ಮ್ಯಾಜಿಕ್ ಮೆಸ್ಸಿಗೆ `ಅತ್ಯುತ್ತಮ ಪುರುಷರ ಆಟಗಾರ-2022′ ಪ್ರಶಸ್ತಿ

Public TV
1 Min Read
Lionel Messi

ಪ್ಯಾರಿಸ್‌: 2022ರ ಫಿಫಾ ವಿಶ್ವಕಪ್ (FIFA WorldCup 2022) ಚಾಂಪಿಯನ್ ಆಗಿ ಹೊರಹೊಮ್ಮಿದ ಅರ್ಜೆಂಟಿನಾ ತಂಡದ ಕ್ಯಾಪ್ಟನ್ ಲಿಯೋನೆಲ್ ಮೆಸ್ಸಿ (Lionel Messi) `2022ರ ಅತ್ಯುತ್ತಮ ಪುರುಷ ಆಟಗಾರ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ಯಾರಿಸ್‌ನ ಸಾಲೆಯಲ್ಲಿ ನಡೆದ ಸಮಾರಂಭದಲ್ಲಿ ಮೆಸ್ಸಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ಫಿಫಾ ಫುಟ್ಬಾಲ್ ಫೈನಲ್‌ನಲ್ಲಿ ನಾಯಕ ಲಿಯೋನೆಲ್ ಮೆಸ್ಸಿ ಅವರ ಅದ್ಭುತ ಆಟದಿಂದಾಗಿ ಅರ್ಜೆಂಟೀನಾ ಪೆನಾಲ್ಟಿ ಶೂಟೌಟ್‌ನಲ್ಲಿ ಫ್ರಾನ್ಸ್ ತಂಡವನ್ನು ಸೋಲಿಸುವ ಮೂಲಕ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದನ್ನೂ ಓದಿ: RCB, MI, Delhi ಅಭಿಮಾನಿಗಳಿಗೆ ನಿರಾಸೆ – 2023ರ ಐಪಿಎಲ್‌ನಿಂದ ಈ ಸ್ಟಾರ್ ಆಟಗಾರರು ಔಟ್

ಕಾಲ್ಚೆಂಡಿನ ಈ ಕ್ಲೈಮ್ಯಾಕ್ಸ್‌ ಪಂದ್ಯದಲ್ಲಿ ಮ್ಯಾಜಿಕ್ ಮೆಸ್ಸಿ 2 ಗೋಲುಗಳನ್ನು ಬಾರಿಸುವ ಮೂಲಕ ವಿಶ್ವಕಪ್ ಗೆಲುವಿನ ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದರು. ಅಲ್ಲದೇ ಫಿಫಾದಲ್ಲಿ ಒಟ್ಟು 13 ಗೂಲುಗಳನ್ನು ಬಾರಿಸಿದ್ದರು. ಫಿಫಾದಲ್ಲಿ ಬೆಸ್ಟ್ ಪರ್ಫಾರ್ಮೆನ್ಸ್ ನೀಡಿದ ಮೆಸ್ಸಿ ಇದೀಗ ಅತ್ಯುತ್ತಮ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಇದನ್ನೂ ಓದಿ: ಬೆತ್‌ ಮೂನಿ ಭರ್ಜರಿ ಫಿಫ್ಟಿ – ಆಸ್ಟ್ರೇಲಿಯಾಗೆ 6ನೇ ಬಾರಿಗೆ ವಿಶ್ವಕಪ್‌ ಚಾಂಪಿಯನ್‌ ಕಿರೀಟ

lionel messi 1

ಇದರೊಂದಿಗೆ ಅರ್ಜೆಂಟೀನಾ (Argentina) ಕೋಚ್ ಲಿಯೋನೆಲ್ ಸ್ಕಾಲೋನಿ ಅತ್ಯುತ್ತಮ ಪುರುಷ ಕೋಚ್ ಪ್ರಶಸ್ತಿ ಪಡೆದಿದ್ದಾರೆ. ಎಮಿಲಿಯಾನೋ ಮಾರ್ಟಿನೆಜ್ (ಅರ್ಜೆಂಟೀನಾ) ಅತ್ಯುತ್ತಮ ಪುರುಷರ ಗೋಲ್‌ಕೀಪರ್ ಪ್ರಶಸ್ತಿ ಮುಡಿಗೇರಿಸಿಕೊಂಡರೇ, ಅರ್ಜೆಂಟೀನಾದ ಬೆಂಬಲಿಗರು `ಅತ್ಯುತ್ತಮ ಅಭಿಮಾನಿ’ ಪ್ರಶಸ್ತಿಯನ್ನ ಪಡೆದು ಸಂಭ್ರಮಿಸಿದ್ದಾರೆ.

ಬಳಿಕ ಮೆಸ್ಸಿ ಮಾತನಾಡಿ, ಇದೊಂದು ಅದ್ಭುತ ವರ್ಷ, ನಾನಿಲ್ಲಿ ಬಂದು ಪ್ರಶಸ್ತಿ ಸ್ವೀಕರಿಸುತ್ತಿರುವುದು ನನಗೆ ಮಹತ್ತರ ಗೌರವವೆನಿಸಿದೆ. ಅಲ್ಲದೇ ನಾನು ನನ್ನ ಕನಸು ನನಸಾಗಿಸಿಕೊಂಡಿದ್ದೇನೆ ಎಂಬ ಸಂತೋಷವಿದೆ ಎಂದು ಭಾವುಕರಾದರು.

kylian mbappe 1

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಫ್ರಾನ್ಸ್ ತಂಡದ ನಾಯಕ ಕಿಲಿಯನ್ ಎಂಬಾಪ್ಪೆ (Mbappe) ಸಹ ಮೆಸ್ಸಿಯೊಂದಿಗೆ ಪಾಲ್ಗೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *