ಹಾಟ್ ಬ್ಯೂಟಿ ತಮನ್ನಾ ಭಾಟಿಯಾ (Tamannaah Bhatia) ಇದೀಗ ಬೆಚ್ಚಿ ಬೀಳಿಸಲು ರೆಡಿಯಾಗಿದ್ದಾರೆ. ‘ಅರಣ್ಮನೈ 4’ (Aranmanai 4) ಚಿತ್ರದ ಮೂಲಕ ಭಯಾನಕವಾಗಿ ಮಿಲ್ಕಿ ಬ್ಯೂಟಿ ಎಂಟ್ರಿ ಕೊಡುತ್ತಿದ್ದಾರೆ. ಚಿತ್ರದ ಟ್ರೈಲರ್ ಈಗ ರಿಲೀಸ್ ಆಗಿದ್ದು, ತಮನ್ನಾ ನಟನೆಯ ಝಲಕ್‌ಗೆ ಫ್ಯಾನ್ಸ್ ದಂಗಾಗಿದ್ದಾರೆ.
ತಮನ್ನಾ ಸದಾ ಹೊಸ ಬಗೆಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಇಷ್ಟಪಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಸಖತ್ ಹಾಟ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಹೈಲೆಟ್ ಆಗಿದ್ದ ನಟಿ ಈಗ ದೆವ್ವದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಪ್ರೇಕ್ಷಕರನ್ನು ಬೆಚ್ಚಿ ಬೀಳಿಸಲು ಬರುತ್ತಿದ್ದಾರೆ. ಇದನ್ನೂ ಓದಿ:ಕ್ಲಿಕ್ ಮಾಡಿ ಎರಡು ಲಕ್ಷ ಕಳೆದುಕೊಂಡ ಬಿಗ್ ಬಾಸ್ ಸ್ಪರ್ಧಿ
View this post on Instagram
‘ಅರಣ್ಮನೈ 4’ ಸೀಕ್ವೆಲ್ ಸಿನಿಮಾದಲ್ಲಿ ತಮನ್ನಾರ ಕೊಲೆಯಾಗಿರುತ್ತದೆ. ಆದರೆ ಅವಳ ಸಾವು ಸಹಜ ಅಲ್ಲ ಎಂದು ನಟ, ಡೈರೆಕ್ಟರ್ ಸುಂದರ್ ಸಿ. ಹೇಳುವುದನ್ನು ಟ್ರೈಲರ್‌ನಲ್ಲಿ ನೋಡಬಹುದಾಗಿದೆ. ತಂಗಿಯ ಸಾವಿಗೆ ಅಸಲಿ ಕಾರಣವೇನು ಎಂದು ಹುಡುಕುವ ಲಾಯರ್ ಪಾತ್ರದಲ್ಲಿ ಸುಂದರ್ ಸಿ. ನಟಿಸಿದ್ದಾರೆ. ಸಿನಿಮಾ ಕಥೆ ಮತ್ತು ನಿರ್ದೇಶನ ಕೂಡ ಸುಂದರ್ ಸಿ. ಮಾಡಿದ್ದಾರೆ.
ಈ ಚಿತ್ರದಲ್ಲಿ ನಟಿ ರಾಶಿ ಖನ್ನಾ (Raashii Khanna) ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಯೋಗಿ ಬಾಬು, ಕನ್ನಡದ ನಟ ಗರುಡ ರಾಮ್ ಕೂಡ ನಟಿಸಿದ್ದಾರೆ. ಖುಷ್ಬೂ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇದೇ ಏಪ್ರಿಲ್ 11ಕ್ಕೆ ಸಿನಿಮಾ ರಿಲೀಸ್ ಆಗಲಿದೆ.
ಅಂದಹಾಗೆ, ಈ ಸಿನಿಮಾದಲ್ಲಿ ವಿಜಯ್ ಸೇತುಪತಿ ಕೂಡ ನಟಿಸಬೇಕಿತ್ತು. ಆದರೆ ಡೇಟ್ಸ್ ಹೊಂದಾಣಿಕೆ ಆಗದ ಕಾರಣ ಅವರು ಕೈಬಿಟ್ಟಿದ್ದಾರೆ.