ಯಶ್ ನಟನೆಯ ಕಿರಾತಕ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ಓವಿಯಾ, ಲೈಂಗಿಕ ವಿಷಯದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಈ ಹಿಂದೆ ಅವರು ವೇಶ್ಯಾವಾಟಿಕೆಯನ್ನು ಕಾನೂನುಬದ್ಧ ಮಾಡಿ ಎಂದು ಸ್ಟೇಟ್ ಮೆಂಟ್ ಕೊಟ್ಟಿದ್ದರು. ಅದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಈಗ ಸೆಕ್ಸ್ ಬಗ್ಗೆ ಮಾತನಾಡಿದ್ದಾರೆ ಓವಿಯಾ. ಈ ಕಾರಣದಿಂದಾಗಿ ಅಭಿಮಾನಿಯೊಬ್ಬ ಬೆಂಕಿ ರೀತಿಯ ಪ್ರಶ್ನೆ ಕೇಳಿದ್ದಾನೆ.
ಕೇವಲ ಸೆಕ್ಸ್ ಗಾಗಿ ನಾನು ಮದುವೆ ಆಗಲಾರೆ. ಸೆಕ್ಸ್ ಮಾಡುವುದಕ್ಕಾಗಿ ಹುಡುಗನನ್ನು ಮದುವೆಯಾಗಿ ಜೀವನ ಪೂರ್ತಿ ಅವನ ಸೇವೆ ಮಾಡಲಾರೆ ಎಂದು ಸಂದರ್ಶನದಲ್ಲಿ ಹೇಳಿಕೆ ನೀಡಿದ್ದಾರೆ. ಈ ಮಾತು ಕೇಳಿದ ಅನೇಕರು ‘ನೀನೇನು ಸಲಿಂಗಕಾಮಿಯೇ?’ (Homosexuality) ಎಂದು ಪ್ರಶ್ನೆ ಮಾಡಿದ್ದಾರೆ.
ನಟಿ ಓವಿಯಾ (Oviya) ಅಚ್ಚರಿಯ ಹೇಳಿಕೆ ಕೊಡುತ್ತಲೇ ಸುದ್ದಿ ಆಗುತ್ತಿದ್ದಾರೆ. ಅವರು ಆಡಿದ ಮಾತುಗಳು ಸಾಕಷ್ಟು ಚರ್ಚೆಗೂ ಕಾರಣವಾಗಿವೆ. ಕೆಲವರು ಓವಿಯಾ ಮಾತಿಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದರೆ, ಇನ್ನೂ ಕೆಲವರು ನೆಗೆಟಿವ್ ಕಾಮೆಂಟ್ ಮಾಡಿದ್ದಾರೆ.
ಮೊನ್ನೆಯಷ್ಟೇ ಅವರು ಅತ್ಯಾಚಾರ ಕುರಿತಂತೆ ಮಾತನಾಡಿ ‘ವೇಶ್ಯಾವಾಟಿಕೆಯನ್ನು (Prostitution) ಕಾನೂನುಬದ್ಧ ಮಾಡಿದರೆ, ಅತ್ಯಾಚಾರವನ್ನು ತಡೆಗಟ್ಟಬಹುದು. ಅತ್ಯಾಚಾರಕ್ಕೆ ಕಡಿವಾಣ ಹಾಕಲು ಇದೊಂದು ಸೂಕ್ತ ಮಾರ್ಗ’ ಎಂದು ಅವರು ಅಭಿಪ್ರಾಯ ಪಟ್ಟಿದ್ದರು. ಜೊತೆಗೆ ಲೈಂಗಿಕ ಶಿಕ್ಷಣದ ಬಗ್ಗೆಯೂ ಮಾತನಾಡಿದ್ದರು.
ಎಲ್ಲರಿಗೂ ಲೈಂಗಿಕ ಆಸಕ್ತಿಗಳು ಇವೆ. ಅದನ್ನು ಅದುಮಿಟ್ಟುಕೊಂಡು ಮುಖವಾಡ ಹಾಕಿಕೊಂಡು ಬದುಕುತ್ತಿದ್ದಾರೆ. ಮನುಷ್ಯರಿಗೆ ಸಹಜವಾದದ್ದು ಇರಲೇಬೇಕು ಎಂದು ಓವಿಯಾ ಮಾತನಾಡಿದ್ದರು. ಈ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಕೂಡ ಆಗಿತ್ತು. ಓವಿಯಾಗೆ ಅವಕಾಶಗಳು ಕಡಿಮೆ ಆಗುತ್ತಿವೆ. ಹಾಗಾಗಿ ಈ ರೀತಿ ಮಾತನಾಡಿ ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡಿದ್ದರು.