ಮಂಗಳೂರು: ನೀವು ಹಂದಿ, ಕುರಿ ಮಾಂಸ ತಿನ್ನುವುವರಾದರೆ ಈ ಸುದ್ದಿ ನೋಡಲೇ ಬೇಕು. ಈ ಮಾಂಸಗಳನ್ನು ತಿನ್ನುವವರು ಎಚ್ಚರ ವಹಿಸಲೇಬೇಕು. ಯಾಕಂದ್ರೆ ರೆಡ್ ಮೀಟ್ ತಿಂದರೆ ನಿಮಗೆ ಕ್ಯಾನ್ಸರ್ ಕಟ್ಟಿಟ್ಟ ಬುತ್ತಿ. ಮಂಗಳೂರಿನ ಎಂಐಓ ಕ್ಯಾನ್ಸರ್ ಆಸ್ಪತ್ರೆಯು ಇಂತಹದ್ದೊಂದು ಆಘಾತಕಾರಿ ಸಂಶೋಧನಾ ವರದಿ ನೀಡಿದೆ.
Advertisement
ಮಂಗಳೂರಿನ ಇನ್ಸ್ ಟಿಟ್ಯೂಟ್ ಆಫ್ ಒಂಕಾಲಜಿ ಆಸ್ಪತ್ರೆಯ ನುರಿತ ತಜ್ಞರ ತಂಡವೊಂದು ಆಘಾತಕಾರಿ ವರದಿ ನೀಡಿದೆ. ಪ್ರದೇಶವಾರು ಸುಮಾರು 900 ಕ್ಯಾನ್ಸರ್ ರೋಗಿಗಳನ್ನ ವೈದ್ಯರು ಸರ್ವೇ ಮಾಡಿದ್ದಾರೆ. ಕೇರಳ, ಕಾಸರಗೋಡು, ಮಂಜೇಶ್ವರ ಭಾಗದ ಜನ ಕುರಿ, ದನ, ಹಂದಿ ಮಾಂಸ ತಿನ್ನುತ್ತಿದ್ದು, ಅಂಥವರಲ್ಲಿ ಅತಿಹೆಚ್ಚು ಸ್ತನ ಹಾಗೂ ಕರಳು ಕ್ಯಾನ್ಸರ್ ಕಂಡುಬಂದಿರುವುದು ಸಂಶೋಧನೆಯಿಂದ ತಿಳಿದು ಬಂದಿದೆ.
Advertisement
Advertisement
ರೆಡ್ ಮೀಟ್‍ನಲ್ಲಿರುವ ಕೊಬ್ಬಿನ ಅಂಶ ಹಾಗೂ ಪದೇ ಪದೇ ಬೇಯಿಸಿ ತಿನ್ನೋದ್ರಿಂದ ಕ್ಯಾನ್ಸರ್ ಬರುತ್ತಂತೆ. ಹೀಗಾಗಿ ರೆಡ್ ಮೀಟ್ ಆಹಾರದ ಬಗ್ಗೆ ಜಾಗ್ರತೆ ವಹಿಸುವಂತೆ ಹಾಗೂ ವಾರಕ್ಕೆ 500 ಗ್ರಾಂ ಮಾತ್ರ ಸೇವಿಸುವಂತೆ ಸೂಚನೆ ನೀಡಿದ್ದಾರೆ. ಮಂಗಳೂರು ವೈದ್ಯರ ತಂಡ ಮಾಂಸ ಪ್ರಿಯರಿಗೆ ಈ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
Advertisement