ಚೆನ್ನೈ: ನಗರದ ಬಸ್ ನಿಲ್ದಾಣವೊಂದರಲ್ಲಿ ಎರಡು ಗುಂಪಿನ ಕಾಲೇಜು ವಿದ್ಯಾರ್ಥಿನಿಯರ ನಡುವೆ ಜಗಳ ನಡೆದಿದ್ದು, ಕೈ, ಕೈ ಮೀಲಾಸಿದ್ದಾರೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ.
ಏಪ್ರಿಲ್ 26ರ ಮಂಗಳವಾರ ಉತ್ತರ ಚೆನ್ನೈನ ನ್ಯೂ ವಾಷರ್‍ಮನ್‍ಪೇಟ್‍ನ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಕಾಲೇಜು ವಿದ್ಯಾರ್ಥಿಗಳು ಬಸ್‍ಗಾಗಿ ಕಾಯುತ್ತಿದ್ದರು. ಈ ವೇಳೆ ಎರಡು ಗುಂಪಿನ ವಿದ್ಯಾರ್ಥಿನಿಯರ ನಡುವೆ ವಾಗ್ವಾದ ನಡೆದಿದೆ. ಕೊನೆಗೆ ಮಾತಿಗೆ ಮಾತು ಬೆಳೆದು ಎರಡು ಗುಂಪಿನ ವಿದ್ಯಾರ್ಥಿನಿಯರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಇದನ್ನೂ ಓದಿ: ಹನುಮಾನ್ ಚಾಲೀಸಾ ವಿಚಾರದಲ್ಲಿ ಬಿಜೆಪಿ ಜನರ ದಾರಿ ತಪ್ಪಿಸುತ್ತಿದೆ: ಸಂಜಯ್ ರಾವತ್
Advertisement
Advertisement
ಅಕ್ಕಪಕ್ಕದಲ್ಲಿ ಜನರು ನೆರೆದಿರುವುದನ್ನು ಪರಿಗಣಿಸದೇ ಸಾರ್ಜಜನಿಕವಾಗಿ ವಿದ್ಯಾರ್ಥಿನಿಯರು ನೆಲದ ಮೇಲೆ ಬಿದ್ದು ಉರುಳಾಡಿ ಒಬ್ಬರಿಗೊಬ್ಬರು ಬಡಿದಾಡಿದ್ದಾರೆ. ಇನ್ನೂ ಇವರನ್ನು ಬಿಡಿಸಲು ಯಾರಿಗೂ ಸಹ ಸಾಧ್ಯವಾಗಲಿಲ್ಲ. ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿದ್ಯಾರ್ಥಿನಿಯರು ಹೊಡೆದಾಡುತ್ತಿರುವುದನ್ನು ಕಂಡು ಮಧ್ಯಪ್ರವೇಶಿಸಿ ಜಗಳವನ್ನು ಬಿಡಿಸಿದ್ದಾರೆ. ನಂತರ ಈ ರೀತಿ ಮತ್ತೆ ಘಟನೆ ಸಂಭವಿಸಬಾರದು ಎಂದು ವಾರ್ನ್ ಮಾಡಿ ಬಿಟ್ಟುಕಳುಹಿಸಿದ್ದಾರೆ.
Advertisement
Advertisement
ಪೊಲೀಸರು ಗಸ್ತಿನಲ್ಲಿದ್ದರು ಮತ್ತು ಅವರು ಹೊಡೆದಾಟವನ್ನು ನೋಡಿದರು. ಅವರು ಮಧ್ಯಪ್ರವೇಶಿಸಿ ಗುಂಪುಗಳನ್ನು ಬೇರ್ಪಡಿಸಿದರು. ನಂತರ ವಿದ್ಯಾರ್ಥಿಗಳಿಗೆ ಸಲಹೆ ನೀಡಿ ಎಚ್ಚರಿಕೆ ನೀಡಿ ಬಿಡಲಾಯಿತು. ಇದನ್ನೂ ಓದಿ: ಏಕರೂಪ ನಾಗರಿಕ ಸಂಹಿತೆಯು ಅಲ್ಪಸಂಖ್ಯಾತರ ವಿರೋಧಿ ಕ್ರಮ: ಮುಸ್ಲಿಂ ಕಾನೂನು ಮಂಡಳಿ