ಇದೇ ಮೊದಲ ಬಾರಿಗೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಶಿವರಾಜ್ ಕುಮಾರ್ ನಟನೆಯ ಸಿನಿಮಾದ ಮೂಲಕ ಅವರು ನಿರ್ದೇಶಕರಾಗಿ ಲಾಂಚ್ ಆಗುತ್ತಿದ್ದಾರೆ. ಈ ಸಿನಿಮಾದ ಟೈಟಲ್ ನಾಳೆ ಲಾಂಚ್ ಆಗುತ್ತಿದ್ದು, ದಕ್ಷಿಣದ ಮೂವರು ಸ್ಟಾರ್ ನಟರು ಶೀರ್ಷಿಕೆಯನ್ನು ಅನಾವರಣ ಗೊಳಿಸಲಿದ್ದಾರೆ.
ನಾಳೆ ಶಿವರಾಜ್ ಕುಮಾರ್ ಹುಟ್ಟು ಹಬ್ಬ. ಹಾಗಾಗಿ ಟೈಟಲ್ ಲಾಂಚ್ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ. ಈ ಸಿನಿಮಾ ನಾಲ್ಕು ಭಾಷೆಗಳಲ್ಲಿ ಮೂಡಿ ಬರುತ್ತಿರುವುದರಿಂದ, ಆಯಾ ಭಾಷೆಯಲ್ಲಿ ಹೆಸರು ಮಾಡಿರುವ ಕಲಾವಿದರು ಟೈಟಲ್ ಲಾಂಚ್ ಮಾಡುತ್ತಿರುವುದು ವಿಶೇಷ. ಕನ್ನಡದಲ್ಲಿ ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಅವರೇ ಟೈಟಲ್ ಘೋಷಣೆ ಮಾಡಲಿದ್ದಾರೆ. ತೆಲುಗಿನಲ್ಲಿ ಅಕ್ಕಿನೇನ ನಾಗಾರ್ಜುನ್, ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರನ್, ತಮಿಳಿನಲ್ಲಿ ಶಿವಕಾರ್ತಿಕೇನ್ ಟೈಟಲ್ ಲಾಂಚ್ ಮಾಡಲಿದ್ದಾರೆ. ಇದನ್ನೂ ಓದಿ:ಸೀರೆಯಲ್ಲಿ ಮಿಂಚಿದ ಉರ್ಫಿ ಜಾವೇದ್: ಹೀಗೂ ಸೀರೆ ಉಡಬಹುದಾ ಎಂದ ಫ್ಯಾನ್ಸ್
ಅರ್ಜುನ್ ಜನ್ಯ ಸಂಗೀತ ಮತ್ತು ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರಲಿದ್ದು, ಗಾಳಿಪಟ 2 ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿರುವ ರಮೇಶ್ ರೆಡ್ಡಿ ಅವರು ಈ ಚಿತ್ರದ ನಿರ್ಮಾಪಕರು. ಭಾರೀ ಬಜೆಟ್ ನಲ್ಲೇ ಈ ಸಿನಿಮಾ ಮೂಡಿ ಬರಲಿದೆಯಂತೆ. ಅಂದುಕೊಂಡಂತೆ ಆದರೆ, ಇನ್ನೆರಡು ತಿಂಗಳ ಒಳಗೆ ಈ ಸಿನಿಮಾದ ಸೆಟ್ಟೇರಲಿದೆ ಎನ್ನಲಾಗುತ್ತಿದೆ.