ಬೆಂಗಳೂರು: `ಹೆಬ್ಬುಲಿ’ ವಿಚಾರದಲ್ಲಿ ನಟ ಕಿಚ್ಚ ಸುದೀಪ್ ಕಾಲೆಳೆದ ವಿನಯ್ ಗುರೂಜಿಗೆ ಮೈಸೂರಿನ ವಾಲ್ಮೀಕಿ ಸಮುದಾಯದ ಅರ್ಜುನ ಗುರೂಜಿ ಸಖತ್ ಟಾಂಗ್ ಕೊಟ್ಟಿದ್ದಾರೆ. ಈ ಮೂಲಕ ಇಬ್ಬರು ಅವಧೂತರ ಮಧ್ಯೆ ಬಿಗ್‍ಫೈಟ್ ಶುರುವಾಗಿದೆ.
ಇತ್ತೀಚೆಗೆ ಹೆಬ್ಬುಲಿಯಂತೆ, ಮಾಣಿಕ್ಯ ಅಂತೆ, ನಿಜವಾದ ಹೆಬ್ಬುಲಿ ಬಂದ್ರೆ ಸುದೀಪ್ ಅಲ್ಲಿ ನಿಲ್ತಾನಾ ಎಂದು ವಿನಯ್ ಗುರೂಜಿ ಸುದೀಪ್ ಕಾಲೆಳೆದಿದ್ದರು. ಇದಕ್ಕೆ ಮೈಸೂರಿನ ವಾಲ್ಮೀಕಿ ಸಮುದಾಯದ ಅರ್ಜುನ್ ಗುರೂಜಿ ಟಾಂಗ್ ಕೊಟ್ಟಿದ್ದು, ಕಲಾವಿದನನ್ನು ಪ್ರತಿಯೊಬ್ಬರು ಗೌರವಿಸೋದನ್ನು ಕಲಿಯಬೇಕು. ಸುದೀಪ್ ಎಂದರೆ ವಾಲ್ಮೀಕಿ ಸಮುದಾಯದ ಹೆಮ್ಮೆ. ಡಾ. ರಾಜ್‍ಕುಮಾರ್, ಅಂಬರೀಶ್, ವಿಷ್ಣುವರ್ಧನ್ ಎಲ್ಲರೂ ಚಲನಚಿತ್ರದ ಮೂಲಕ ಭಾಷೆಯನ್ನು ಬೆಳೆಸಿದವರು. ಚಲನಚಿತ್ರ ಅನ್ನೋದೇ ಭಾಷೆಯ ಕಲೆಯನ್ನು ತೋರಿಸುವಂತದ್ದು. ಹೀಗಾಗಿ ಕಲಾವಿದನನ್ನು ಗೌರವಿಸಬೇಕು ಎಂದು ವಿನಯ್ ಗುರೂಜಿ ವಿರುದ್ಧ ಕಿಡಿಕಾರಿದ್ದಾರೆ.
Advertisement
Advertisement
ಗುರೂಜಿ ಹೇಳಿದ್ದೇನು..?
ಸುದೀಪ್ ಸಿನಿಮಾ ನೋಡಿ ರೋಮ ಎಲ್ಲ ಎದ್ದು ನಿಲ್ಲುತ್ತೆ ಅಂತ ಹುಡುಗರು ಹೇಳುತ್ತಾರೆ. ಅವನು ಮಾಣಿಕ್ಯ- ಹೆಬ್ಬುಲಿ ಅಂತೆ. ಸರಿಯಾದ ಹುಲಿ ಬಂದ್ರೆ ಓಡಿಹೋಗುತ್ತಾರೆ ಎಂದು ಗುರೂಜಿ ಅಪಹಾಸ್ಯ ಮಾಡಿದ್ದರು. ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು. ಸುದೀಪ್ ಅವರನ್ನು ಅಪಹಾಸ್ಯ ಮಾಡಿದ್ದಕ್ಕೆ ಕಿಚ್ಚ ಫ್ಯಾನ್ಸ್, ಗುರೂಜಿ ವಿರುದ್ಧ ಆಕ್ರೋಶವನ್ನು ಹೊರಹಾಕಿದ್ದರು.