CinemaDistrictsKarnatakaLatestMain PostSandalwoodSouth cinema

ಪ್ರಶಾಂತ್ ರಾಜ್ ನಿರ್ದೇಶನದ ತಮಿಳು ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶಕ

ಲವ್ ಗುರು ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಮೂಡಿಸಿದ್ದ ಪ್ರಶಾಂತ್ ರಾಜ್ ಇದೀಗ ಸದ್ದಿಲ್ಲದೇ ತಮಿಳು ಸಿನಿಮಾ ರಂಗಕ್ಕೆ ಹಾರಿದ್ದಾರೆ. ಇದೇ ಮೊದಲ ಬಾರಿಗೆ ಅವರು ತಮಿಳು ಚಿತ್ರವೊಂದನ್ನು ನಿರ್ದೇಶನ ಮಾಡುತ್ತಿದ್ದು, ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಪ್ರಶಾಂತ್ ರಾಜ್ ಸಿನಿಮಾಗಳೆಂದರೆ ಅಲ್ಲಿ ಸಂಗೀತಕ್ಕೆ ಹೆಚ್ಚಿನ ಪ್ರಾಧಾನ್ಯತೆ ಇರುತ್ತದೆ. ಅಲ್ಲದೇ, ಮೆಲೊಡಿಗೂ ಅವರು ಹೆಚ್ಚು ಒತ್ತು ಕೊಡುತ್ತಾರೆ. ಈವರೆಗೂ ಪ್ರಶಾಂತ್ ರಾಜ್ ನಿರ್ದೇಶನದಲ್ಲಿ ಮೂಡಿ ಬಂದ ಚಿತ್ರಗಳಲ್ಲಿ ಹಾಡುಗಳು ಸೂಪರ್ ಹಿಟ್ ಆಗಿವೆ. ಹೀಗಾಗಿ ಪ್ರಶಾಂತ್ ರಾಜ್ ಮತ್ತು ಅರ್ಜುನ್ ಜನ್ಯ ಕಾಂಬಿನೇಷನ್ ನ ಹಾಡುಗಳು ಬಗ್ಗೆ ಈಗಿಂದಲೇ ಕುತೂಹಲ ಹೆಚ್ಚಾಗಿದೆ.

ಸಿನಿಮಾ ತಮಿಳದ್ದಾದರೂ, ಬಹುತೇಕ ಕನ್ನಡದ ತಂತ್ರಜ್ಞರು ಮತ್ತು ಕಲಾವಿದರು ಈ ಸಿನಿಮಾದಲ್ಲಿ ಇರಲಿದ್ದಾರೆ ಎಂದು ಈ ಹಿಂದೆ ಪ್ರಶಾಂತ್ ರಾಜ್ ಹೇಳಿದ್ದರು. ಕನ್ನಡದ ಹುಡುಗಿಯನ್ನೇ ನಾಯಕಿಯನ್ನಾಗಿ ಆಯ್ಕೆ ಮಾಡುವೆ ಎಂದೂ ತಿಳಿಸಿದ್ದರು. ಕೊಟ್ಟ ಮಾತಿನಂತೆ ಕನ್ನಡದ ನಟಿಯನ್ನೇ ನಾಯಕಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ತಾನ್ಯ ಹೋಪ್ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದನ್ನೂ ಓದಿ : ಕೆಜಿಎಫ್ 2 : ಕಿಚ್ಚ ಸುದೀಪ್ ಮತ್ತು ಯಶ್ ಮಧ್ಯೆ ತಂದಿಡುತ್ತಿದೆ ವೈರಲ್ ವಿಡಿಯೋ

ಲವ್ ಗುರು ಸೇರಿದಂತೆ ಅನೇಕ ಚಿತ್ರಗಳಿಗೆ ನಿರ್ದೇಶನ ಮಾಡಿರುವ ಪ್ರಶಾಂತ್ ರಾಜ್, ಇದೇ ಮೊದಲ ಬಾರಿಗೆ ತಮಿಳು ಚಿತ್ರ ಮಾಡುತ್ತಿದ್ದು, ತಮ್ಮದೇ ಆದ ಶೈಲಿಯ ಕಥೆಯನ್ನೇ ತಮಿಳಿನಲ್ಲೂ ಆಯ್ಕೆ ಮಾಡಿದ್ದಾರೆ. ಲವ್, ಕಲರ್ ಫುಲ್ ಮತ್ತು ಮ್ಯೂಸಿಕ್ ಈ ಮೂರು ಪ್ರಶಾಂತ್ ರಾಜ್ ಮಂತ್ರಗಳು. ಅವರ ಬಹುತೇಕ ಚಿತ್ರಗಳು ಕಲರ್ ಫುಲ್ ಆಗಿ ಮೂಡಿ ಬಂದಿವೆ. ಹೊಸ ಹೊಸ ಲೊಕೇಶನ್ ಗಳಲ್ಲಿ ಚಿತ್ರಿತವಾಗಿವೆ. ತಮಿಳು ಸಿನಿಮಾದಲ್ಲೂ ಈ ಸೂತ್ರವನ್ನೇ ಅವರು ಪಾಲಿಸಿಕೊಂಡು ಹೋಗುತ್ತಿದ್ದಾರಂತೆ. ಇದನ್ನೂ ಓದಿ: ತಾಯಿಯಾಗುತ್ತಿದ್ದಾರೆ ಚಂದ್ರನ ರಾಣಿ ಶ್ರಿಯಾ ಸರನ್ 

ಪ್ರಶಾಂತ್ ರಾಜ್ ಅವರ ತಮಿಳಿನ ಚೊಚ್ಚಲು ಚಿತ್ರಕ್ಕೆ ಸಂತಾನಂ ಹೀರೋ. ಈ ತಿಂಗಳು ಕೊನೆಯಲ್ಲಿ ಶೂಟಿಂಗ್ ಶುರುವಾದರೆ, ಆಗಸ್ಟ್ ನಲ್ಲಿ ಸಿನಿಮಾ ಬಿಡುಗಡೆ ಮಾಡುವುದಾಗಿ ಹೇಳುತ್ತಾರೆ ನಿರ್ದೇಶಕರು. ಇದನ್ನೂ ಓದಿ : ಕೆಜಿಎಫ್-2 ಸಿನಿಮಾ ವೀಕ್ಷಣೆ ವೇಳೆ ಹಾರಿದ ಗುಂಡು- ಯುವಕನ ಹೊಟ್ಟೆಗೆ ಗಾಯ

ಸಾಧು ಕೋಕಿಲಾ ಸೇರಿದಂತೆ ಕೆಲ ನಟರೂ ಈ ಸಿನಿಮಾದಲ್ಲಿ ನಟಿಸಲಿದ್ದಾರೆ. ಸುಧಾಕರ್ ಅವರ ಸಿನಿಮಾಟೋಗ್ರಫಿ ಚಿತ್ರಕ್ಕಿರಲಿದೆ. ಕನ್ನಡದ ಸಂಗೀತ ನಿರ್ದೇಶಕರೇ ಈ ಸಿನಿಮಾದಲ್ಲಿ ಕೆಲಸ ಮಾಡಲಿದ್ದಾರೆ.

Leave a Reply

Your email address will not be published.

Back to top button