ಸೂಪರ್‌ಸ್ಟಾರ್ ರಜನಿಕಾಂತ್ ಮಾಜಿ ಅಳಿಯ ಧನುಷ್ (Dahnush) ತಮ್ಮ 20 ವರ್ಷದ ವೈವಾಹಿಕ ಜೀವನಕ್ಕೆ ಗುಡ್ ಬೈ ಹೇಳಿದ್ದರು. ರಜನಿಕಾಂತ್ (Rajinikanth) ಪುತ್ರಿ ಐಶ್ವರ್ಯ ಹಾಗೂ ಧನುಷ್ 2022ರಲ್ಲಿ ವಿಚ್ಚೇದನ ಘೋಷಣೆ ಮಾಡಿದ್ದರು. ಬಳಿಕ 2024ರಲ್ಲಿ ಇವರು ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಚೇದನ ಪಡೆದಿದ್ದರು. ಇದೀಗ ಧನುಷ್ ಸ್ಟಾರ್ ನಟಿ ಕೈ ಹಿಡಿಯಲು ಸಿದ್ದರಾಗಿದ್ದಾರೆ.
ನಟ ಧನುಷ್ ನಟಿ ಮೃಣಾಲ್ ಠಾಕೂರ್ (Mrunal Thakur) ಜೊತೆ ಎರಡನೇ ವಿವಾಹವಾಗಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗ್ತಿದೆ. ಇತ್ತೀಚೆಗೆ ಧನುಷ್ ಹಾಗೂ ಮೃಣಾಲ್ ಠಾಕೂರ್ ಹಲವಾರು ವೇದಿಕೆಯಲ್ಲಿ, ಪಾರ್ಟಿಗಳಲ್ಲಿ, ಹುಟ್ಟುಹಬ್ಬದ ಪಾರ್ಟಿಗಳಲ್ಲಿ ಕಾಣಿಸಿಕೊಂಡಿದ್ದರು. ಜೊತೆಗೆ ಧನುಷ್ ಹಾಕಿರುವ ಪೋಸ್ಟ್‌ಗಳಿಗೆ ಮೃಣಾಲ್ ಲೈಕ್ ಕೊಡೋದು ಕಮೆಂಟ್ಸ್ ಹಾಕೋದು ಮಾಡುತ್ತಿದ್ದರು. ಇವೆಲ್ಲ ಘಟನೆಗಳು ಅವ್ರಿಬ್ಬರ ಮಧ್ಯೆ ಗಾಸಿಪ್ ಸೃಷ್ಟಿಸಿತ್ತು. ಆದ್ರೆ ಇದೆಲ್ಲದಕ್ಕೂ ಈಗ ತೆರೆ ಎಳೆಯುವ ಸಮಯ ಬಂದಂತಿದೆ. ಇದನ್ನೂ ಓದಿ: ರಣಹದ್ದು ಬಗ್ಗೆ ತಪ್ಪಾದ ಮಾಹಿತಿ; ಬಿಗ್ ಬಾಸ್ ಪ್ರೋಗ್ರಾಂ ಹೆಡ್‌ಗೆ ಅರಣ್ಯ ಇಲಾಖೆಯಿಂದ ತಿಳುವಳಿಕೆ ನೋಟಿಸ್
ಅಂದಹಾಗೆ ಮೃಣಾಲ್ ಹಾಗೂ ಧನುಷ್ ಸನ್ ಆಫ್ ಸರ್ಧಾರ್-2 ಸಿನಿಮಾದ ಪ್ರೀಮಿಯರ್‌ನಲ್ಲಿ ಒಟ್ಟೊಟ್ಟಿಗೆ ಕಾಣಿಸಿಕೊಂಡ ಬಳಿಕವಂತೂ ಪ್ರೀತಿ, ಪ್ರೇಮದ ಗುಲ್ಲು ಜೋರಾಗಿತ್ತು. ಇದೀಗ ಇಬ್ಬರೂ ಮದ್ವೆಯಾಉತ್ತಿದ್ದಾರೆ ಎನ್ನಲಾಗ್ತಿದೆ. ಅದ್ರಲ್ಲೂ ಫೆಬ್ರವರಿ 14ರಂದು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.


