ಬೆಂಗಳೂರು: ಆರ್ಕಿಟೆಕ್ಚರ್ ಕೋರ್ಸ್ಗೆ (Architecture Course) ಎರಡನೇ ಪಿಯುಸಿಯ ಅರ್ಹತಾ ಅಂಕಗಳನ್ನು ಶೇ.50 ರಿಂದ ಶೇ.45 ರಷ್ಟು ಅಂಕಗಳಿಗೆ ಇಳಿಸಿರುವ ಕಾರಣ ಆ ಕೋರ್ಸ್ಗೆ ಸೇರಬಯಸುವ ಅರ್ಹರಿಗೆ ಯುಜಿಸಿಇಟಿಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಇದೇ ಜು.13 ರವರೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಅವಕಾಶ ಕಲ್ಪಿಸಿದೆ.
Advertisement
ಕೌನ್ಸಿಲ್ ಆಫ್ ಆರ್ಕಿಟೆಕ್ಚರ್, ಇತ್ತೀಚೆಗೆ ಪತ್ರ ಬರೆದು ಅರ್ಹತಾ ಅಂಕಗಳನ್ನು ಕಡಿಮೆ ಮಾಡಿದ್ದು, ಆ ಕಾರಣಕ್ಕೆ ದ್ವಿತೀಯ ಪಿಯುಸಿಯಲ್ಲಿ ಶೇ.45 ರಷ್ಟು ಅಂಕ ಪಡೆದು, ನಾಟಾ ಪರೀಕ್ಷೆಯಲ್ಲಿ ಅರ್ಹರಾದವರಿಗೆ ಅರ್ಜಿ ಸಲ್ಲಿಸಲು ಹೊಸದಾಗಿ ಅವಕಾಶ ಕಲ್ಪಿಸಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಗುರುವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: 2028ರ ಚುನಾವಣೆಗೆ ಭಿನ್ನಾಭಿಪ್ರಾಯ ಬಿಟ್ಟು ಒಟ್ಟಾಗಿ ಕೆಲಸ ಮಾಡಿ: ಡಿಕೆಶಿ
Advertisement
Advertisement
ಹೊಸದಾಗಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಜು.15 ರೊಳಗೆ ನಾಟಾ ಅಂಕಗಳ ವಿವರ ಮತ್ತು ಅರ್ಜಿ ಪ್ರತಿಯನ್ನು ಕೆಇಎಗೆ ಸಲ್ಲಿಸಬೇಕು. ಜು.8 ರೊಳಗೆ ನಾಟಾ ಅರ್ಹತೆ ಪಡೆದವರು ಕೂಡ ಈ ದಿನಾಂಕದೊಳಗೆ ಅಂಕಗಳ ಮಾಹಿತಿಯನ್ನು ನೀಡಬೇಕು ಎಂದು ಅವರು ವಿವರಿಸಿದ್ದಾರೆ.