ಹೈದರಾಬಾದ್: ಭಾರತದ ಮುಸ್ಲಿಮರು ದೇಶದ ನಿವಾಸಿಗಳಲ್ಲವೇ ಎಂದು ಎಐಎಂಐಎಂ ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್ ಓವೈಸಿ ಪ್ರಶ್ನಿಸಿದ್ದಾರೆ.
ಜನಸಂಖ್ಯಾ ಏರಿಕೆ ಕುರಿತು ಹೈದರಾಬಾದ್‌ನಲ್ಲಿ ಮಾತನಾಡಿದ ಅವರು, ನಾವು ವಾಸ್ತವವನ್ನು ಗಮನಿಸಿದರೆ, ಸ್ಥಳೀಯರು ಕೇವಲ ಬುಡಕಟ್ಟು ಮತ್ತು ದ್ರಾವಿಡ ಜನರು ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಷ್ಟ್ರ ಲಾಂಛನಕ್ಕೆ ಅವಮಾನ, ಗಾಂಧಿಯಿಂದ ಗೋಡ್ಸೆಯವರೆಗೆ – ಮೋದಿ ವಿರುದ್ಧ ಕಿಡಿ
Advertisement
Advertisement
ಜನಸಂಖ್ಯೆ ನಿಯಂತ್ರಣಕ್ಕೆ ದೇಶದಲ್ಲಿ ಯಾವುದೇ ಕಾನೂನು ಅಗತ್ಯವಿಲ್ಲ ಎಂದು ಸ್ವತಃ ಆರೋಗ್ಯ ಸಚಿವರು ಹೇಳಿದ್ದಾರೆ. ಹೆಚ್ಚು ಗರ್ಭನಿರೋಧಕ ಕ್ರಮಗಳನ್ನು ಅನುಸರಿಸುತ್ತಿರುವವರು ಮುಸ್ಲಿಮರು. 2016 ರಲ್ಲಿ 2.6 ರಷ್ಟಿದ್ದ ಒಟ್ಟು ಫಲವಂತಿಕೆ ದರ ಈಗ 2.3 ಆಗಿದೆ ಎಂದು ತಿಳಿಸಿದ್ದಾರೆ.
Advertisement
ವಿಶ್ವಸಂಸ್ಥೆ ಬಿಡುಗಡೆ ಮಾಡಿದ ಜನಸಂಖ್ಯಾ ವರದಿಯನ್ನು ಅಸಾದುದ್ದೀನ್ ಓವೈಸಿ ವಿರೋಧಿಸಿದ್ದಾರೆ. ಜನಸಂಖ್ಯಾ ಸ್ಫೋಟ ಕುರಿತು ಪ್ರತಿಕ್ರಿಯಿಸಿರುವ ಅವರು, ಅದೆಲ್ಲ ಸುಳ್ಳು ಎಂದು ಪ್ರತಿಪಾದಿಸಿದ್ದಾರೆ. ಇದನ್ನೂ ಓದಿ: ಆಫರ್ ಬೆನ್ನಲ್ಲೇ ದಾಖಲೆ ಪ್ರಮಾಣದಲ್ಲಿ ರಷ್ಯಾದಿಂದ ತೈಲ ಖರೀದಿಸಿದ ಭಾರತ