ಬ್ಯೂನಸ್ ಐರಿಸ್: ಮಹಿಳಾ ಪೊಲೀಸರೊಬ್ಬರು ಕೋಮಾ ಸ್ಥಿತಿಯಲ್ಲಿವಾಗಲೇ ಮಗುವಿಗೆ ಜನ್ಮ ನೀಡಿರೋ ಅಪರೂಪದ ಘಟನೆ ಅರ್ಜೆಂಟಿನಾದಲ್ಲಿ ನಡೆದಿದೆ.
2016ರಲ್ಲಿ ಕಾರು ಅಫಘಾತದಿಂದ 34 ವರ್ಷದ ಮಹಿಳೆ ಎಮಿಲಿಯಾ ಬನ್ನಾನ್ ಕೋಮಾಗೆ ಜಾರಿದ್ದರು. ಕೋಮಾ ಸ್ಥಿತಿಯಲ್ಲೇ ಅವರು ಮಗುವಿಗೆ ಜನ್ಮ ನೀಡಿದ್ದು, ಇದೀಗ 4 ತಿಂಗಳ ನಂತರ ಪ್ರಜ್ಞೆ ಬಂದು ಮಗುವಿನ ಮುಖ ನೋಡಿದ್ದಾರೆ.
Advertisement
ಕಳೆದ ವರ್ಷ ನವೆಂಬರ್ 1ರಂದು ಪೊಲೀಸ್ ಆದ ತನ್ನ ಪತಿಯೂ ಸೇರಿದಂತೆ ಎಮಿಲಯಾ ಹಾಗೂ ಸಹೋದ್ಯೋಗಿಗಳು ತೆರಳುತ್ತಿದ್ದ ವಾಹನ ಅಪಘಾತಕ್ಕೀಡಾಗಿತ್ತು. ಘಟನೆಯಲ್ಲಿ ಎಮಿಲಿಯಾಗೆ ಗಂಭೀರ ಗಾಯಗಳಾಗಿತ್ತು. ಗಾಯಾಳು ಎಮಿಲಿಯಾರನ್ನ ಪೊಸಾಡಸ್‍ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಎಮಿಲಿಯಾ ಗರ್ಭವತಿ ಆಗಿದ್ದರು. ಕೋಮಾದಲ್ಲಿದ್ದ ಎಮಿಲಿಯಾ ಗರ್ಭಧಾರಣೆ ಅವಧಿಯಲ್ಲಿ ವೈದ್ಯರು ಕಾಳಜಿ ವಹಿಸಿದ್ರು. ನಂತರ ಕ್ರಿಸ್‍ಮಸ್‍ನ ಹಿಂದಿನ ದಿನ ಸಿಜೇರಿಯನ್ ಮಾಡುವ ಮೂಲಕ ಹೆರಿಗೆ ಮಾಡಿಸಿದ್ರು. ಮಗು ಕೂಡ ಆರೋಗ್ಯವಾಗಿತ್ತು.
Advertisement
Advertisement
ಎಮಿಲಿಯಾ ಸಹೋದರಿ ನೊರ್ಮಾ ಮಗುವಿನ ಆರೈಕೆ ಮಾಡಿದ್ರು. ಪ್ರತಿದಿನ ಸಂಜೆ 6 ಗಂಟೆ ವೇಳೆಗೆ ಮಗುವನ್ನ ಎಮಿಲಿಯಾ ಬಳಿ ಕರೆದುಕೊಂಡು ಹೋಗ್ತಿದ್ರು ಎಂದು ಸಹೋದರ ಸೀಸರ್ ಹೇಳಿದ್ದಾರೆ. ಕಳೆದ ಗುರುವಾರದಂದು ಎಮಿಲಿಯಾಗೆ ಪ್ರಜ್ಞೆ ಬಂದಿದ್ದು, ಸಹೋದರಿ ನೊರ್ಮಾ ಮಗುವನ್ನು ತಂದು ತೋರಿಸಿದಾಗ ಅದು ಸಹೋದರಿಯ ಮಗು ಎಂದು ಎಮಿಲಿಯಾ ಭಾವಿಸದ್ದರಂತೆ. ನಂತರ ಆಕೆಯ ಕುಟುಂಬಸ್ಥರು ಸಿಹಿ ಸುದ್ದಿಯನ್ನ ಎಮಿಲಿಯಾಗೆ ವಿವರಿಸಿದ್ದಾರೆ. ಬಳಿಕ ಎಮಿಲಿಯಾ ನಡೆದ ಘಟನೆಯನ್ನ ನೆನಪಿಸಿಕೊಂಡಿದ್ದು, ಮೊದಲಿಗೆ ಗೊಂದಲಕ್ಕೀಡಾದವರಂತೆ ಮಾತನಾಡಿದ್ರು. ನಂತರ ಎಲ್ಲವೂ ಆಕೆಗೆ ಅರ್ಥವಾಯಿತು ಎಂದು ಸೀಸರ್ ಹೇಳಿದ್ದಾರೆ.
Advertisement
ಎಮಿಲಿಯಾ ಎಲ್ಲಾ ವೈಜ್ಞಾನಿಕ ತರ್ಕವನ್ನೇ ಮೀರಿ ಮಗುವಿಗೆ ಜನ್ಮ ನೀಡಿದ್ದಾರೆ. ಇದು ನಿಜಕ್ಕೂ ಒಂದು ಪವಾಡವೆಂದು ವೈದ್ಯರು ಅಭಿಪ್ರಾಯಪಟ್ಟಿರುವುದಾಗಿ ಸೀಸರ್ ಹೇಳಿದ್ದಾರೆ. ಎಮಿಲಿಯಾ ಮೆದುಳಿಗೆ ಗಂಭೀರವಾದ ಗಾಯಗಾಳಿಗಿದ್ದರೂ ಆಕೆ ನಮ್ಮನ್ನು ಅಚ್ಚರಿಗೊಳಿಸಿದ್ದಾಳೆ ಎಂದು ಆಕೆಗೆ ಸಿಕಿತ್ಸೆ ನೀಡಿದ ನರತಜ್ಞ ಮಾರ್ಕೆಲೋ ಫೆರಾರಿ ಹೇಳಿದ್ದಾರೆ.