ಡಿಕೆಶಿ ರೌಡಿಶೀಟರ್‌ಗಳ ಬಗ್ಗೆ ಬಿಜೆಪಿಯನ್ನ ತೆಗಳೋದು ಭೂತದ ಬಾಯಲ್ಲಿ ಭಗವದ್ಗೀತೆ ಬಂದಹಾಗೆ – ಆರಗ ಜ್ಞಾನೇಂದ್ರ

Public TV
1 Min Read
araga jnanendra d.k.shivakumar

ಬೆಂಗಳೂರು: ಡಿ.ಕೆ.ಶಿವಕುಮಾರ್‌ (D.K.Shivakumar) ರೌಡಿಶೀಟರ್‌ಗಳ ಬಗ್ಗೆ ಬಿಜೆಪಿ ಪಕ್ಷವನ್ನು ತೆಗಳುವುದು ಭೂತದ ಬಾಯಲ್ಲಿ ಭಗವದ್ಗೀತೆ ಬಂದಹಾಗೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಚಾಟಿ ಬೀಸಿದರು.

ಸಚಿವ ಅಶ್ವಥ್ ನಾರಾಯಣ (Ashwath Narayan) ಜೊತೆ ರೌಡಿಗಳು ಇರೋ ಫೋಟೋ ವೈರಲ್ ಆಗುತ್ತಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಪಕ್ಷಕ್ಕೆ ರೌಡಿಶೀಟರ್‌ಗಳು (Rowdy Sheeters), ಸಮಾಜ ದ್ರೋಹಿಗಳ ಅವಶ್ಯಕತೆ ಇಲ್ಲ. ನಮಗೆ ಜನ ಬೆಂಬಲ‌ ಇದೆ. ಬಿಜೆಪಿ (BJP) ‌ಮತ್ತೆ ಅಧಿಕಾರಕ್ಕೆ ಬರುತ್ತೆ ಎಂದು ಆಶಯ ವ್ಯಕ್ತಪಡಿಸಿದರು. ಇದನ್ನೂ ಓದಿ: ಕಾನೂನು ಉಲ್ಲಂಘನೆ ಮಾಡಿದ್ರೆ ಮಹಾರಾಷ್ಟ್ರದ ಸಚಿವರ ಮೇಲೂ ಕ್ರಮ: ಆರಗ ಎಚ್ಚರಿಕೆ

SILENT SUNILA 1

ಅನೇಕ ಜನರು ನಮ್ಮ ಜೊತೆ ಫೋಟೋ ‌ತೆಗೆಸಿಕೊಳ್ತಾರೆ. ಕೊಡೊಲ್ಲ ಅಂದ್ರೆ ನಮಗೆ ದುರಹಂಕಾರ ಎಂದುಕೊಳ್ತಾರೆ. ಹೀಗಾಗಿ ಫೋಟೋ ತೆಗೆಸಿಕೊಳ್ತೀವಿ. ಹಾಗಂತ ಅವರು ನಮಗೆ ಪರಿಚಯ, ಬೆಂಬಲ ಇದೆ ಅಂತ ಅಲ್ಲ ಎಂದು ಸ್ಪಷ್ಟಪಡಿಸಿದರಲ್ಲದೇ, ರೌಡಿಗಳಿಂದ ವ್ಯವಸ್ಥೆ ಹಾಳಾಗಬಾರದು. ಅದಕ್ಕೆ ‌ನಾವು ಅವಕಾಶ ಮಾಡಿಕೊಡುವುದಿಲ್ಲ ಎಂದು ತಿಳಿಸಿದರು.

ಬಿಜೆಪಿ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ‌ನೀಡಿದ ಅವರು, ಡಿ.ಕೆ.ಶಿವಕುಮಾರ್ ಇಂತಹ ಮಾತು ಹೇಳೋದು ಅವರ ಬಾಯಲ್ಲಿ ಭಗವದ್ಗೀತೆ ಬಂದ ಹಾಗೆ. ಅವರು ಯಾರ ಜೊತೆ ಇದ್ದರು, ಯಾರನ್ನು ಸೇರಿಸಿಕೊಂಡು ರಾಜಕೀಯ ಮಾಡಿದ್ರು ಎಲ್ಲವೂ ಗೊತ್ತಿದೆ. ಅವರು ಇದರ ಬಗ್ಗೆ ಮಾತನಾಡೋದು ಸರಿಯಲ್ಲ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಸಿದ್ರಾಮುಲ್ಲಾ ಖಾನ್‌ ಬಿರುದು ನಾವಲ್ಲ, ಜನರೇ ನೀಡಿದ್ದಾರೆ – ಸಿದ್ದುಗೆ ಬಿಜೆಪಿ ಟಾಂಗ್‌

ಬಿಜೆಪಿ ಪಕ್ಷದ ಕಾರ್ಯಕ್ರಮವೊಂದರಲ್ಲಿ ರೌಡಿಶೀಟರ್‌ ಸೈಲೆಂಟ್‌ ಸುನಿಲ್‌ (Silent Sunil) ಭಾಗವಹಿಸಿದ್ದ ಫೋಟೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿತ್ತು. ಈ ವೇಳೆ ಬಿಜೆಪಿ ವಿರುದ್ಧ ಕಾಂಗ್ರೆಸ್‌ (Congress) ಟೀಕಾಪ್ರಹಾರ ನಡೆಸಿತ್ತು. ರೌಡಿಗಳನ್ನು ರಾಜಕೀಯಕ್ಕೆ ತರಲಾಗುತ್ತಿದೆ ಎಂದು ಟೀಕಿಸಿತ್ತು. ಇದು ಎರಡು ಪಕ್ಷಗಳ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *