ಹಾಸನ: ರಾಜ್ಯ ಸಾರಿಗೆ ಇಲಾಖೆಯಲ್ಲಿ ಬಳಕೆಗೆ ಬಾರದ ನಿರುಪಯುಕ್ತ ಬಸ್‌ಗಳು (Bus) ಸಂಚರಿಸುತ್ತಿವೆ ಎಂಬ ಸತ್ಯ ಸಾರಿಗೆ ಅಧಿಕಾರಿಯಿಂದಲೇ ಹೊರಬಿದ್ದಿದೆ. ಚಿಕ್ಕಮಗಳೂರಿಗೆ ಸೇರುವ ಸಕಲೇಶಪುರ ಕೆಎಸ್‌ಆರ್‌ಟಿಸಿ (KSRTC) ಡಿಪೋದಲ್ಲಿ ಬಸ್ ಡ್ರೈವರ್ ಹಾಗೂ ಕಂಡಕ್ಟರ್ ಮುಂದೆ ಸಾರಿಗೆ ಬಸ್ ಡಿಪೋ ವ್ಯವಸ್ಥಾಪಕ ಅಧಿಕಾರಿ ಜಗನ್ನಾಥ್ ಸತ್ಯ ಬಿಚ್ಚಿಟ್ಟಿದ್ದಾರೆ.
ಬಸ್ ಓಡಿಸಲು ಆಗುತ್ತಿಲ್ಲ ಬೇರೆ ಬಸ್ ನೀಡಿ ಎಂದು ಸಾರಿಗೆ ಅಧಿಕಾರಿಗೆ ಬಸ್ ಚಾಲಕ ಹಾಗೂ ನಿರ್ವಾಹಕ ಮನವಿ ಮಾಡಿದ್ದಾರೆ. ಈ ವೇಳೆ ಉತ್ತರ ನೀಡಿದ ಜಗನ್ನಾಥ್ ಇಷ್ಟವಾದ್ರೆ ತಗೊಂಡು ಹೋಗು, ಇಲ್ಲಾ ಅಂದ್ರೆ ಡಿಪೋ ಒಳಗೆ ಬಸ್ ನಿಲ್ಲಿಸು. ಕೆಎಸ್‌ಆರ್‌ಟಿಸಿಯಲ್ಲಿ ಇರುವುದು ಇಂತಹ ಗಾಡಿಗಳೇ, ಅದು ಸ್ಕ್ರಾಪ್‌ಗೆ ಹಾಕುವ ಗಾಡಿ. ಹಳೆಯ ಗಾಡಿಗಳನ್ನು ಇಟ್ಟುಕೊಂಡು ಡಿಪೋ ನಡೆಸುತ್ತಿದ್ದೇನೆ. ಕೆಎಸ್‌ಆರ್‌ಟಿಸಿಯಲ್ಲಿ ಇರೋದು ಸ್ರ‍್ಕಾಪ್, ಚಿಲ್ಲರೆ ಡ್ರೈವರ್‌ಗಳು ಎಂದು ಸಾರಿಗೆ ಅಧಿಕಾರಿ ಜಗನ್ನಾಥ್ ಆಕ್ಷೇಪಾರ್ಹ ಪದ ಬಳಿಸಿದ್ದಾರೆ.
