ಬೆಂಗಳೂರು: ಪಾರ್ಕಿಂಗ್ (Parking) ವಿಚಾರವಾಗಿ ಯುವಕರ ನಡುವೆ ಗಲಾಟೆ ನಡೆದು ಓರ್ವ ಯುವಕನ ಕೊಲೆಯಲ್ಲಿ ಅಂತ್ಯವಾದ ಘಟನೆ ಚಿಕ್ಕಬಾಣಾವರದ (Chikkabanavara) ಫಂಕ್ಷನ್ ಹಾಲ್ ಬಳಿ ನಡೆದಿದೆ.
ಅರುಣ್ (22) ಕೊಲೆಯಾದ ಯುವಕ. ಈತ ಇವೆಂಟ್ ಮ್ಯಾನೇಜ್ಮೆಂಟ್ (Event Management) ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಸ್ನೇಹಿತರ ಜೊತೆ ಬೈಕ್‌ನಲ್ಲಿ ಫಂಕ್ಷನ್ ಹಾಲ್ ಬಳಿ ಬಂದಿದ್ದ. ಐವರು ಆರೋಪಿಗಳು ಸಹ ಅಲ್ಲೇ ಬೈಕ್ ಪಾರ್ಕ್ ಮಾಡಿದ್ದು, ಆತನ ಕಂಪನಿಯಲ್ಲೇ ಕೆಲಸ ಮಾಡುತ್ತಿದ್ದರು. ತಡರಾತ್ರಿ ಒಂದು ಗಂಟೆಯ ಸುಮಾರಿಗೆ ಪಾರ್ಕಿಂಗ್ ವಿಚಾರವಾಗಿ ಅರುಣ್ ಹಾಗೂ ಐವರ ನಡುವೆ ಗಲಾಟೆ ಉಂಟಾಗಿದ್ದು, ಆತನ ತಲೆಗೆ ಕಲ್ಲಿನಿಂದ ಹೊಡೆದು ಕೊಲೆ (Murder) ಮಾಡಲಾಗಿದೆ. ಇದನ್ನೂ ಓದಿ: ಬ್ಯೂಟಿ ಪಾರ್ಲರ್‌ಗೆ ಹೋಗೋದನ್ನ ತಡೆದ ಪತಿ – ಪತ್ನಿ ಆತ್ಮಹತ್ಯೆ
ಈ ಘಟನೆ ಕುರಿತು ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಕೈ, ತಲೆ ಕತ್ತರಿಸಿ ಪತ್ನಿಯ ದೇಹವನ್ನು ಸುಟ್ಟು ಹಾಕಿದ ಪಾಪಿ ಗಂಡ