ತುಮಕೂರು: ಲೋಕಾಯುಕ್ತ ಸಂಸ್ಥೆಯ ಹಲ್ಲು ಕೀಳುವ ಮೂಲಕ ತನಿಖಾ ಸಂಸ್ಥೆಗಳನ್ನು ನಿಷ್ಕ್ರಿಯಗೊಳಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ವಿನಾಃಕಾರಣ ಸರ್ಕಾರದ ವಿರುದ್ಧ ಟೀಕೆಗಳನ್ನು ಮಾಡುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಕಿಡಿಕಾರಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಪಿಎಸ್‍ಐ ನೇಮಕಾತಿ ಪರೀಕ್ಷಾ ಅಕ್ರಮ ಕುರಿತು ಪ್ರತಿಕ್ರಿಯೆ ನೀಡಿದರು. ಎಲ್ಲಾ ಕಾಲದಲ್ಲೂ ಪರೀಕ್ಷೆಯಲ್ಲಿ ಅಕ್ರಮ ಆಗಿದೆ. ಆದರೆ ಈಗ ಹೊರಗೆ ಬರುತ್ತಿದೆ. ಒಂದು ಸಣ್ಣ ಸಾಕ್ಷ್ಯ ಸಿಕ್ಕಿದ ಕೇವಲ ಎರಡು ಗಂಟೆಯಲ್ಲಿ ಸಿಎಂ ಒಪ್ಪಿಗೆ ಪಡೆದು ತನಿಖೆ ಆರಂಭಿಸಿದ್ದೇವೆ ಎಂದರು.
Advertisement
Advertisement
ಸಿಒಡಿ ವಿಶೇಷ ತಂಡ ರಚನೆ ಮಾಡಿ ತುರ್ತಾಗಿ ತನಿಖೆ ಮಾಡುವಂತೆ ಆದೇಶಿಸಿದ್ದೇವೆ. ತನಿಖೆ ಯಾವ ರೀತಿಯ ಪ್ರಗತಿಯಲ್ಲಿದೆ ಅನ್ನುವ ಪ್ರತಿಕ್ಷಣದ ಮಾಹಿತಿ ಮಾಧ್ಯಮದಲ್ಲಿ ಬರುತ್ತಿದೆ. ಪರೀಕ್ಷೆಯಲ್ಲಿ ಭ್ರಷ್ಟಾಚಾರ ಹೊಸದೇನಲ್ಲ, ಆದರೆ ಈ ರೀತಿಯಲ್ಲಿ ಮುಂದಿನ ದಿನಗಳಲ್ಲಿ ಆಗಬಹುದು ಎಂಬ ರೀತಿಯಲ್ಲಿ ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂದರು. ಇದನ್ನೂ ಓದಿ: ಶಿವಸೇನೆಗೆ ಹಿಂದುತ್ವವನ್ನು ಕಲಿಸುವ ಅಗತ್ಯವಿಲ್ಲ: ಸಂಜಯ್ ರಾವತ್
Advertisement
ಹಿಂದೆ ಕಾಂಗ್ರೆಸ್ ಸರ್ಕಾರ ಇರುವಾಗ ನಾಲ್ಕು ಬಾರಿ ಪಿಯುಸಿ ಪ್ರಶ್ನೆ ಪತ್ರಿಕೆ ಲೀಕ್ ಆಗಿತ್ತು. ಅನೇಕ ಮಕ್ಕಳು ಆತ್ಮಹತ್ಯೆ ಮಾಡಿಕೊಂಡರು. ಕಾಂಗ್ರೆಸ್ ಆರೋಪ ಮಾಡುವ ಮೊದಲು ತಮ್ಮ ಅವಧಿಯನ್ನು ನೆನಪು ಮಾಡಿಕೊಳ್ಳಬೇಕು ಎಂದು ವಾಗ್ದಾಳಿ ನಡೆಸಿದರು.
Advertisement
ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ತನಿಖೆ ಮುಂದಕ್ಕೆ ಹೋಗಲೇ ಇಲ್ಲ. ಆದರೆ ನಾವು ಪಿಎಸ್‍ಐ ಪರೀಕ್ಷೆಯ ಅಕ್ರಮದಲ್ಲಿ ಭಾಗಿಯಾಗಿರುವವರನ್ನು ಯಾವುದೇ ಪಕ್ಷವೆಂದು ನೋಡದೇ ಆರೋಪಿಗಳನ್ನು ಅರೆಸ್ಟ್ ಮಾಡಿದ್ದೇವೆ. ಇನ್ನು ಮುಂದೆ ಅಕ್ರಮ ಮಾಡುವವರಿಗೆ ಮುಟ್ಟಿ ನೋಡಿಕೊಳ್ಳುವಂತೆ ಮಾಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಆರೋಗ್ಯಮೇಳದಲ್ಲಿ ಭಾಗವಹಿಸಿ ಆರೋಗ್ಯಕರ ಜೀವನ ನಿಮ್ಮದಾಗಿಸಿಕೊಳ್ಳಿ: ಸುಧಾಕರ್
ಅಕ್ರಮ ನಡೆದಿಲ್ಲ ಎಂದು ಪರಿಷತ್‍ನಲ್ಲಿ ನಾನು ಉತ್ತರ ಕೊಟ್ಟಿರುವುದು ನಿಜ. ಆಗ ನನಗೆ ಯಾವುದೇ ದಾಖಲಾತಿ ಸಿಕ್ಕಿರಲಿಲ್ಲ. ಯಾರೋ ಹೇಳ್ತಾರೆ ಎನ್ನುವ ಕಾರಣಕ್ಕೆ ಹೇಳುವುದಕ್ಕಾಗಲ್ಲ. ಯಾವಾಗ ನನಗೆ ಸಣ್ಣ ಸಾಕ್ಷಿಗಳು ದೊರೆತ ತಕ್ಷಣ ತನಿಖೆಗೆ ಆದೇಶಿಸಿದ್ದೇನೆ ಎಂದು ಮಾಹಿತಿ ನೀಡಿದರು.
545 ಜನ ಪಾಸಾದ ಅಭ್ಯರ್ಥಿಗಳು ಇದ್ದಾರೆ. ಅಷ್ಟು ಜನಕ್ಕೆ ನೋಟಿಸ್ ನೀಡಲಾಗಿದೆ. ಹಾಜರಾಗಿ ಓಎಮ್‍ಆರ್ ಶೀಟ್ ತೋರಿಸುವಂತೆ ನೋಟಿಸ್ ನೀಡಲಾಗಿದೆ. ಎಲ್ಲರನ್ನೂ ಅರೆಸ್ಟ್ ಮಾಡುವುದಕ್ಕೆ ಆಗುವುದಿಲ್ಲ. ಓಎಂಆರ್ ಶೀಟ್‍ನಲ್ಲಿ ಅನುಮಾನ ಬಂದಲ್ಲಿ ಅವರನ್ನು ಅಲ್ಲೇ ಕೂರಿಸಿಕೊಳ್ಳುತ್ತಾರೆ. ಯಾರ ಪ್ರಭಾವಕ್ಕೂ ಇಲ್ಲಿ ಮಣಿಯುವುದಿಲ್ಲ. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವ ನಿಟ್ಟಿನಲ್ಲಿ ಕಾನೂನಿಗೆ ಸೂಕ್ತ ತಿದ್ದುಪಡಿ ತರಲು ನಾವು ಸಿದ್ಧರಿದ್ದೇವೆ ಎಂದು ಭರವಸೆ ನೀಡಿದರು.