ಶಿವಮೊಗ್ಗ: ಕಾಂಗ್ರೆಸ್ ಪಕ್ಷ 100 – 125 ವರ್ಷದ ಪಕ್ಷ. ಸ್ವಾತಂತ್ರ್ಯ ಬಂದ ನಂತರ 65 ವರ್ಷ ಈ ದೇಶದಲ್ಲಿ ಆಳ್ವಿಕೆ ನಡೆಸಿ, ಈ ದೇಶದ ಎಲ್ಲಾ ಸಾಲವನ್ನು ಹೀರಿ ಹೀರಿ ರುಚಿ ಕಂಡುಕೊಂಡು ಬಿಟ್ಟಿದ್ದಾರೆ. ಈಗ ಸೋತು ಸುಣ್ಣ ಆಗಿದ್ದಾರೆ. ಇಡೀ ದೇಶದಲ್ಲಿ ಬ್ಯಾಟರಿ ಹಾಕಿಕೊಂಡು ಹುಡುಕಿದರೂ ಅವರು ಸಿಗುವುದಿಲ್ಲ. ಕಾಂಗ್ರೆಸ್ ಪಕ್ಷ ಒಂದು ರೀತಿಯ ಅತ್ತಪ್ತ ಆತ್ಮ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಜಿಲ್ಲೆಯ ಸಾಗರದ ಗಾಂಧಿ ಮೈದಾನದಲ್ಲಿ ನಡೆದ ವಿಧಾನ ಪರಿಷತ್ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್‍ನವರಿಗೆ ಬೇರೆ ವಿಷಯಗಳೇ ಇಲ್ಲ. ಹೀಗಾಗಿಯೇ ಬಿಜೆಪಿ ಸೇರಿದಂತೆ ಇತರೆ ಪಕ್ಷಗಳ ವಿರುದ್ಧ ಏನೇನೋ ಹೇಳಿಕೊಂಡು ಓಡಾಡುತ್ತಿದ್ದಾರೆ. ಮೊನ್ನೆ ಮೊನ್ನೆಯವರೆಗೆ ಬಿಟ್ ಕಾಯಿನ್ ಬಗ್ಗೆ ಮಾತನಾಡುತ್ತಿದ್ದರು. ಅದರಿಂದ ಏನು ಪ್ರಯೋಜನ ಆಗಲಿಲ್ಲ ಅದಕ್ಕೆ ಆ ವಿಷಯವನ್ನೆ ಬಿಟ್ಟು ಬಿಟ್ಟರು ಎಂದರು.
Advertisement
Advertisement
ಬಿಟ್‍ಕಾಯಿನ್ ಪ್ರಕರಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಪೊಲೀಸ್ ಅಧಿಕಾರಿಗಳ ಮೇಲೆ ವಿನಾಃ ಕಾರಣ ಆರೋಪ ಮಾಡಿದರು. ಶ್ರೀಕಿ ಎನ್ನುವ ಹ್ಯಾಕರ್, ಆತ ಕಾಂಗ್ರೆಸ್ ಮುಖಂಡರ ಮಕ್ಕಳ ಜೊತೆಗಿದ್ದ. 2018ರಲ್ಲಿ ಕಾಂಗ್ರೆಸ್ ಮುಖಂಡರ ಮಗನ ಜೊತೆಯಲ್ಲಿ ಯುಬಿ ಸಿಟಿಯಲ್ಲಿ ಇದ್ದವರು ಯಾರು? ಅಲ್ಲಿ ಹೊಡೆದಾಟ ಏಕೆ ನಡೆಯಿತು. ಆಗ ನಿಮ್ಮದೇ ಸರ್ಕಾರ ಇತ್ತು. ಆ ವೇಳೆ ಕೇಸ್ ದಾಖಲಿಸಿದ್ದೀರಿ, ಆದರೆ ವಿಚಾರಣೆ ನಡೆಸಲಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ.
Advertisement
Advertisement
2020ರಲ್ಲಿ ನಮ್ಮ ಸರ್ಕಾರಸ ಬಂದ ನಂತರ ಕಾಂಗ್ರೆಸ್‍ನ ಮಾಜಿ ಶಾಸಕರ ಮಗನ ಜೊತೆಗೆ ಡ್ರಗ್ಸ್ ಮಾಫಿಯಾದಲ್ಲಿ ಶ್ರೀಕಿ ಸಿಕ್ಕಿಕೊಂಡ. ಆತನನ್ನು ಬೇರೆ ರಾಷ್ಟ್ರಗಳಿಂದ ಮಾದಕ ವಸ್ತುಗಳನ್ನು ತರುವುದಕ್ಕೆ ಬಳಸಿಕೊಂಡರು. ಕಾಂಗ್ರೆಸ್‍ನ ಮಾಜಿ ಶಾಸಕರ ಮಗನ ಜೊತೆ ಗೋವಾದಲ್ಲಿ ಸಿಕ್ಕಿ ಹಾಕಿಕೊಂಡ. ಪೊಲೀಸರು ಗೋವಾದಿಂದ ಕರೆ ತಂದ ನಂತರ ಆತನನ್ನು ಬಾಯಿ ಬಿಡಿಸಿದ ವೇಳೆ ಆತ ಒಬ್ಬ ಹ್ಯಾಕರ್ ಎಂಬ ವಿಷಯ ಹೊರ ಬಂದಿತು ಎಂದರು. ಇದನ್ನೂ ಓದಿ: ಕಟೀಲ್ ಅಸಂಬದ್ಧ ಹೇಳಿಕೆ ನೀಡ್ತಾನೆ: ಏಕವಚನದಲ್ಲಿ ಸತೀಶ್ ಜಾರಕಿಹೊಳಿ ವಾಗ್ದಾಳಿ
ಜನವರಿಯಲ್ಲಿ ಯುವ ಕಾಂಗ್ರೆಸ್ ಚುನಾವಣೆ ನಡೆಯಿತು. ಆ ಚುನಾವಣೆಯಲ್ಲಿ ಬಹಳ ಮತಗಳು ಒಂದೇ ಕಡೆ ಹೋಯಿತು. ಚುನಾವಣೆಗೆ ಸ್ಪರ್ಧಿಸಿದ್ದವರು ಶ್ರೀಕಿಯನ್ನು ಜೊತೆಯಲ್ಲಿ ಇರಿಸಿಕೊಂಡು ಈ ರೀತಿ ಮಾಡಿದರು. ಯುವ ಕಾಂಗ್ರೆಸ್ ಕಾರ್ಯಕರ್ತರೇ ನನ್ನ ಬಳಿ ಬಂದು ಚುನಾವಣೆಯಲ್ಲಿ ಏನೋ ಆಗಿ ಹೋಗಿದೆ ತನಿಖೆ ನಡೆಸುವಂತೆ ಮನವಿ ಮಾಡಿದರು. ಈ ಬಗ್ಗೆ ಪೊಲೀಸರಿಗೆ ದೂರು ಕೊಡಿ ವಿಚಾರಣೆ ನಡೆಸುತ್ತೇನೆ ಎಂದು ತಿಳಿಸಿದ್ದೆ. ಆದರೆ ಇದುವರೆಗೂ ಯಾರೊಬ್ಬರು ದೂರು ಕೊಡಲಿಲ್ಲ ಎಂದರು. ಇದನ್ನೂ ಓದಿ: ಅಪ್ಪು ಚಿತ್ರದ ದೃಶ್ಯಗಳನ್ನ ವೇದಿಕೆಯಲ್ಲಿ ಮರುಸೃಷ್ಟಿದ ಕಿರುತರೆ ಕಲಾವಿದರ ತಂಡ
ಕಾಂಗ್ರೆಸ್‍ನವರಿಗೆ ಪ್ರಜಾಪ್ರಭುತ್ವದ ಮಹತ್ವ ಗೊತ್ತಿಲ್ಲ ಅಂತಾ ಕಾಣುತ್ತದೆ. ಹೀಗಾಗಿಯೇ ಚುನಾವಣೆಯಲ್ಲಿ ಸೋತವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರು. ನಂತರ ಖಾಜಿ ನ್ಯಾಯ ಮಾಡಿ, ಅವರು ಸ್ವಲ್ಪ ದಿನ ಇವರು ಸ್ವಲ್ಪ ದಿನ ಅಧ್ಯಕ್ಷರು ಅಂತಾ ತೀರ್ಮಾನ ಮಾಡಿದ್ದಾರೆ. ನಿಮ್ಮ ಚುನಾವಣೆಯೇ ಹ್ಯಾಕ್ ಆಗಿದೆ. ಶ್ರೀಕಿ ಅಂತಹವನನ್ನು ಜೊತೆಯಲ್ಲಿ ಇಟ್ಟುಕೊಂಡು ನಿಮ್ಮ ಕಾರ್ಯಕರ್ತರು ಏನೇನು ಮಾಡಿದ್ದಾರೆ ಅಂತಾ ಸ್ವಲ್ಪ ಗಮನಿಸಿ ಎಂದು ತಿಳಿಸಿದರು.