ಬೆಂಗಳೂರು: ಟೌನ್ ಹಾಲ್ ಬಳಿ ಫ್ರೀ ಕಾಶ್ಮೀರ ಬೋರ್ಡ್ ಹಿಡಿದು ಎಸ್‍ಜೆ ಪಾರ್ಕ್ ಪೊಲೀಸರಿಂದ ಬಂಧನಕ್ಕೊಳಗಾದ ಆರ್ದ್ರಾ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ದ್ರಾಳ ಕುರಿತು ಇಂಚಿಂಚು ಮಾಹಿತಿಯನ್ನು ಪೊಲೀಸರು ಸಂಗ್ರಹಿಸಿದ್ದಾರೆ.
ಆರ್ದ್ರಾಳಿಗೆ ಯಾರ ಯಾರ ಜೊತೆ ಸಂಪರ್ಕ ಇತ್ತು, ಆಪ್ತ ಗೆಳೆಯ, ಗೆಳತಿಯರು ಯಾರ್ಯಾರು, ಆರ್ದ್ರಾ ಬಳಸುತ್ತಿದ್ದ ಸಾಮಾಜಿಕ ಜಾಲತಾಣಗಳ ಕುರಿತು ಪೊಲೀಸರು ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಿದ್ದಾರೆ.
Advertisement
Advertisement
ಆರ್ದ್ರಾ ಮೇ.04, 1995 ರಂದು ಬೆಂಗಳೂರಿನ ಶಂಕರಾಂಭ ಆಸ್ಪತ್ರೆಯಲ್ಲಿ ಜನಿಸಿದ್ದು, ನಾರಾಯಣ್ ಮತ್ತು ರಮಾರ ಏಕೈಕ ಪುತ್ರಿಯಾಗಿದ್ದಾಳೆ. ಎಲ್‍ಕೆಜಿಯಿಂದ 10ನೇ ತರಗತಿ ವರಗೆ ಮಲ್ಲೇಶ್ವರದ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಓದಿದ್ದು, ನಂತರ ತಮಿಳುನಾಡಿನ ಕೊಯಮತ್ತೂರ್ ನ ಈಶಾ ಹೋಮ್ ನಲ್ಲಿ ಪಿಯುಸಿ ಮುಗಿಸಿದ್ದಾಳೆ. ಆರ್ಟ್ಸ್ ಮತ್ತು ಹ್ಯೂಮ್ಯಾನಿಟಿ ಆಯ್ಕೆ ಮಾಡಿಕೊಂಡ ನಂತರ ಕೋರಮಂಗಲದ ಲೀಸಾ ಸ್ಕೂಲ್ ಆಫ್ ಡಿಸೈನ್‍ನಲ್ಲಿ ಪದವಿ ಶಿಕ್ಷಣ ಮಾಡಿದ್ದಾಳೆ.
Advertisement
ಬಳಿಕ ಮೈಸೂರು ವಿವಿಯ ದೂರ ಶಿಕ್ಷಣ ಕೆಂದ್ರದಲ್ಲಿ ಡಿಪ್ಲೋಮಾ ಮತ್ತು ಗ್ರಾಫಿಕ್ ಡಿಸೈನಿಂಗ್ ಮುಗಿಸಿ, ವಿದ್ಯಾಬ್ಯಾಸದ ಬಳಿಕ ಫ್ರಿಲ್ಯಾನ್ಸರ್ ಆಗಿ ಕೆಲಸ ಮಾಡುತ್ತಿದ್ದಳು. ನಂತರ ಪೋಷಕರನ್ನು ತೊರೆದಿದ್ದ ಬಂಧಿತ ಆರೋಪಿ ಆರ್ದ್ರಾ, ವಿದ್ಯಾಭ್ಯಾಸದ ಬಳಿಕ ಕೆಲಸ ಮಾಡುಲು ಶುರು ಮಾಡಿ ಹಾವ, ಭಾವ, ಶೈಲಿಯನ್ನು ಸಂಪೂರ್ಣವಾಗಿ ಬದಲಾಯಿಸಿಕೊಂಡಿದ್ದಳು. ಆರ್ದ್ರಾಳ ಪೋಷಕರು ಪಕ್ಕಾ ಸಂಪ್ರದಾಯಸ್ಥ ಕುಟುಂಬದವರಾಗಿದ್ದು, ಈಕೆಯ ನಡೆ ನುಡಿ ಪೋಷಕರಿಗೆ ಇರಿಸು ಮುರಿಸು ತಂದಿತ್ತು. ಡ್ರೆಸ್, ಸ್ಟೈಲ್, ಉಡುಗೆ, ತೊಡುಗೆಯ ಬಗ್ಗೆ ತಾತ, ಅಜ್ಜಿ ವಿರೋಧ ವ್ಯಕ್ತಪಡಿಸುತ್ತಿದ್ದರು.
