗೀತ ನಿರ್ದೇಶಕ. ಚಿತ್ರದಿಂದ ಚಿತ್ರಕ್ಕೆ ಹೊಸತನಗಳಿಗೆ ಹಾತೊರೆಯುತ್ತಲೇ ಹೊಸಾ ಪ್ರಯೋಗಗಳನ್ನೂ ನಡೆಸುವ ಜನ್ಯಾ ಭರಾಟೆ ಚಿತ್ರದಲ್ಲಿ ಎಂಥಾ ಮೋಡಿ ಮಾಡಲಿದ್ದಾರೆಂಬುದರ ಸುತ್ತಾ ಇದೀಗ ಪ್ರೇಕ್ಷಕರ ಗಮನ ಕೇಂದ್ರೀಕೃತಗೊಂಡಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *