ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy Murder Case) ಸಂಬಂಧಿಸಿದಂತೆ ಚಾರ್ಜ್‌ಶೀಟ್ ವೈರಲ್ ಆಗಿರುವುದಕ್ಕೆ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮಾಧ್ಯಮ ಪ್ರಕಟಣೆಯ ಮೂಲಕ ತಿಳಿಸಿದ ಅವರು, ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಮೂರು ದಿನಗಳ ಹಿಂದೆ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ ಬೆನ್ನಲ್ಲೇ ಹಲವಾರು ಫೋಟೋಗಳು ವೈರಲ್ ಆಗುತ್ತಲೇ ಇವೆ. ಸದ್ಯ ಇನ್ನೂ ನ್ಯಾಯಾಲಯದಲ್ಲಿ ವಾದ-ಪ್ರತಿವಾದಗಳು ನಡೆಯುತ್ತಿರಬೇಕಾದರೆ ಈ ರೀತಿ ಫೋಟೋಗಳು ವೈರಲ್ ಆಗುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ರಾಗಿಣಿ, ಶುಭಾಗೂ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್: ‘ಚಾರ್ಜ್‌ಶೀಟ್’ನಲ್ಲಿ ಬಯಲು
ನ್ಯಾಯಾಲಯದಲ್ಲಿ ಸಿನಿಮಾ ಸ್ಟಾರ್ ದರ್ಶನ್ ಗ್ಯಾಂಗ್‌ನಿಂದಾದ ಕೊಲೆ ಪ್ರಕರಣದ ಬಗ್ಗೆ ವಾದ-ಪ್ರತಿವಾದಗಳು ನಡೆಯುತ್ತಿರುವಾಗ, ದರ್ಶನ್ ಪೊಲೀಸ್ ಠಾಣೆಯಲ್ಲಿ ಹೀಗೆ ಕುಳಿತಿದ್ದನು, ಹಾಗೆ ಮಾಡಿದ್ದನು ಎಂಬುದಾಗಿ ಸರ್ಕಾರ ಅವರ ಫೋಟೋ ಬಿಡುಗಡೆ ಮಾಡುತ್ತಿರುವುದು ಏಕೆ? ತನಿಖಾ ವರದಿ (Investigation Report) ನ್ಯಾಯಾಲಯದಲ್ಲಿ ವಿಚಾರಣೆಗೆ ನೀಡುವ ಬದಲು ಮಾಧ್ಯಮಗಳಿಗೆ ಬಿಡುಗಡೆ ಮಾಡಲು ಕಾರಣವೇನು? ಇದು ಕಾನೂನು ಬಾಹಿರವಾಗಿ ಕಾಣುತ್ತಿಲ್ಲವೇ? ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಸಿಎಂಗೆ ಬಾಂಬ್, ಆಟಂ ಬಾಂಬ್, ರಾಕೆಟ್ ಬಾಂಬ್ ಯಾರ‍್ಯಾರಿಟ್ಟಿದ್ದಾರೋ ಗೊತ್ತಿಲ್ಲ: ಆರ್.ಅಶೋಕ್
ಇದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರ (CM Siddaramaiah) ಮುಡಾ ಕೇಸ್ (MUDA) ನ್ಯಾಯಾಲಯದಲ್ಲಿ ನಡೆಯುತ್ತಿರುವುದನ್ನು ಮೀಡಿಯಾಗಳು ಬಿತ್ತರಿಸದಿರಲಿ ಎಂಬ ತಂತ್ರವೇ? ಕೇವಲ ದರ್ಶನ್ ಅವರ ವಿಷಯವನ್ನೇ ಜನರು ನೋಡಲೆಂದು ಸರ್ಕಾರ ಈ ರೀತಿಯ ತಂತ್ರಗಾರಿಕೆ ಮಾಡುತ್ತಿದೆಯಾ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.