ಇಸ್ಲಾಮಾಬಾದ್: ಜೀಸಸ್ ಸರ್ವೋಚ್ಚ ದೇವರು ಎಂದು ಹೇಳಿದ ವ್ಯಕ್ತಿಗೆ ಪಾಕಿಸ್ತಾನ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿದೆ.
5 ವರ್ಷದ ಹಿಂದೆ ಧರ್ಮ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಈಗ ತೀರ್ಪು ಪ್ರಕಟಿಸಿದೆ. ಪಾಕಿಸ್ತಾನ ಸೇರಿದಂತೆ ಹಲವು ಮುಸ್ಲಿಂ ರಾಷ್ಟ್ರಗಳಲ್ಲಿ ಧರ್ಮನಿಂದನೆ ಮಾಡಿದರೆ ಗಲ್ಲು ಶಿಕ್ಷೆಯನ್ನು ವಿಧಿಸಲಾಗುತ್ತದೆ.
Advertisement
Advertisement
ಏನಿದು ಪ್ರಕರಣ?
ಜೂನ್ 2017ರಲ್ಲಿ ವ್ಯಕ್ತಿಯೊಬ್ಬನ ಬೈಕನ್ನು ಮೆಕ್ಯಾನಿಕ್ ಅಶ್ಫಾಕ್ ಮಸಿಹ್ ರಿಪೇರಿ ಮಾಡಿದ್ದ. ಈ ವೇಳೆ ಆತ ನಾನು ಧಾರ್ಮಿಕ ಭಕ್ತ ನನಗೆ ಬಿಲ್‌ನಲ್ಲಿ ಡಿಸ್ಕೌಂಟ್ ನೀಡಬೇಕು ಎಂದು ಹೇಳಿದ್ದ.
Advertisement
#AshfaqMasih appears for his first hearing in Lahore. 28-year-old Christian mechanic was alleged for #blasphemy last month in his workshop. pic.twitter.com/LS8ndTFQZe
— Naila Inayat (@nailainayat) July 2, 2017
Advertisement
ಸವಾರನ ಈ ವಾದವನ್ನು ತಿರಸ್ಕರಿಸಿ ಪೂರ್ಣ ಹಣವನ್ನು ಪಾವತಿ ಮಾಡುವಂತೆ ಅಶ್ಫಾಕ್ ಸೂಚಿಸಿದ್ದ. ಆದರೆ ಆತ ನನಗೆ ಡಿಸ್ಕೌಂಟ್ ನೀಡಲೇಬೇಕೆಂದು ಹಠ ಹಿಡಿದಿದ್ದ. ಈ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ಮಧ್ಯೆ ವಾಕ್ಸಮರ ಆರಂಭವಾಗಿದೆ. ಈ ಗಲಾಟೆ ಕೊನೆಗೆ ಧರ್ಮದ ವಿಚಾರಕ್ಕೆ ತಿರುಗಿದೆ. ಇದನ್ನೂ ಓದಿ: ಡೋಲೋ 650 ಮಾತ್ರೆ ತಯಾರಿಕಾ ಸಂಸ್ಥೆ ಮೈಕ್ರೋ ಲ್ಯಾಬ್ಸ್ ಮೇಲೆ ಐಟಿ ದಾಳಿ
ಇಬ್ಬರ ಗಲಾಟೆ ಜೋರಾಗುತ್ತಿದ್ದಂತೆ ಜನ ಸೇರಿದ್ದಾರೆ. ಕೂಡಲೇ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆ ಅಲ್ಲಿದ್ದ ಜನ ಅಶ್ಫಾಕ್ ಪ್ರವಾದಿಯನ್ನು ನಿಂದಿಸಿ ಜೀಸಸ್ ಸರ್ವೋಚ್ಚ ದೇವರು ಎಂದು ಹೇಳಿದ್ದಾನೆ ಎಂದು ಆರೋಪಿಸಿದ್ದಾರೆ. ಕೂಡಲೇ ಪೊಲೀಸರು ಅಶ್ಫಾಕ್ ವಿರುದ್ಧ ಧರ್ಮನಿಂದನೆ ಕೇಸ್ ದಾಖಲಿಸಿ ಬಂಧಿಸಿದ್ದಾರೆ.
ಅಶ್ಫಾಕ್‌ಗೆ ಪತ್ನಿ ಮತ್ತು ಮಗಳಿದ್ದಾಳೆ. 2019ರಲ್ಲಿ ತಾಯಿ ಮೃತಪಟ್ಟ ಹಿನ್ನೆಲೆಯಲ್ಲಿ ಪೆರೋಲ್‌ನಲ್ಲಿ ಪಡೆದು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ.
ಧರ್ಮನಿಂದನೆ ಮಾಡಿದರೆ ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆ ವಿಧಿಸುವುದು ಹೊಸದೆನಲ್ಲ. ಈ ವರ್ಷದ ಜನವರಿಯಲ್ಲಿ 26 ವರ್ಷದ ಮಹಿಳೆ ಪ್ರವಾದಿಯ ಬಗ್ಗೆ ಆಕ್ಷೇಪಾರ್ಹ ಪೋಸ್ಟ್ ಅನ್ನು ವಾಟ್ಸಪ್ ಸ್ಟೇಟಸ್‌ನಲ್ಲಿ ಹಾಕಿದ್ದಕ್ಕೆ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿತ್ತು.