ಹೈದರಾಬಾದ್: ಉಪಚುನಾವಣೆಯ ಪ್ರಚಾರದಲ್ಲಿ ತೊಡಗಿದ್ದ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ತಾಳ್ಮೆ ಕಳೆದುಕೊಂಡು ವ್ಯಕ್ತಿಯೊಬ್ಬರ ಮೇಲೆ ನಾಲಿಗೆ ಹರಿಬಿಟ್ಟಿದ್ದಾರೆ.
ಬುಧವಾರದಂದು ಚಂದ್ರಬಾಬು ನಾಯ್ಡು ಕರ್ನೂಲು ಜಿಲ್ಲೆಯ ನಂದ್ಯಾಲದಲ್ಲಿ ಉಪಚುನಾವಣಾ ಪ್ರಚಾರದಲ್ಲಿ ತೊಡಗಿದ್ದರು. ಈ ವೇಳೆ ವ್ಯಕ್ತಿಯೊಬ್ಬರು ಈ ಪ್ರದೇಶದಲ್ಲಿನ ವಿದ್ಯುತ್ ಸಮಸ್ಯೆ ಬಗ್ಗೆ ಪ್ರಶ್ನಿಸಿದ್ರು. ಆಗ ಕೋಪಗೊಂಡ ಚಂದ್ರಬಾಬು ನಾಯ್ಡು, ನನ್ನ ಜೊತೆ ಈ ರೀತಿ ಮಾತಾಡಲು ನಿನಗೆ ಎಷ್ಟು ಧೈರ್ಯ? ನಾನು ಇಲ್ಲಿಗೆ ರಾಜಕೀಯ ಮುಖಂಡನಾಗಿ, ಒಬ್ಬ ಮುಖ್ಯಮಂತ್ರಿಯಾಗಿ ಬಂದಿದ್ದೀನಿ. ಇಷ್ಟೊಂದು ಜನ ಕಾರ್ಯಕರ್ತರ ಮಧ್ಯೆ ನನ್ನ ಜೊತೆ ಈ ರೀತಿ ಮಾತಾಡಲು ಎಷ್ಟು ಧೈರ್ಯ ಎಂದು ಗರಂ ಆದ್ರು. ಅಲ್ಲದೆ ಆ ವ್ಯಕ್ತಿ ವಿರೋಧ ಪಕ್ಷದವನು. ಸಾರ್ವಜನಿಕ ಸಭೆಯನ್ನ ಹಾಳು ಮಾಡ್ತಿದ್ದಾನೆ ಅಂದ್ರು.
Advertisement
Advertisement
ನೀನೇನು ಹುಚ್ಚನಾ? ಕುಡಿದಿದ್ಯಾ? ವೈಎಸ್‍ಆರ್ ಕಾಂಗ್ರೆಸ್ ನವರು ನಿನ್ನನ್ನು ಇಲ್ಲಿಗೆ ಕಳಿಸಿದ್ರೆ ನನ್ನ ಸಭೆಗೆ ಬರ್ಬೇಡ, ಮನೆಯಲ್ಲಿರು ಎಂದು ಚಂದ್ರಬಾಬು ನಾಯ್ಡು ಹೇಳಿದ್ರು.
Advertisement
ಚಂದ್ರಬಾಬು ನಾಯ್ಡು ಸರ್ಕಾರದ ಸಾಧನೆಗಳ ಬಗ್ಗೆ ಮಾತನಾಡ್ತಿದ್ರು. ಗ್ರಾಮೀಣ ಪ್ರದೇಶಗಳಿಗೆ ಹೇಗೆ ವಿದ್ಯುತ್ ಪೂರೈಕೆ ಮಾಡಲಾಗ್ತಿದೆ ಎಂಬುದರ ಬಗ್ಗೆ ಮಾತನಾಡ್ತಿದ್ದಾಗ ಈ ವ್ಯಕ್ತಿ ಮಧ್ಯಪ್ರವೇಶಿಸಿ, ಈ ಭಾಗದಲ್ಲಿ ವಿದ್ಯುತ್ ಸಮಸ್ಯೆ ಇದೆ ಎಂದು ಹೇಳಿದ್ರು. ಇದಕ್ಕೆ ಚಂದ್ರಬಾಬು ನಾಯ್ಡು ಆಂಧ್ರಪ್ರದೇಶದಲ್ಲಿ ವಿದ್ಯುತ್ ಸಮಸ್ಯೆ ಇಲ್ಲೆ ಎಂದು ವಾದಿಸಿದ್ರು.