ಶಿವಮೊಗ್ಗ: ಲಕ್ಷಾಂತರ ಮೌಲ್ಯದ ಅಡಿಕೆ (Arecanut) ಕಳ್ಳತನ ಮಾಡಿದ್ದ ಐವರು ಕಳ್ಳರನ್ನು ಶಿವಮೊಗ್ಗ (Shivamogga) ಗ್ರಾಮಾಂತರ ಠಾಣೆ ಪೊಲೀಸರು (Police) ಬಂಧಿಸಿದ್ದಾರೆ.
ಬಂಧಿತರನ್ನು ಆರ್.ಅನಿಲ್ ಅಲಿಯಾಸ್ ಜಾಕ್(26), ಲೋಕೇಶ್ ಅಲಿಯಾಸ್ ವಿಜಯ್(27), ಮನೋಜ್ ಅಲಿಯಾಸ್ ಮುರಗೋಡು(20), ಪಿ.ನವೀನ್ ಅಲಿಯಾಸ್ ನುಗ್ಗೆ (23) ಹಾಗೂ ಎಸ್.ಚಂದು ಅಲಿಯಾಸ್ ಸುಣ್ಣ (20) ಎಂದು ಗುರುತಿಸಲಾಗಿದೆ.
- Advertisement -
- Advertisement -
ಆರೋಪಿಗಳು ಹಾಡೋನಹಳ್ಳಿ ಗ್ರಾಮದ ಗೋಡೌನಲ್ಲಿ ಸಂಗ್ರಹಿಸಿದ್ದ ಒಣ ಅಡಿಕೆಯನ್ನು ಕಳ್ಳತನ ಮಾಡಿದ್ದರು. ಅಲ್ಲದೇ ಪ್ರತ್ಯೇಕ ಮೂರು ಕಳ್ಳತನ ಪ್ರಕರಣಗಳಲ್ಲಿ ಆರೋಪಿಗಳು 7.35 ಲಕ್ಷ ರೂ. ಮೌಲ್ಯದ ಒಣ ಅಡಿಕೆಯನ್ನು ಕಳ್ಳತನ ಮಾಡಿದ್ದರು.
- Advertisement -
- Advertisement -
ಬಂಧಿತರಿಂದ 7.35 ಲಕ್ಷ ರೂ. ಮೌಲ್ಯದ ಅಡಿಕೆ ಸೇರಿದಂತೆ 10.25 ಲಕ್ಷ ರೂ. ಮೌಲ್ಯದ ಮಾಲನ್ನು ಜಪ್ತಿ ಮಾಡಲಾಗಿದೆ. ಗ್ರಾಮಾಂತರ ಠಾಣೆ ಇನ್ಸ್‍ಪೆಕ್ಟರ್ ಸತ್ಯನಾರಾಯಣ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.