ಬೆಂಗಳೂರು: ರಾಜ್ಯದಲ್ಲಿ ಸೈಬರ್ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಎಲ್ಲ ಸಾಧ್ಯವಾದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ತಿಳಿಸಿದರು.
ವಿಧಾನ ಪರಿಷತ್ (Vidhan Parishad) ಪ್ರಶ್ನೋತ್ತರ ಕಲಾಪದಲ್ಲಿ, ಬಿಜೆಪಿ (BJP) ಸದಸ್ಯೆ ಭಾರತಿ ಶೆಟ್ಟಿ (Bharati Shetty) ಪ್ರಶ್ನೆ ಕೇಳಿದರು. ರಾಜ್ಯದಲ್ಲಿ ಸೈಬರ್ ಕ್ರೈಮ್ ಕೇಸ್ ಹೆಚ್ಚಾಗುತ್ತಿದೆ. ನಾನೇ ಪರ್ಸ್ ಕಳೆದುಕೊಂಡಿದ್ದೆ. ಪರ್ಸ್ ಸಿಕ್ಕಿತು. ಆದರೆ ಈಗ ಕೋರ್ಟ್‌ಗೆ ಸುತ್ತಾಡುತ್ತಿದ್ದೇನೆ. ಹೀಗೆ ಆದರೆ ಹೇಗೆ? ಅಂತ ಪ್ರಶ್ನೆ ಮಾಡಿದರು. ಸಿಮ್ ಕಾರ್ಡ್ ಹೆಚ್ಚು ಹೆಚ್ಚು ಪಡೆದು ಮೋಸ ಮಾಡ್ತಿದ್ದಾರೆ. ಸಿಮ್ ಕಾರ್ಡ್ ಗೆ ಅಧಾರ್ ನಂಬರ್ ಜೋಡಿಸಬೇಕು ಅಂತ ಒತ್ತಾಯ ಮಾಡಿದರು.
Advertisement
Advertisement
ಇದಕ್ಕೆ ಸಚಿವ ಆರಗ ಜ್ಞಾನೇಂದ್ರ ಉತ್ತರ ನೀಡಿ, ಇವತ್ತು ಕ್ರೈಂ ರೀತಿ ನೀತಿ ಬದಲಾಗುತ್ತಿದೆ. ಮನೆಗೆ ನುಗ್ಗಿ ದರೋಡೆ ಮಾಡುತ್ತಿದ್ದರು, ಈಗ ಆ ತರಹ ಕಷ್ಟಪಡುವುದಿಲ್ಲ. ಆಧುನಿಕ ತಂತ್ರಜ್ಞಾನ ಅಪರಾಧ ಜಾಸ್ತಿ ಆಗ್ತಿದೆ. ಬುದ್ಧಿವಂತರು ಮಾಡುವ ದರೋಡೆ ಇದು. ಇದಕ್ಕೆ ಪೊಲೀಸರು ತಕ್ಕ ಕ್ರಮ ಕೈಗೊಳ್ತಿದ್ದಾರೆ ಎಂದರು.
Advertisement
ಸೈಬರ್ ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಹತ್ತು ಹಲವು ಉಪಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.ಆಧುನಿಕ ತಂತ್ರಜ್ಞಾನ ಗಳ ದುರುಪಯೋಗ ಪಡಿಸಿಕೊಂಡು ಸಾರ್ವಜನಿಕರನ್ನು ವಂಚಿಸುವ ಪ್ರಕರಣಗಳೂ ಹೆಚ್ಚುತ್ತಿದ್ದು, ಇದರ ವಿರುದ್ಧ ಇಲಾಖೆಯಲ್ಲಿ ಸೂಕ್ತ ಪ್ರತಿಬಂಧಕ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ನನ್ನ ಧರ್ಮಪತ್ನಿಯ ತೇಜೋವಧೆ ಮಾಡಿದ್ದಾರೆ – ರೂಪಾ ವಿರುದ್ಧ ದೂರು ಕೊಟ್ಟ ಸಿಂಧೂರಿ ಪತಿ
Advertisement
ರಾಜ್ಯದಲ್ಲಿ ಸೈಬರ್ ಅಪರಾಧಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಲು ಜಿಲ್ಲಾ ಕೇಂದ್ರಗಳಲ್ಲಿ ಸೈಬರ್ ಠಾಣೆಗಳನ್ನು ಸ್ಥಾಪಿಸಲಾಗಿದೆ. ನುರಿತ ಸಿಬ್ಬಂದಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯಗಳ ಸ್ಥಾಪನೆ ಸೇರಿದಂತೆ ಮೊಬೈಲ್ ಫೋನ್‌ಗೆಂದು ನೀಡಲಾಗುವ ಸಿಮ್ ವಿತರಣೆಯ ಬಗ್ಗೆ ಕಠಿಣ ನಿಯಮಗಳನ್ನೂ ವಿಧಿಸಲಾಗಿದೆ. ಮೊಬೈಲ್ ಸೇವೆಗಳನ್ನು ನೀಡುವ ಎಲ್ಲಾ ದೂರ ಸಂಪರ್ಕ ಸಂಸ್ಥೆಗಳಿಗೆ ಸಿಮ್ ಕಾರ್ಡ್ ವಿತರಣೆ ಪ್ರಕ್ರಿಯೆಯಲ್ಲಿ ನಿಯಮಗಳನ್ನು ಕಟ್ಟನಿಟ್ಟಾಗಿ ಪಾಲಿಸಬೇಕು ಎಂದು ನಿರ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ರೂಪಾ ಮೌದ್ಗಿಲ್ ವಿರುದ್ಧ ಡಿ.ಕೆ.ರವಿ ತಾಯಿ ಗೌರಮ್ಮ ಕಿಡಿ
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k