ಸಾಮಾಜಿಕ ಹೋರಾಟಗಾರ, ನಟ ಚೇತನ್ ಅವರನ್ನು ಭಾರತದಿಂದ ಗಡಿಪಾರು ಮಾಡುವಂತಹ ವರದಿ ಸಿದ್ಧವಾಗಿದೆ ಎಂದು ಈ ಹಿಂದೆ ಪಬ್ಲಿಕ್ ಟಿವಿ ಡಿಜಿಟಲ್ ಸುದ್ದಿಯನ್ನು ಬ್ರೇಕ್ ಮಾಡಿತ್ತು. ಈಗ ಆ ಸುದ್ದಿ ಮತ್ತೆ ಮುನ್ನೆಲೆಗೆ ಬಂದಿದೆ. ಚೇತನ್ ಸಮುದಾಯಗಳ ನಡುವೆ ಸಾಮರಸ್ಯ ಕದಡುತ್ತಿದ್ದಾರೆ ಎಂದು ಪೊಲೀಸ್ ಇಲಾಖೆಯು ಸರಕಾರಕ್ಕೆ ವರದಿ ನೀಡಿದೆ. ಕರ್ನಾಟಕ ಸರಕಾರವು ಸಿದ್ಧಪಡಿಸಿದ ವರದಿಯನ್ನು, ಕೇಂದ್ರಕ್ಕೆ ಕಳುಹಿಸಲಿ ಹೊರಟಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಕಂಗನಾಳನ್ನು ಹೀರೋಯಿನ್ ಮಾಡಿದ್ದು ಆ ಜ್ಯೋತಿಷಿ: ಅಸಲಿ ಸತ್ಯ ಬಾಯ್ಬಿಟ್ಟ ನಟ ಪ್ರಭಾಸ್
Advertisement
ಸಾಗರೋತ್ತರ ಭಾರತೀಯ ನಾಗರಿಕ ಪತ್ರ (ಓಸಿಎ) ನಿಯಮಗಳನ್ನು ಚೇತನ್ ಉಲ್ಲಂಘನೆ ಮಾಡಿದ್ದಾರೆ ಎಂದು ಪೊಲೀಸ್ ಇಲಾಖೆಯು ಸರಕಾರಕ್ಕೆ ವರದಿ ಸಲ್ಲಿಸಿತ್ತು. ಈಗದು ಕೇಂದ್ರ ಸರಕಾರದ ವಿದೇಶಾಂಗ ಇಲಾಖೆಗೆ ರವಾನೆ ಆಗಲಿದೆಯಂತೆ. ಇದನ್ನೂ ಓದಿ: ಎಂಟು ವರ್ಷಗಳ ನಂತರ ಒಂದಾದ ನೀನಾಸಂ ಸತೀಶ್ ಮತ್ತು ಸಿಂಧು
Advertisement
Advertisement
ಓಸಿಎ ನಿಯಮದ ಪ್ರಕಾರ ಸಾಗರೋತ್ತರ ನಾಗರಿಕರು ಸಾರ್ವಜನಿಕ ಪ್ರತಿಭಟನೆ, ಸರಕಾರದ ವಿರುದ್ಧ ಚಟುವಟಿಕೆ ಮ್ತು ರಾಜಕೀಯ ಚಟುವಟಿಕೆಗಳಲ್ಲೂ ಭಾಗಿಯಾಗುವಂತಿಲ್ಲ. ಚೇತನ್ ಭಾರತಿಯ ಪ್ರಜೆಯಲ್ಲ. ಅಮೆರಿಕದ ಪೌರತ್ವ ಹೊಂದಿದ್ದಾರೆ. ಹೀಗಾಗಿ ಓಸಿಎ ನಿಯಮವನ್ನು ಚೇತನ್ ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ ಎನ್ನುತ್ತಿದೆಯಂತೆ ಪೊಲೀಸ್ ಇಲಾಖೆ ಕೊಟ್ಟ ವರದಿ. ಇದನ್ನೂ ಓದಿ: ಉಪೇಂದ್ರ ಹೊಸ ಸಿನಿಮಾ ಮಾಡಲು ಸ್ಟಾರ್ ನಟಿ ನಯನತಾರಾ ಕಾರಣ : ಏನಿದು ಅಸಲಿ ಗುಟ್ಟು?
Advertisement
ಈ ಹಿಂದೆ ಚೇತನ್ ಒಂದು ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು ಎಂದು ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅಲ್ಲದೇ, ಚೇತನ್ ಸರಕಾರದ ವಿರುದ್ಧ ಸಾಕಷ್ಟು ಪ್ರತಿಭಟನೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಎಲ್ಲವನ್ನೂ ದಾಖಲೆ ಸಮೇತ ವರದಿ ಸಿದ್ಧವಾಗಿದೆಯಂತೆ. ಇದನ್ನೂ ಓದಿ: ಸಮಂತಾ ಯಾಕಿಂಗ್ ಆದೆ? ಗರಂ ಆದ ಅಭಿಮಾನಿಗಳು
ಈ ಕುರಿತು ಮೊನ್ನೆಯೇ ಮಾಧ್ಯಮಗಳಿಗೆ ಸ್ಪಷ್ಟನೆ ಕೊಟ್ಟಿರುವ ಚೇತನ್, “ಈ ವರದಿ, ಗಡಿಪಾರಿನ ವಿಷಯವೇ ಅವರಿಗೆ ಗೊತ್ತಿಲ್ಲವಂತೆ.