Advertisement
Advertisement
ಈ ವೇಳೆ ಬಸ್ ಚಾಲಕ, ನಿರ್ವಾಹಕ ಹಾಗೂ ಅಧಿಕಾರಿ ಜಗನ್ನಾಥ್ ನಡುವೆ ವಾಗ್ವಾದ ನಡೆದಿದೆ. ವಾಗ್ವಾದ ತಾರಕಕ್ಕೇರುತ್ತಿದ್ದಂತೆ ಬಸ್ ಕಂಡಕ್ಟರ್ ವಿರುದ್ಧ ಜಗನ್ನಾಥ್ ಗಂಭೀರ ಆರೋಪ ಮಾಡಿದ್ದಾರೆ. ನಿನ್ನ ಕ್ಯಾಶ್ ಬ್ಯಾಗ್ ನೋಡಿದ್ದೀನಿ, ಟಿಕೆಟ್ ಕೊಡುವುದನ್ನು ನೋಡಿದ್ದೀನಿ, ನೀನು ದುಡ್ಡು ಕದಿಯುವುದನ್ನು ನೋಡಿದ್ದೀನಿ ಎಂದು ನಿರ್ವಾಹಕನ ವಿರುದ್ಧ ಹರಿಹಾಯ್ದಿದ್ದಾರೆ. ಇದನ್ನೂ ಓದಿ: ಒಂದು ವಾರದಲ್ಲಿ ಕೆಆರ್‌ಎಸ್‌ನಲ್ಲಿ 10 ಅಡಿ ಭರ್ತಿ – ಸದ್ಯಕ್ಕೆ ಕುಡಿಯುವ ನೀರಿಗೆ ಇಲ್ಲ ಹಾಹಾಕಾರ
Advertisement
ಇದಕ್ಕೆ ತಿರುಗೇಟು ನೀಡಿದ ಚಾಲಕ ಹಾಗೂ ನಿರ್ವಾಹಕ ನಾನು ಕದಿತೀನಿ, ಎಲ್ಲರೂ ಕದಿತಾರೆ, ಎಲ್ಲರೂ ಕಳ್ಳರೇ, ಎಲ್ಲಾ ಕಳ್ಳನನ್ಮಕ್ಕಳೆ, ಯಾವನ್ ನೆಟ್ಟಗಿದ್ದಾನೆ? ನಾವೇನ್ ಮನೆಯಿಂದ ದುಡ್ಡು ತಂದಿಲ್ಲ, ನೀವು ಮನೆಯಿಂದ ತರ್ತಿರಾ ದುಡ್ಡುನ್ನ? ಬಂದು ಮೊದಲು ಪ್ಲಾಟ್‌ಫಾರಂ ನೋಡಿ ಎಂದು ಅಧಿಕಾರಿ ವಿರುದ್ಧ ತಿರುಗಿಬಿದ್ದಿದ್ದಾರೆ.
Advertisement
ಸುಮ್ನೆ ಗಾಡಿ ಕೊಡೋದಲ್ಲಾ, ಗಾಡಿ ಹತ್ತಿ ನೋಡಿ ಎಲ್ಲಾ ತೂತಾಗಿದೆ. ಆದಾಯ ಬಂದರೆ ಏನು ನಮ್ಮ ಮನೆಗೆ ಕೊಡ್ತಿರಾ? ಯಾವನಾದ್ರು ಬಿದ್ದು ಸತ್ತರೆ ನಮ್ಮನ್ನೇ ಹಿಡಿದುಕೊಳ್ಳುತ್ತಾರೆ. ಯಾವನಾದ್ರು ಜೀವ ಹೋದರೆ ಯಾರು ಜವಾಬ್ದಾರಿ ಎಂದು ಅಧಿಕಾರಿ ಜಗನ್ನಾಥ್ ವಿರುದ್ಧ ಚಾಲಕ ಹಾಗೂ ನಿರ್ವಾಹಕ ಹರಿಹಾಯ್ದಿದ್ದಾರೆ. ಇದನ್ನೂ ಓದಿ: ಮಿರ್ಚಿ ಬಜ್ಜಿ ತಿನ್ನೋದಕ್ಕೆ ಅಂಬುಲೆನ್ಸ್ ಸೈರನ್ ದುರುಪಯೋಗ – ಎಮರ್ಜೆನ್ಸಿ ಅಂತ ಟ್ರಾಫಿಕ್ ಕ್ಲಿಯರ್ ಮಾಡಿದ್ದ ಪೊಲೀಸರೇ ಶಾಕ್!
Web Stories