ಚಿಕ್ಕಬಳ್ಳಾಪುರ: ಬೆಳ್ಳಂಬೆಳಗ್ಗೆ ದ್ವಿಚಕ್ರವಾಹನಗಳಲ್ಲಿ ನಂದಿ ಹಿಲ್ಸ್ ಗೆ ಹೋದ್ರೆ ಸಖತ್ತಾಗಿರುತ್ತೆ ಅಂತ ಈ ವೀಕೆಂಡ್‍ನಲ್ಲಿ ನೀವೇನಾದ್ರೂ ಅಲ್ಲಿಗೆ ಹೋಗೋಕೆ ಪ್ಲಾನ್ ಮಾಡ್ತಿದ್ರೆ ನಿಮಗಿದು ಕಹಿ ಸುದ್ದಿ.
ವಿಶ್ವವಿಖ್ಯಾತ ಪ್ರವಾಸಿತಾಣ ನಂದಿಗಿರಿಧಾಮಕ್ಕೆ ಜುಲೈ 1 ಹಾಗೂ 2 ರಂದು ಅಂದ್ರೆ ನಾಳೆ ಮುಂಜಾನೆ 6 ಗಂಟೆಯಿಂದ ಬೆಳಿಗ್ಗೆ 10 ಗಂಟೆಯವರೆಗೆ, ಎರಡು ದಿನ ಸತತ ನಾಲ್ಕು ಗಂಟೆಗಳ ಕಾಲ ವಾಹನಗಳ ಸಂಚಾರವನ್ನ ಸಂಪೂರ್ಣ ನಿಷೇಧಿಸಲಾಗಿದೆ ಅಂತ ಚಿಕ್ಕಬಳ್ಳಾಪುರ ಜಿಲ್ಲಾ ಪ್ರಭಾರಿ ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದ್ದಾರೆ.
Advertisement
Advertisement
ಸ್ಪೆಕ್ಟ್ರಂ ರೇಸಿಂಗ್ ಅನ್ನೋ ಸಂಸ್ಥೆ ನಂದಿಗಿರಿಧಾಮದಲ್ಲಿ ಸೈಕ್ಲಿಂಗ್ ರೇಸಿಂಗ್ ಸ್ಪರ್ಧೆ ಆಯೋಜನೆ ಮಾಡಿರುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಹೀಗಾಗಿ ನಾಳೆ ಶನಿವಾರ ಹಾಗೂ ನಾಡಿದ್ದು ಭಾನುವಾರ ಬೆಳಿಗ್ಗೆ 6 ಗಂಟೆಯಿಂದ ಬೆಳಿಗ್ಗೆ 10 ಗಂಟೆಯವರೆಗೂ ನಂದಿಗಿರಿಧಾಮಕ್ಕೆ ಯಾವುದೇ ವಾಹನಗಳಿಗೆ ಪ್ರವೇಶ ಇರುವುದಿಲ್ಲ.
Advertisement
ಪರಿಸರ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದ್ದು, ಪ್ರವಾಸಿಗರು ಹಾಗೂ ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದ್ದಾರೆ.
Advertisement
ಇಚ್ಛೆಯುಳ್ಳ ಸಾರ್ವಜನಿಕರು ಸೈಕ್ಲಿಂಗ್ ಸ್ಪರ್ಧೆ ಸೇರಿದಂತೆ ವಾಕಿಂಗ್ ಹಾಗೂ ಟ್ರೆಕ್ಕಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಬಹುದು ಅಂತ ಮಾಹಿತಿ ನೀಡಿದ್ದಾರೆ.