ಚಿಕ್ಕಮಗಳೂರು: ಒಕ್ಕಲಿಗರ ಸಂಘದ ಕಾರ್ಯಕ್ರಮದಲ್ಲಿ ರಾಜಕೀಯ ಭಾಷಣಕ್ಕೆ ಮುಂದಾದ ಸಚಿವ ಕೆ.ಜೆ.ಜಾರ್ಜ್ (K.J.George) ಅವರಿಗೆ ವಿರೋಧದ ಬಿಸಿ ತಟ್ಟಿದೆ.
ಚಿಕ್ಕಮಗಳೂರು (Chikkamagaluru) ನಗರದ ಎಐಟಿ ವೃತ್ತದ ಬಳಿ ಇರುವ ಒಕ್ಕಲಿಗರ ಬೆಳ್ಳಿ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳ ಬಗ್ಗೆ ಜಾರ್ಜ್ ಭಾಷಣ ಮಾಡತೊಡಗಿದರು.
ಈ ವೇಳೆ ಒಕ್ಕಲಿಗ ಸಮಾಜದ ಯುವಕರು ಮಧ್ಯೆ ಪ್ರವೇಶಿಸಿ, ಇದು ರಾಜಕೀಯ ವೇದಿಕೆಯಲ್ಲ. ರಾಜಕೀಯ ಮಾತಾಡುವುದಾದರೆ ಕೆಳಗಿಳಿಯುವಂತೆ ಒತ್ತಾಯಿಸಿದರು. ಈ ಸಮಯದಲ್ಲಿ ಯುವಕರು ಮತ್ತು ಜಾರ್ಜ್ ಮಧ್ಯೆ ಸ್ವಲ್ಪ ವಾಗ್ವಾದ ನಡೆಯಿತು.
ಇದೇ ವೇಳೆ ರಾಜಕೀಯ ಮಾಡಬೇಡಿ, ನನಗೂ ರಾಜಕೀಯ ಬರುತ್ತೆ ಎಂದು ಸಚಿವರು ಸಿಟ್ಟಾಗಿದ್ದಾರೆ. ಬಳಿಕ ಶ್ರೀಗಳ (Nirmalanandanatha Swamiji) ಪ್ರವೇಶದಿಂದಾಗಿ, ಯುವಕರು ಸುಮ್ಮನಾಗಿದ್ದಾರೆ. ಇದರಿಂದ ವಾತಾವರಣ ತಿಳಿಯಾಗಿದೆ. ಬಳಿಕ ತಮ್ಮ ಮಾತಿಗೆ ಸಭೆಯಲ್ಲೇ ಸಚಿವರು ಕ್ಷಮೆಯಾಚಿಸಿದರು.