Advertisement
ಇಂತಹ ವಿಷಯಗಳಿಗೆ ಮನೆಯಲ್ಲಿ ಜಗಳ ಮಾಡುತ್ತಿದ್ದ ಆರ್ದ್ರಾ, ಬಳಿಕ ಮನೆಯಿಂದ ಹೊರಬಂದು ಪಿಜಿ ಸೇರಿಕೊಂಡು ಹಣಕ್ಕಾಗಿ ಫ್ರಿಲ್ಯಾನ್ಸರ್ ಆಗಿ ಕೆಲಸ ಮಾಡಿ 15ರಿಂದ 20 ಸಾವಿರ ರೂ. ಸಂಪಾದಿಸುತ್ತಿದ್ದಳು. ಒಂದು ವೇಳೆ ಹಣಕಾಸಿನ ಸಮಸ್ಯೆ ಇದ್ದಾಗ ಆಕೆಯ ತಂದೆಯೇ ಹಣ ನೀಡುತ್ತಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ಆಕ್ಟಿವ್ ಆಗಿದ್ದ ಆರ್ದ್ರಾ ಒಟ್ಟು ಆರು ಬೇರೆ ಬೇರೆ ಸೋಷಿಯಲ್ ಮೀಡಿಯಾ ಐಡಿಗಳನ್ನು ಹೊಂದಿದ್ದು, ನಾಲ್ಕು ಇ-ಮೇಲ್ ಐಡಿಗಳನ್ನು ಹೊಂದಿದ್ದಾಳೆ.
ಇನ್‍ಸ್ಟಾಗ್ರಾಮ್‍ನಲ್ಲಿ ಸಹ ಆಕ್ಟಿವ್ ಆಗಿದ್ದು, ಇದುವರೆಗೆ 182 ಪೋಸ್ಟ್ ಹಾಕಿದ್ದಾಳೆ. 833 ಜನ ಆರ್ದ್ರಾಳನ್ನು ಫಾಲೋ ಮಾಡುತ್ತಿದ್ದಾರೆ. ಆರೋಪಿತೆ ಆರ್ದ್ರಾ 1,912 ಜನರನ್ನು ಫಾಲೋ ಮಾಡುತ್ತಿದ್ದಾಳೆ. ಇನ್‍ಸ್ಟಾಗ್ರಾಮ್‍ನಲ್ಲಿ ಆದ್ರ್ರಾ ಮತ್ತು ಅಮೂಲ್ಯ ಲಿಯೋನಾ ಫ್ರೆಂಡ್ಸ್ ಆಗಿದ್ದಾರೆ. ಫೇಸ್‍ಬುಕ್ ನಲ್ಲಿ ಸಹ ಆರ್ದ್ರಾ ಫುಲ್ ಆಕ್ಟಿವ್ ಆಗಿದ್ದಾಳೆ. ಎಫ್‍ಬಿ ಯಲ್ಲಿ ಆರ್ದ್ರಾಳಿಗೆ 696 ಜನ ಫ್ರೆಂಡ್ಸ್ ಇದ್ದಾರೆ. ಎಫ್‍ಬಿಯಲ್ಲಿ ಸುಮಾರು 72 ಗ್ರೂಪ್ ಗಳನ್ನು ಹೊಂದಿರುವ ಆರ್ದ್ರಾ ಸುಮಾರು 430 ಜನ ತೃತೀಯ ಲಿಂಗಿಗಳ ಗ್ರೂಪ್, ಭಾಷಾಂತರ, ಮಾರ್ಕೆಟಿಂಗ್, ವಿದ್ಯಾರ್ಥಿಗಳ ಗ್ರೂಪ್ ಗಳನ್ನು ಹೊಂದಿದ್ದು, ಕಳೆದ ಮೂರ್ನಾಲ್ಕು ತಿಂಗಳಿಂದ ಆರೋಪಿ ಸಖತ್ ಆಕ್ಟಿವ್ ಆಗಿದ್ದಳು, ಸಾಕಷ್ಟು ಚರ್ಚೆ ನಡೆಸಿದ್ದಳು ಎಂಬುದು ತನಿಖೆಯಲ್ಲಿ ಬಯಲಾಗಿದೆ.