ಬೆಂಗಳೂರು: ಬಿಟ್ ಕಾಯಿನ್ ಪ್ರಕರಣದಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು.
ಬಿಟ್ ಕಾಯಿನ್ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿ ಅವರು, ಬಿಟ್ ಕಾಯಿನ್ ಪ್ರಕರಣದಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಪ್ರತಿಪಕ್ಷಗಳು ಬಿಟ್ ಕಾಯಿನ್ ಪ್ರಕರಣದಲ್ಲಿ ಅಕ್ರಮವಾಗಿ ಏನಾದರೂ ನಡೆದಿದ್ದರೆ, ಅವರ ಬಳಿ ದಾಖಲೆ ಇದ್ರೆ ಕೊಡಲಿ ಎಂದು ಸವಾಲನ್ನು ಹಾಕಿದರು. ಇದನ್ನೂ ಓದಿ: ಪುಟಾಣಿಗಳನ್ನು ಅದ್ದೂರಿ, ಪ್ರೀತಿಯಿಂದ ಬರ ಮಾಡಿಕೊಂಡ ಅಂಗನವಾಡಿ ಶಿಕ್ಷಕರು
ಬಿಟ್ ಕಾಯಿನ್ ಪ್ರಕರಣದ ತನಿಖೆಯನ್ನು ಇಡಿಗೆ ನೀಡಿದ್ದೇವೆ. ಪ್ರಕರಣದ ತನಿಖೆಯಲ್ಲಿ ಏನಾದ್ರೂ ಪ್ರಗತಿಯಾದರೆ ತಿಳಿಸ್ತೇವೆ. ಅದು ಅಲ್ಲದೇ ಹಲ್ಲೆ ಮಾಡಿದ ಪ್ರಕರಣದಲ್ಲಿ ಕುಖ್ಯಾತ ಹ್ಯಾಕರ್ ಶ್ರೀಕಿ ಮತ್ತು ವಿಷ್ಣು ಭಟ್ ಬಂಧನ ಆಗಿದ್ದಾರೆ. ಈ ಕೇಸ್ ಬಗ್ಗೆಯೂ ವಿಚಾರಣೆ ನಡೆಯುತ್ತಿದೆ. 2018 ರಲ್ಲೂ ಹೊಟೇಲ್ ಗಲಾಟೆ ಕೇಸ್ ನಲ್ಲಿ ಶ್ರೀಕಿ ಬಂಧನವಾಗಿತ್ತು. ಆಗ ಕಾಂಗ್ರೆಸ್ ಸರ್ಕಾರವೇ ಇತ್ತು ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಕುಖ್ಯಾತ ಹ್ಯಾಕರ್ ಶ್ರೀಕಿ ಬಂಧನ
2020ರಲ್ಲಿ ಡ್ರಗ್ ಕೇಸ್ ನಲ್ಲಿ ಕಾಂಗ್ರೆಸ್ ನಾಯಕರೊಬ್ಬರ ಮಕ್ಕಳ ಜತೆ ಶ್ರೀಕಿ ಬಂಧನವಾಗಿತ್ತು. ಹಾಗಾಗಿ ಶ್ರೀಕಿ ಚಟುವಟಿಕೆಗಳ ಬಗ್ಗೆ ಕಾಂಗ್ರೆಸ್ ಅವರಿಗೇ ಹೆಚ್ಚು ಗೊತ್ತಿರಬೇಕು ಎಂದು ವ್ಯಂಗ್ಯವಾಡಿದರು.