ನೀಲಿ ಸಿನಿಮಾಗಳ ಮಾಜಿ ತಾರೆ ಮಿಯಾ ಖಲೀಫಾ (Mia Khalifa) ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ 32 ವರ್ಷ ವಯಸ್ಸಿನ ಮಾಜಿ ನೀಲಿ ತಾರೆ ಈಗ 71 ವರ್ಷ ವಯಸ್ಸಿನ ಮಿಸ್ಟರ್ ಬೀನ್ ಖ್ಯಾತಿಯ ರೋವನ್ ಅಟ್ಕಿನ್ಸನ್ (Rowan Atkinson) ಜೊತೆ ಡೇಟಿಂಗ್ ಮಾಡ್ತಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ.
ಹೌದು. ಮಿಸ್ಟರ್ ಬೀನ್‌ಗೆ ಹೆಸರುವಾಸಿಯಾಗಿರುವ ಬ್ರಿಟಿಷ್ ನಟ ರೋವನ್ ಅಟ್ಕಿನ್ಸನ್ ಜೊತೆ ಮಿಯಾ ಖಲೀಫಾ ಡೇಟಿಂಗ್‌ನಲ್ಲಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಸದ್ದು ಮಾಡ್ತಿತ್ತು. ಇದಕ್ಕೆ ಪೂರಕವಾದ ಫೋಟೋವೊಂದನ್ನ ಹರಿಬಿಡಲಾಗಿತ್ತು. ಫೋಟೋ ವೈರಲ್ ಆಗ್ತಿದ್ದಂತೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ಖುದ್ದು ಮಿಯಾ ಖಲೀಫಾ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಅಮೆರಿಕ ಸೇನೆ ವಿರುದ್ಧ ಮಿಯಾ ಕಲಿಫಾ ಅಪಹಾಸ್ಯ; ಮಾಜಿ ನೀಲಿ ತಾರೆಗೆ ನೆಟ್ಟಿಗರಿಂದ ಫುಲ್ ಕ್ಲಾಸ್
but I am open to it !!! https://t.co/FOMZ6KOsbu
— Mia K. (@miakhalifa) January 20, 2026
ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನ ಹಂಚಿಕೊಂಡಿರುವ ಮಾಜಿ ನೀಲಿ ತಾರೆ, ಗೈಸ್ ನಾನು ಒಬ್ಬ ಮೂರ್ಖನೊಂದಿಗೆ ಡೇಟಿಂಗ್ ಮಾಡ್ತಿದ್ದೇನೆ, ಆದ್ರೆ ಅದು ಮಿಸ್ಟರ್ ಬೀನ್ ಅಲ್ಲ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಧಾರ್ಮಿಕ ಕಾರ್ಯಕ್ರಮದ ಫ್ಲೆಕ್ಸ್‌ನಲ್ಲಿ ಮಾಜಿ ನೀಲಿ ತಾರೆ ಮಿಯಾ ಖಲೀಫಾ ಫೋಟೋ – ಮುಂದೇನಾಯ್ತು?
ವೈರಲ್ ಆಗಿದ್ದು ಎಐ ಚಿತ್ರ
ಸೋಷಿಯಲ್ ಮೀಡಿಯಾದಲ್ಲಿ ವದಂತಿಯ ಅಲೆ ಎದ್ದ ಬಳಿಕ ಅದು ಎಐ ಚಿತ್ರ ಅನ್ನೋದನ್ನ ಮಾಧ್ಯಮ ವರದಿಗಳು ಖಚಿತಪಡಿಸಿವೆ. ಇದನ್ನೂ ಓದಿ: ಪ್ಯಾಲೆಸ್ತೀನ್ ಪರ ಬ್ಯಾಟಿಂಗ್ ಮಾಡಿದಕ್ಕೆ ಮಿಯಾಗೆ ಕೆಲಸ ಹೋಯ್ತು



