ಬೆಂಗಳೂರು: ಅಲ್ಪಸಂಖ್ಯಾತರ ವೋಟಿಗಾಗಿ ಕಾಂಗ್ರೆಸ್ (Congress) ನಾಯಕರು ಹಿಂದೂ ಧರ್ಮದ ವಿರುದ್ಧ ಮಾತನಾಡುತ್ತಾರೆ ಎಂದು ಕಾಂಗ್ರೆಸ್ ವಿರುದ್ಧ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಕಿಡಿಕಾರಿದರು.
ಸತೀಶ್ ಜಾರಕಿಹೊಳಿ (Satish Jarkiholi) ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಹಿಂದೂಗಳ ಬಗ್ಗೆ ಹೀಗೆ ಮಾತಾಡೋದು ಕಾಂಗ್ರೆಸ್ ಅಭ್ಯಾಸ. ಹಿಂದೂಗಳನ್ನು ಹೀನಾಯವಾಗಿ ತೆಗಳಿ ಅಲ್ಪಸಂಖ್ಯಾತ ವೋಟ್ ಬರುತ್ತೆ ಅಂತ ಹೀಗೆ ಮಾಡ್ತಾರೆ ಅಂತ ಕಿಡಿಕಾರಿದರು.
Advertisement
Advertisement
ಕಾಂಗ್ರೆಸ್ ಹಿಂದಿನಿಂದಲೂ ಹಿಂದುಗಳನ್ನ ಹೀಯಾಳಿಸಿಕೊಂಡು ಬಂದಿದೆ. ಈಗಲೂ ಅದನ್ನೆ ಮಾಡುತ್ತಿದೆ. ಕಾಂಗ್ರೆಸ್‌ನ ಕೆಲವು ನಾಯಕರು ಜಾರಕಿಹೊಳಿ ಹೇಳಿಕೆ ಸಮರ್ಥನೆ ಮಾಡಿಕೊಂಡಿದ್ದಾರೆ. ಕೆಲವರು ವಿರೋಧ ಮಾಡಿದ್ದಾರೆ. ಇದು ಕಾಂಗ್ರೆಸ್‌ನ ಗಿಮಿಕ್ ಅಷ್ಟೆ. ನೀ ಅತ್ತ ಹಾಗೆ ಮಾಡು ನಾನು ಸತ್ತ ಹಾಗೆ ಮಾಡ್ತೀನಿ ಅನ್ನೋದು ಕಾಂಗ್ರೆಸ್ ತಂತ್ರ. ಹಿಂದೂಗಳ ಬಗ್ಗೆ ಸಹಾನುಭೂತಿ ಇದೆ ಅನ್ನೋದಕ್ಕೆ ಜಾರಕಿಹೊಳಿ ಹೇಳಿಕೆಗೆ ವಿರೋಧ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
Advertisement
ಜಾತಿ ಒಡೆಯೋದು ಕಾಂಗ್ರೆಸ್ ಅವರ ಕೆಲಸ. ಟಿಪ್ಪು ಜಯಂತಿ ಮಾಡಿದರು. ಲಿಂಗಾಯತ ಧರ್ಮದ ಮೂಲಕ ಧರ್ಮದ ನಡುವೆ ಬೀಜ ಬಿತ್ತಿದ್ದರು. ಇದು ಕಾಂಗ್ರೆಸ್ ಚಾಳಿ. ಕೆಲ ಕಾಂಗ್ರೆಸ್ ನಾಯಕರು ಈ ಹೇಳಿಕೆ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಎಲೆಕ್ಷನ್ ಟೈಂಗೆ ಸರಿಯಾಗಿ ಮಾಡುತ್ತೀದ್ದಿರಾ ಶಬ್ಬಾಶ್ ಅಂತ ಜಾರಕಿಹೊಳಿಗೆ ಹೇಳ್ತಿದ್ದಾರೆ. ಕಾಂಗ್ರೆಸ್ ಅವರು ಇದನ್ನೇ ಮಾಡಲಿ ಜನ ಬುದ್ಧಿ ಕಲಿಸುತ್ತಾರೆ ಎಂದರು. ಇದನ್ನೂ ಓದಿ: ಕಾಂಗ್ರೆಸ್ ನಾಯಕರಿಗೆ ಹಿಂದೂ ಎಂಬ ಶಬ್ದವೇ ಅಲರ್ಜಿ: ಜಗದೀಶ್ ಶೆಟ್ಟರ್
Advertisement
ಇನ್ನು ಜಾರಕಿಹೊಳಿ ವಿರುದ್ಧ ಸುಮೋಟೋ ಕೇಸ್ ದಾಖಲು ಮಾಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾನು ಈ ಬಗ್ಗೆ ಪೊಲೀಸರಿಗೆ ಏನು ಹೇಳೊಲ್ಲ. ಪೊಲೀಸರು ಕಾನೂನು ಪ್ರಕಾರ ಕೆಲಸ ಮಾಡ್ತಾರೆ ಎಂದರು. ಇದನ್ನೂ ಓದಿ: ಹಿಂದೂಗಳ ಬಗ್ಗೆ ಹಗುರವಾಗಿ ಮಾತನಾಡಿದರೆ ದೊಡ್ಡವನಾಗಲ್ಲ: ಜಾರಕಿಹೊಳಿ ಕಿವಿ ಹಿಂಡಿದ ಯಡಿಯೂರಪ್ಪ