ಅರ್ಜೆಂಟೀನಾ: ಮೊಬೈಲ್ ನೋಡುತ್ತಾ ವ್ಯಕ್ತಿಯೊಬ್ಬ ರೈಲ್ವೇ ಟ್ರ್ಯಾಕ್ ಮೇಲೆ ಬಿದ್ದ ಘಟನೆ ಅರ್ಜೆಂಟೀನಾ ರಾಜಧಾನಿ ಬ್ಯೂನಸ್ ಐರಿಸ್‍ನಲ್ಲಿ ನಡೆದಿದೆ.
ವ್ಯಕ್ತಿ ಮೊಬೈಲ್‍ನಲ್ಲಿ ಮಗ್ನನಾಗಿ ರೈಲ್ವೇ ಟ್ರ್ಯಾಕ್ ಮೇಲೆ ಬಿದ್ದ ದೃಶ್ಯವು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋವನ್ನು ಅರ್ಜೆಂಟೀನಾ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡ್ಡಿದ್ದು, ಸಖತ್ ವೈರಲ್ ಆಗಿದೆ.
Advertisement
ಟ್ರ್ಯಾಕ್ ಮೇಲೆ ವ್ಯಕ್ತಿ ಬಿದ್ದಿದ್ದನ್ನು ನೋಡಿ ಓರ್ವ ಆತನ ಸಹಾಯಕ್ಕೆ ನಿಲ್ಲುತ್ತಾನೆ. ಬ್ಯಾಗ್, ಮೊಬೈಲ್ ಅನ್ನು ಪ್ಲ್ಯಾಟ್‍ಫಾರ್ಮ್ ಮೇಲೆ ಇಟ್ಟು ತಾನು ಮೇಲೆ ಹತ್ತುತ್ತಾನೆ. ಅದೃಷ್ಟವಶಾತ್ ವ್ಯಕ್ತಿ ಟ್ರ್ಯಾಕ್ ಮೇಲೆ ಬಿದ್ದಾಗ ಯಾವುದೇ ರೈಲು ಬರಲಿಲ್ಲ. ಹೀಗಾಗಿ ಪ್ರಾಣಾಪಾಯದಿಂದ ಪಾರಾಗಿದ್ದು, ಪ್ಲ್ಯಾಟ್‍ಫಾರ್ಮ್ ಮೇಲೆ ಹತ್ತಿದ ಕೆಲವೇ ನಿಮಿಷದಲ್ಲಿ ರೈಲು ಬಂದು ನಿಲ್ಲುತ್ತದೆ.
Advertisement
A subway commuter distracted by his cell phone has a close call on the subway tracks pic.twitter.com/ycod8t618j
— Reuters (@Reuters) November 27, 2019
Advertisement
ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಪರಿಶೀಲನೆ ನಡೆಸಿದರು. ಬಳಿಕ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Advertisement
ಈ ವಿಡಿಯೋ ನೋಡಿದ ಅನೇಕ ನೆಟ್ಟಿಗರು ತಮ್ಮದೆ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ಜೊತೆಗೆ ವ್ಯಕ್ತಿಯ ರಕ್ಷಣೆಗೆ ನಿಂತ ಇಬ್ಬರು ಸ್ಥಳೀಯರು ರಿಯಲ್ ಹೀರೋಗಳು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು ರಿಟ್ವೀಟ್ ಮಾಡಿ, ಇನ್ನುಮುಂದೆ ಆ ವ್ಯಕ್ತಿ ಮೊಬೈಲ್ ಹುಚ್ಚಿನಿಂದ ಹೊರ ಬರುತ್ತಾನೆ ಎಂದು ವ್ಯಂಗ್ಯವಾಡಿದ್ದಾರೆ.
https://twitter.com/not_a_victim/status/1199819391472418817